ಕ್ರೀಡೆ/ಸಿನಿಮಾಕ್ರೈಂಬೆಂಗಳೂರುವೈರಲ್ ನ್ಯೂಸ್ಸಿನಿಮಾ

ಅಶ್ವಿನಿ ಪುನೀತ್‌ರಾಜಕುಮಾರ್‌ ವಿರುದ್ಧ ಅವಹೇಳನಕಾರಿ ಪೋಸ್ಟ್..! ಆ ಪೋಸ್ಟ್ ನಲ್ಲಿ ಅಂತದ್ದೇನಿತ್ತು..?

248

ನ್ಯೂಸ್ ನಾಟೌಟ್: ನಕಲಿ ಖಾತೆ ಸೃಷ್ಟಿಸಿದ ಕಿಡಿಗೇಡಿಯೊಬ್ಬ ಅಶ್ವಿನಿ ಪುನೀತ್‌ರಾಜಕುಮಾರ್‌ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದು, ಅಪ್ಪು ಅಭಿಮಾನಿಗಳು ಗರಂ ಆಗಿದ್ದಾರೆ. ಅಲ್ಲದೆ ಇಂದು ಪೊಲೀಸ್ ಕಮೀಷನರ್ ಭೇಟಿಯಾಗಿ ದೂರು ನೀಡಲು ಮುಂದಾಗಿದ್ದಾರೆ ಎಂದು ವರದಿ ತಿಳಿಸಿದೆ. ಈ ಪೋಸ್ಟ್ ನಲ್ಲಿ ಆರ್‌ಸಿಬಿ ಸೋಲಿಗೆ ಅಶ್ವಿನಿ ಪುನೀತ್‌ರಾಜಕುಮಾರ್‌ ಕಾರಣ ಎಂದು ದೂರಲಾಗಿದೆ.

ಗಜಪಡೆ ಎಂಬ ಪೇಜ್ ಸೃಷ್ಟಿಸಿ ಅದರಲ್ಲಿ, ಅಶ್ವಿನಿ ಪುನೀತ್‌ರಾಜಕುಮಾರ್‌ ಅವರು ಆರ್‌ಸಿಬಿ ಸೋಲಿಗೆ ಕಾರಣ ಎಂದು ಹೇಳಲಾಗಿದೆ. ಈ ‘ಕಾರ್ಯಕ್ಕೆ ಮುತ್ತೈದೆಯರನ್ನು ಕರೆಯಬೇಕು. ಅದನ್ನು ಬಿಟ್ಟು ಗಂಡ ಇಲ್ಲದವರನ್ನು ಕರೆದಿದ್ದಾರೆ. ಇದು ಆರ್‌ಸಿಬಿ ಸೋಲಿಗೆ ಕಾರಣ’ ಎಂದು ಪೇಜ್‌ನಲ್ಲಿ ಬರೆಯಲಾಗಿದೆ. ಈ ಪೋಸ್ಟ್‌ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಪವರ್‌ ಸ್ಟಾರ್ ಅಪ್ಪು ಫ್ಯಾನ್ಸ್ ಆಕ್ರೋಶ ಹೊರಹಾಕಿದ್ದಾರೆ.

ಇತ್ತೀಚೆಗಷ್ಟೇ ಐಪಿಎಲ್ ಶುರುವಾಗಿದೆ. ಇದಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬ್ಯಾಂಗಲೋರ್ ಇದ್ದ ಹೆಸರನ್ನು ಬದಲಾವಣೆ ಮಾಡಲು, ಆರ್’ಸಿಬಿ ಅನ್ ಬಾಕ್ಸ್ ಇವೆಂಟ್ ಆಯೋಜನೆ ಮಾಡಿತ್ತು. ಕಾರ್ಯಕ್ರಮದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ಹೆಸರನ್ನು ಬದಲಿಸಲಾಗಿತ್ತು. ಇದಕ್ಕೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಸಹ ಅತಿಥಿಯಾಗಿ ತೆರಳಿದ್ದರು. ಈ ಹಿನ್ನೆಲೆಯಲ್ಲಿ ನಕಲಿ ಖಾತೆ ಸೃಷ್ಟಿಸಿ ಅಶ್ವಿನಿ ಪುನೀತ್ ರಾಜ್ ಕುಮಾರ್ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದಾನೆ ಕಿಡಿಗೇಡಿ. ಸದ್ಯ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಎಕ್ಸ್ ಖಾತೆಯಿಂದ ಅದನ್ನು ಡಿಲೀಟ್ ಮಾಡಲಾಗಿದೆ ಎಂದು ವರದಿ ತಿಳಿಸಿದೆ.

See also  ಅಸ್ಪೃಶ್ಯತೆ ಇನ್ನೂ ಜೀವಂತ..! ದೇವಾಲಯ ಪ್ರವೇಶಿದ್ದ ದಲಿತ, 20 ಜನರಿಂದ ಮಾರಣಾಂತಿಕ ಹಲ್ಲೆ!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget