ಕರಾವಳಿಪುತ್ತೂರುರಾಜಕೀಯ

ಬಡವರ ಸೇವೆಯಿಂದ ನೆಮ್ಮದಿ : ಅಶೋಕ್‌ ರೈ

287

ನ್ಯೂಸ್ ನಾಟೌಟ್ ಪುತ್ತೂರು: ಬಡವರಿಗೆ ಸಹಾಯ ಮಾಡಿದರೆ ಅವರು ಸದಾ ಕಾಲ ತಮ್ಮನ್ನು ನೆನಪಲ್ಲಿಟ್ಟುಕೊಳ್ಳುತ್ತಾರೆ. ಅದು ಈಗ ಆಶೀರ್ವಾದ ರೂಪದಲ್ಲಿ ಬರುತ್ತಿರುವುದು ಮನಸ್ಸಿಗೆ ಸಂತಸ ಮತ್ತು ನೆಮ್ಮದಿ ತಂದಿದೆ ಎಂದು ಪುತ್ತೂರು ಕಾಂಗ್ರೆಸ್‌ ಅಭ್ಯರ್ಥಿ ಅಶೋಕ್‌ ರೈ ಹೇಳಿದರು.

ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಮತಯಾಚನೆ ಸಂದರ್ಭ ಮಾತನಾಡಿದರು.

ಚುನಾವಣಾ ಪ್ರಚಾರ ಭಾಷಣ ಮುಗಿಸಿ ವೇದಿಕೆಯಿಂದ ಇಳಿಯುತ್ತಿದ್ದಂತೆ ಈ ಹಿಂದೆ ತಮ್ಮ ಟ್ರಸ್ಟ್‌ನಿಂದ ಸಹಾಯ ಪಡೆದ ಅದೆಷ್ಟೋ ಮಂದಿ ಅಶೋಕ ರೈ ಅವರ ಉಪಕಾರವನ್ನು ಸ್ಮರಿಸಿದರು. ಅಶೋಕ ರೈ 12 ವರ್ಷಗಳಿಂದ ತಮ್ಮ ಟ್ರಸ್ಟ್‌ ಮೂಲಕ ಸಾವಿರಾರು ಬಡ ಕುಟುಂಬಗಳಿಗೆ ಬೇರೆ ಬೇರೆ ರೀತಿಯಲ್ಲಿ ಸಹಾಯ ಮಾಡಿದ್ದರು. ಇವರಿಂದ ಸಹಾಯ ಪಡೆದ ಕುಟುಂಬದ ಮಹಿಳೆಯರು ಅಶೋಕ ರೈ ಅವರಿಗೆ ಕೃತಜ್ಞತೆ ಸಲ್ಲಿಸಿ ಆತ್ಮವಿಶ್ವಾಸ ತುಂಬಿ ಚುನಾವಣೆಯಲ್ಲಿ ಗೆದ್ದು ಬರಲಿ ಎಂದು ಹಾರೈಸಿದರು.

See also  ಸುಳ್ಯ: ಚಲಿಸುತ್ತಿದ್ದ ಓಮಿನಿ ಕಾರು ಪಲ್ಟಿ, ಚಾಲಕನಿಗೆ ಗಾಯ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget