Latestರಾಜಕೀಯ

ವಿಧಾನಸಭೆಯೊಳಗೆ ಪಾನ್ ಮಸಾಲ ಅಗಿದು, ಉಗಿದು ಗಲೀಜು ಮಾಡಿದ ಶಾಸಕ!!ನೀವು ಉಗುಳಿರೋದನ್ನು ವಿಡಿಯೋನಲ್ಲಿ ನೋಡಿದ್ದೇನೆ ಎಂದು ಸ್ವಚ್ಛಗೊಳಿಸಿದ ಸ್ಪೀಕರ್‌!!ವಿಡಿಯೋ ವೈರಲ್

709
Spread the love

ನ್ಯೂಸ್‌ ನಾಟೌಟ್: ಸ್ವಚ್ಚತೆ ಅನ್ನೋದು ನಮ್ಮ ಮನಸ್ಸಲ್ಲೇ ಬರಬೇಕು, ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು ಅಥವಾ ಸ್ವಚ್ಚವಾಗಿದ್ರೆ ಮನಸ್ಸಿಗೂ ಒಳ್ಳೆಯದು. ನಾವು ಹೊರಗಡೆ ಹೋದಾಗ ನಿಮ್ಮ ಪರಿಸರವನ್ನು ಸ್ವಚ್ಚವಾಗಿ ಕಾಪಾಡಿಕೊಳ್ಳಿ, ಅಲ್ಲಲ್ಲಿ ಉಗುಳದಿರಿ ಅಂತೆಲ್ಲ ಬೋರ್ಡ್‌ಗಳನ್ನು ನೋಡಿರುತ್ತೇವೆ. ಆದರೆ ಇಲ್ಲೊಬ್ಬ ಶಾಸಕರೇ ಅದಕ್ಕೆ ತದ್ವಿರುದ್ದವಾಗಿ ನಡೆದುಕೊಂಡ ಘಟನೆ ಬಗ್ಗೆ ವರದಿಯಾಗಿದೆ. ಉತ್ತರ ಪ್ರದೇಶದ ವಿಧಾನಸಭೆಯಲ್ಲಿ ಈ ವಿಚಿತ್ರ ಪ್ರಸಂಗವೊಂದು ನಡೆದಿದೆ.

ಸ್ಪೀಕರ್‌ ಸತೀಶ್ ಮಹಾನಾ ಅವರು, ಕೆಲ ಸದಸ್ಯರು ಪಾನ್ ಮಸಾಲ ಸೇವಿಸಿದ ಬಳಿಕ ವಿಧಾನಸಭೆಯ ಸಭಾಂಗಣದಲ್ಲೇ ಉಗುಳಿರುವ (Spitting Pan Masala) ವಿಚಾರವನ್ನು ಪ್ರಸ್ತಾಪಿಸಿದರು. ಅಲ್ಲದೇ ಉಗುಳಿದ ಕಲೆಗಳನ್ನು ತಾವೇ ಸ್ವಚ್ಛಗೊಳಿಸಿರುವುದಾಗಿಯೂ ಹೇಳಿದರು.ಕಲಾಪ ಆರಂಭಕ್ಕೂ ಮುನ್ನವೇ ಮಾತನಾಡಿದ ಸ್ಪೀಕರ್‌, ಇಂದು ಬೆಳಗ್ಗೆ ಮಾನ್ಯ ಸದಸ್ಯರೊಬ್ಬರು ನಮ್ಮ ವಿಧಾನಸೌಧದ ಈ ಸಭಾಂಗಣದಲ್ಲಿ ಪಾನ್ ಮಸಾಲ ಸೇವಿಸಿದ ನಂತರ ಉಗುಳಿದ್ದಾರೆ ಎಂಬ ಮಾಹಿತಿ ಬಂತು. ಹಾಗಾಗಿ ನಾನಿಲ್ಲಿಗೆ ಬಂದು ಅದನ್ನು ಸ್ವಚ್ಛಗೊಳಿಸಿದೆ ಎಂದು ತಿಳಿಸಿದ್ದಾರೆ.ಸ್ಪೀಕರ್ ಈ ನಡೆಗೆ ಪ್ರಶಂಸೆಯ ಮಾತುಗಳು ಕೇಳಿ ಬಂದಿದೆ. ಆದರೆ ಶಾಸಕರ ವರ್ತನೆಯನ್ನು ಕೆಲವರು ದೂರಿದ್ದಾರೆ.

ಈ ಬಗ್ಗೆ ಮಾತನಾಡಿದ ಸ್ಪೀಕರ್‌ “ನಾನು ಉಗುಳಿದ ಶಾಸಕರನ್ನು ವಿಡಿಯೋನಲ್ಲಿ ನೋಡಿದ್ದೇನೆ. ಆದ್ರೆ ಯಾರನ್ನೂ ಅವಮಾನಿಸಲು ಬಯಸುವುದಿಲ್ಲ, ಹಾಗಾಗಿ ನಾನು ಅವರ ಹೆಸರನ್ನೂ ಪ್ರಸ್ತಾಪಿಸುವುದಿಲ್ಲ. ಇನ್ಮುಂದೆ ಯಾರಾದ್ರೂ ಈ ರೀತಿ ಮಾಡುವುದು ಕಂಡರೆ ಅದನ್ನು ತಡೆಯಬೇಕು ಅಂತ ನಾನು ಎಲ್ಲಾ ಸದಸ್ಯರಿಗೆ ಒತ್ತಾಯಿಸುತ್ತೇನೆ. ಈ ಸಭೆಯಲ್ಲಿ ಸ್ವಚ್ಛವಾಗಿಡುವುದು ನಮ್ಮ ಜವಾಬ್ದಾರಿ. ತಪ್ಪು ಮಾಡಿ ಪ್ರಶ್ನೆಯಲ್ಲಿರುವ ಶಾಸಕರು ಅವರಾಗಿಯೇ ಈ ತಪ್ಪು ಮಾಡಿದ್ದಾರೆಂದು ಹೇಳಿದ್ರೆ ಒಳ್ಳೆಯದು, ಇಲ್ಲದಿದ್ದರೆ ನಾನೇ ಅವರನ್ನು ಕರೆಯುತ್ತೇನೆ ಎಂದು ಎಚ್ಚರಿಕೆ ನೀಡಿದರು.

 

 

  Ad Widget   Ad Widget   Ad Widget