ಸುಳ್ಯ: ಮತಾಂತರಕ್ಕೆ ಒಳಗಾಗಿ ಮೋಸ ಹೋಗಿದ್ದ ಸುಳ್ಯದ ಮಹಿಳೆ ಆಸಿಯಾ ಈಗ ಇಬ್ರಾಹಿಂ ಖಲೀಲ್ ಕಟ್ಟೇಕಾರ್ ಜತೆಗೆ ಸಮ್ಮತಿಯ ವಿಚ್ಛೇದನಕ್ಕೆ ಮುಂದಾಗಿದ್ದಾರೆ. ಹಲವು ಹೋರಾಟಗಳನ್ನು ನಡೆಸಿದೆ. ಆದರೆ ಕಟ್ಟೇಕಾರ್ ಇಬ್ರಾಹಿಂ ಮತ್ತು ಆತನ ಮನೆಯವರನ್ನು ನನ್ನನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಹೀಗಾಗಿ ವಿಚ್ಛೇದನ ಪಡೆದು ನನ್ನ ಭವಿಷ್ಯದ ದಾರಿ ನೋಡಿಕೊಳ್ಳುವುದಕ್ಕೆ ನಿರ್ಧರಿಸಿದ್ದೇನೆ. ಪರಸ್ಪರ ಸಮ್ಮತಿಯಿಂದ ವಿಚ್ಛೇದನ ಪಡೆಯುತ್ತಿದ್ದೇವೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಸಿಯಾ ತಿಳಿಸಿದ್ದಾರೆ. ಕೇರಳದಲ್ಲಿ ನನ್ನ ಹಿಂದೂ ಕುಟುಂಬವಿದೆ. ಇಸ್ಲಾಂ ತೊರೆದು ಮನೆಗೆ ಬರುವುದಾದರೆ ಸೇರಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಆದರೆ ನಾನು ನನ್ನ ಮನೆಗೆ ಹೋಗುವುದಿಲ್ಲ. ಸುಳ್ಯದಲ್ಲಿಯೇ ಇದ್ದು ಸಮಾಜ ಸೇವೆಯಲ್ಲಿ ಮುಂದುವರಿಯುವುದಾಗಿ ತಿಳಿಸಿದ್ದಾರೆ. ಇದರೊಂದಿಗೆ ಬಹು ವರ್ಷಗಳ ಆಸಿಯಾ ಹೋರಾಟದ ಹಾದಿಗೆ ತೆರೆ ಬಿದ್ದಂತಾಗಿದೆ.