Latestರಾಜ್ಯ

ಸಾರ್ವಜನಿಕ ವೇದಿಕೆಯಲ್ಲಿ ಮುಖ್ಯಮಂತ್ರಿಯಿಂದ ಅವಮಾನಕ್ಕೊಳಗಾದ ಎಎಸ್‌ಪಿಗೆ ಬಡ್ತಿ

498

ನ್ಯೂಸ್ ನಾಟೌಟ್ : ಸಾರ್ವಜನಿಕ ವೇದಿಕೆಯಲ್ಲಿ ಮುಖ್ಯಮಂತ್ರಿಯಿಂದ ಅವಮಾನಕ್ಕೊಳಗಾಗಿ ಸ್ವಯಂ ನಿವೃತ್ತಿಗಾಗಿ ಅರ್ಜಿ ಸಲ್ಲಿಸಿದ್ದ ಎಎಸ್‌ಪಿ ನಾರಾಯಣ ಭರಮನಿ (Narayan Barmani) ಅವರನ್ನು ಬೆಳಗಾವಿ ಡಿಸಿಪಿಯಾಗಿ (Belagavi DCP) ನೇಮಿಸಿ ಸರ್ಕಾರ ವರ್ಗಾವಣೆ (Transfer) ಮಾಡಿದೆ.

ಸಾರ್ವಜನಿಕ ವೇದಿಕೆಯಲ್ಲೇ ಹೆಚ್ಚುವರಿ ಎಸ್‌ಪಿ ನಾರಾಯಣ ಭರಮನಿ ಅವರಿಗೆ ಸಿಎಂ ಸಿದ್ದರಾಮಯ್ಯ ಕಪಾಳಮೋಕ್ಷ ಮಾಡಲು ಮುಂದಾಗಿದ್ದರು. ಇದರಿಂದ ಭರಮನಿ ಅವರು ಸ್ವಯಂ ನಿವೃತ್ತಿಗಾಗಿ ಅರ್ಜಿ ಸಲ್ಲಿಸಿದ್ದರು. ಬಳಿಕ ಸರ್ಕಾರ ಅವರ ಮನವೊಲಿಸಿದೆ. ಇದೀಗ ಧಾರವಾಡ ಹೆಚ್ಚುವರಿ ಎಸ್‌ಪಿ ಹುದ್ದೆಯಿಂದ ಬೆಳಗಾವಿ ಕಾನೂನು ಸುವ್ಯವಸ್ಥೆ ಡಿಸಿಪಿಯಾಗಿ ವರ್ಗಾವಣೆ ಮಾಡಲಾಗಿದೆ.

ಇನ್ನೂ ಬೆಳಗಾವಿಗೆ ವರ್ಗಾವಣೆ ಕುರಿತು ಪ್ರತಿಕ್ರಿಯಿಸಿದ ನಾರಾಯಣ ಭರಮನಿ, ಸರ್ಕಾರ ಡಿಸಿಪಿ ಮಾಡಿ ವರ್ಗಾವಣೆ ಆದೇಶ ಬಂದಿದೆ. ಬೆಳಗಾವಿ ಡಿಸಿಪಿ ಮಾಡಿ ಸರ್ಕಾರ ಆದೇಶ ಮಾಡಿದೆ. ಬೆಳಗಾವಿ ನಗರದ ಕಾನೂನು ಸುವ್ಯವಸ್ಥೆ ನಿರ್ವಹಣೆ ಮಾಡಲು ನನಗೆ ಅವಕಾಶ ನೀಡಿದೆ. ಅದರ ಕಡೆ ಗಮನ ಕೊಡುತ್ತೇನೆ. ಹಿರಿಯ ಅಧಿಕಾರಿಗಳ, ಎಲ್ಲರ ಸಲಹೆ ಸೂಚನೆ ಮೇರೆಗೆ ನಾನು ಕೆಲಸ ಮಾಡುತ್ತೇನೆ. ಬೆಳಗಾವಿಯಲ್ಲಿ ಕೆಲಸ ಮಾಡಿದ ಅನುಭವ ಇದೆ. ಅದು ನನಗೆ ಅನುಕೂಲ ಆಗಲಿದೆ ಎಂದಿದ್ದಾರೆ.

See also  ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ 30 ಜನರಿದ್ದ KSRTC ಬಸ್..! ರಸ್ತೆಯಲ್ಲಿದ್ದ ಕಾರು, ಬೈಕ್‌ ಗಳು ಜಖಂ..!
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget