ಕ್ರೈಂದೇಶ-ವಿದೇಶವೈರಲ್ ನ್ಯೂಸ್

ಜ್ಯೋತಿಷಿಯ ಮಾತು ಕೇಳಿ ಪತ್ನಿ ಮತ್ತು 3 ಮಕ್ಕಳನ್ನು ಗುಂಡಿಕ್ಕಿ ಕೊಂದ ಭೂಪ..! ಮತ್ತೊಂದು ಮದುವೆಯಾಗುವ ವಿಚಾರಕ್ಕೆ ದಂಪತಿ ನಡುವೆ ಕಲಹ..!

ನ್ಯೂಸ್ ನಾಟೌಟ್: ಜ್ಯೋತಿಷಿಯ ಮಾತು ಕೇಳಿ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಮೂವರು ಮಕ್ಕಳನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ವಾರಾಣಸಿಯ ಭೇಲುಪುರ್ ​ನ ಭದೈನಿ ಪವರ್ ಹೌಸ್ ಬಳಿ ನಡೆದಿದೆ.

ಆರೋಪಿ ರಾಜೇಂದ್ರ ಇಂದು(ನ.5) ಮಧ್ಯಾಹ್ನ ತನ್ನ ಪತ್ನಿ ನೀತು (45) ಮತ್ತು ಮೂವರು ಮಕ್ಕಳಾದ ನವೇಂದ್ರ ಗುಪ್ತಾ (25), ಸುಬೇಂದ್ರ ಗುಪ್ತಾ (15) ಮತ್ತು ಮಗಳು ಗೌರಂಗಿ ಗುಪ್ತಾ (16) ಅವರನ್ನು ಗುಂಡಿಕ್ಕಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ನೆರೆಹೊರೆಯವರ ಪ್ರಕಾರ, ಆರೋಪಿಯು ತನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ನಿತ್ಯ ಜಗಳವಾಡುತ್ತಿದ್ದ. ಪಿತ್ರಾರ್ಜಿತ ಆಸ್ತಿ ಇದ್ದ ಕಾರಣ ಇವರಿಗೆ ಆರ್ಥಿಕ ಸಮಸ್ಯೆ ಕೂಡಾ ಇರಲಿಲ್ಲ. ಇದರ ಜೊತೆಗೆ ಆರೋಪಿ ಸುಮಾರು 7 ಮನೆಗಳ ಮಾಲೀಕನಾಗಿದ್ದ. ತಿಂಗಳಿಗೆ ಲಕ್ಷಾಂತರ ರೂಪಾಯಿ ಬಾಡಿಗೆ ಹಣ ಬರುತ್ತಿತ್ತು. ಆರೋಪಿಗೆ ನೀತು ಎಂಬಾಕೆ ಎರಡನೇ ಪತ್ನಿಯಾಗಿದ್ದು, ಸದ್ಯ ಮತ್ತೊಂದು ಮದುವೆಯಾಗುವ ವಿಚಾರವಾಗಿ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು.

ಇದಲ್ಲದೇ, ರಾಜೇಂದ್ರ ಗುಪ್ತಾ ಇತ್ತೀಚಿಗೆ ಜ್ಯೋತಿಷಿಯೊಬ್ಬನ ಪ್ರಭಾವಕ್ಕೊಳಗಾಗಿದ್ದ ಎನ್ನಲಾಗಿದೆ. ಪತ್ನಿ ನಿನ್ನ ಕೆಲಸಕ್ಕೆ ಅಡ್ಡಿಪಡಿಸುತ್ತಿದ್ದಾಳೆ ಎಂದು ಜ್ಯೋತಿಷಿ ಆರೋಪಿಗೆ ಹೇಳಿದ್ದ ಎನ್ನಲಾಗಿದೆ. ಈ ಮಾತು ಕೇಳಿ ಈತ ಕೃತ್ಯ ಎಸಗಿದ್ದಾನೆ ಎನ್ನಲಾಗಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.
22 ವರ್ಷಗಳ ಹಿಂದೆ ಆರೋಪಿ ರಾಜೇಂದ್ರ ತನ್ನ ಕಿರಿಯ ಸಹೋದರ ಕೃಷ್ಣ ಗುಪ್ತಾ ಮತ್ತು ಆತನ ಪತ್ನಿಯ ಕೊಲೆ ಪ್ರಕರಣದಲ್ಲಿ ಜೈಲು ಶಿಕ್ಷೆಯನ್ನು ಅನುಭವಿಸಿ 2004ರಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದ ಎಂದು ವರದಿ ತಿಳಿಸಿದೆ.

Click

https://newsnotout.com/2024/11/kannada-news-wikipedia-viral-news-supreme-court-central-govt/
https://newsnotout.com/2024/11/police-constable-kannada-news-viral-news-marriage-man/
https://newsnotout.com/2024/11/kannada-news-child-nomore-inside-the-car-which-was-locked/
https://newsnotout.com/2024/11/hd-kumaraswami-kannada-news-hd-kumaraswami-viral-news/
https://newsnotout.com/2024/11/tahashildar-office-belagavi-kannada-news-man-get-nomore/
https://newsnotout.com/2024/11/2-time-marriage-kananda-news-sunney-leon/

Related posts

ರಾಸಲೀಲೆ: ಯುವಕ-ಯುವತಿ ಪೊಲೀಸ್ ವಶಕ್ಕೆ

ತರಗತಿಯ ಕೊಠಡಿಯೊಳಗೆ ಆತ್ಮಹತ್ಯೆಗೆ ಯತ್ನಿಸಿದ ಪ್ರಾಧ್ಯಾಪಕಿ..! ಪ್ರಾಂಶುಪಾಲರಿಂದ ಶಿಕ್ಷಕಿಗೆ ಕಿರುಕುಳ ಆರೋಪ..!

ಭೀಕರ ಅಪಘಾತ, ಸ್ಥಳದಲ್ಲೇ ಎಂಟನೆ ತರಗತಿ ವಿದ್ಯಾರ್ಥಿ ಸಾವು