ಕ್ರೈಂ

ಆಸ್ತಿಯ ಆಸೆಗಾಗಿ ಕುಟುಂಬಸ್ಥರ ಮಾರಣ ಹೋಮ! 2 ಮಕ್ಕಳು ಸೇರಿ 4 ಮಂದಿಯ ಹತ್ಯೆಯ ಹಿಂದಿದೆ ರೋಚಕ ಸ್ಟೋರಿ!

328

ನ್ಯೂಸ್‌ ನಾಟೌಟ್‌: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರನ್ನು ಅವರ ಸಂಬಂಧಿಯೊಬ್ಬ ಕಡಿದು ಕೊಂದಿರುವ ಘಟನೆ ಒಡಿಶಾದ ಬರ್ಗಢ್ ಜಿಲ್ಲೆಯಲ್ಲಿ ನಡೆದಿದೆ.

ಸೋಮವಾರ ರಾತ್ರಿ ಭಟ್ಲಿ ಪೊಲೀಸ್ ಠಾಣೆ ವ್ಯಾಪ್ತಿಯ ಜಿಕಿಜಿಕಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆರೋಪಿ ಸಿಬಾ ಬಾಗ್ ತನ್ನ ಅಣ್ಣನ ಮನೆಗೆ ನುಗ್ಗಿ ಕಬ್ಬಿಣದ ಸರಳಿನಲ್ಲಿ ಹೊಡೆದು ಇಡೀ ಕುಟುಂಬವನ್ನು ಕೊಂದಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೃತರನ್ನು ಗುರುದೇವ್ ಬಾಗ್ (46), ಅವರ ಪತ್ನಿ ಸಿಬಗ್ರಿ (35) ಮತ್ತು ಅವರ ಮಕ್ಕಳಾದ ಚುಡಮಾಯಿ (15) ಮತ್ತು ಶ್ರಾವಣಿ (10) ಎಂದು ಗುರುತಿಸಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

See also  ಸುಳ್ಯದ ಬೆಟ್ಟಂಪಾಡಿಯಲ್ಲಿ ವ್ಯಕ್ತಿ ನೇಣುಬಿಗಿದು ಆತ್ಮಹತ್ಯೆ..! ಕಾರಣ ನಿಗೂಢ..!
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget