ಕರಾವಳಿಪುತ್ತೂರುವೈರಲ್ ನ್ಯೂಸ್

ತಟ್ಟೆ ತೊಳೆಯುತ್ತಿದ್ದ ಬಾಲಕನಿಗೆ ತನ್ನ ಮೊಬೈಲ್ ನಂಬರ್ ಕೊಟ್ಟು ‘ಸಂಪರ್ಕಿಸು’ ಅಂತ ಹೇಳಿದ ಪುತ್ತೂರು ಶಾಸಕರು..! ಅಶೋಕ್ ರೈ ಸಿಂಪಲ್ ನಡೆಗೆ ಭಾರೀ ಮೆಚ್ಚುಗೆ

231

ನ್ಯೂಸ್ ನಾಟೌಟ್: ಜನ ಪರ ಧ್ವನಿಯಾಗಿ, ಕಷ್ಟ ಸುಖಗಳಿಗೆ ಜೊತೆಯಾಗಿ, ಹಲವಾರು ಮಂದಿ ನೊಂದವರ ಪಾಲಿಗೆ ಬೆಳಕಾಗಿರುವ ಪುತ್ತೂರು ಶಾಸಕ ಅಶೋಕ್ ರೈ ತಮ್ಮ ವಿಭಿನ್ನ ಕೆಲಸಗಳಿಂದಲೇ ಹೆಚ್ಚಿನ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ಅಶೋಕ್ ರೈ ಪ್ರತೀ ದಿನವೂ ಕೂಡ ಜನರ ನೋವು ನಲಿವುಗಳಿಗೆ ಸ್ಪಂದಿಸುತ್ತಲೇ ಇರುತ್ತಾರೆ. ಹೀಗಾಗಿಯೇ ಏನೋ ಶಾಸಕರ ಕಚೇರಿಯಲ್ಲಿ ದಿನ ನಿತ್ಯವೂ ಜನವೋ ಜನ.

ಹೌದು, ಮಾನವೀಯತೆ ಮತ್ತು ಕರ್ತವ್ಯದ ವಿಚಾರ ಬಂದಾಗ ಅಶೋಕ್ ರೈ ಅವರು ಕೇವಲ ಪುತ್ತೂರಿಗೆ ಮಾತ್ರ ಸೀಮಿತವಾಗಿಲ್ಲ. ಸೇವೆ ಮತ್ತು ಕರ್ತವ್ಯದ ವಿಷಯ ಬಂದಾಗ ಎಲ್ಲ ವರ್ಗದ ಜನರಿಗೆ ನಿಷ್ಕಲ್ಮಶ ಹೃದಯದಿಂದ ಸಹಾಯ ಮಾಡೋದನ್ನು ಶಾಸಕರಾಗುವುದಕ್ಕೂ ಮೊದಲೇ ರೂಢಿಸಿಕೊಂಡಿದ್ದರು. ಶಾಸಕರಾದ ಬಳಿಕವೂ ಅವರ ನೈಜ ಶೈಲಿಯನ್ನು ಅವರು ಬದಲಾಯಿಸಿಕೊಂಡಿಲ್ಲ ಅನ್ನೋದು ವಿಶೇಷ. ಇತ್ತೀಚೆಗೆ ಉಡುಪಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅಶೋಕ್ ರೈಗಳು ಭಾಗವಹಿಸಿದ್ದರು.

ಈ ವೇಳೆ ಭೋಜನದ ನಂತರ ತಟ್ಟೆ ಇಡುವ ಜಾಗಕ್ಕೆ ತೆರಳಿದ ಅಶೋಕ್ ರೈಗಳ ಕಣ್ಣಿಗೆ ಬಡ ಹುಡುಗನೊಬ್ಬ ತಟ್ಟೆಯನ್ನು ಶುಚಿಗೊಳಿಸುತ್ತಿರುವುದು ಗಮನಕ್ಕೆ ಬಂದಿದೆ. ತಕ್ಷಣ ಬಾಲಕನತ್ತ ತೆರಳಿದ ಶಾಸಕರು ಆತನ ಮನೆಯ ಬಗ್ಗೆ ವಿಚಾರಿಸಿದ್ದಾರೆ. ‘ನಿನಗೆ ಕಷ್ಟ ಎದುರಾದಾಗ ನನ್ನ ಬಳಿ ಬಾ, ನಿನ್ನ ಕಲಿಕೆಗೆ ಅಗತ್ಯ ನೆರವು ಬೇಕಿದ್ದಲ್ಲಿ ಸಂಪರ್ಕಿಸು’ ಅಂತ ಹೇಳಿ ತನ್ನ ಮೊಬೈಲ್ ಸಂಖ್ಯೆಯನ್ನು ಬಾಲಕನಿಗೆ ನೀಡಿದ್ದಾರೆ. ಅಶೋಕ್ ರೈಗಳ ಈ ಸಿಂಪಲ್ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

See also  ಕತ್ತೆಗಳನ್ನು ಮಾರಿ ರೈತರಿಗೆ ಲಕ್ಷಾಂತರ ರೂಪಾಯಿ ಮೋಸ ಮಾಡಿದ ಕಂಪನಿ..! 300ಕ್ಕೂ ಅಧಿಕ ಅನ್ನದಾತರಿಗೆ ಆತಂಕ..!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget