ಕರಾವಳಿಕಾಸರಗೋಡುಪುತ್ತೂರು

‘ನಾನು ಎಂದೂ ಲಂಚಕ್ಕಾಗಿ ಬೇಡಿಕೆ ಇಟ್ಟವಳಲ್ಲ, ಜನರ ಕಷ್ಟಗಳಿಗೆ ಸ್ಪಂದಿಸಿದವಳು’

318

ನ್ಯೂಸ್ ನಾಟೌಟ್ : ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಆಶಾ ತಿಮ್ಮಪ್ಪ ಅವರು ‘ನ್ಯೂಸ್ ನಾಟೌಟ್’ ನೇರ ಸಂದರ್ಶನದಲ್ಲಿ ತಮ್ಮ ಮನದ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಪುತ್ತೂರಿನಿಂದ ನಮ್ಮ ಪ್ರತಿನಿಧಿ ರಾಜೇಶ್ ರೈ ನಡೆಸಿರುವ ಸಂದರ್ಶನದ ಪೂರ್ಣ ಪಾಠ ಇಲ್ಲಿದೆ ಓದಿ.

  • ಇಡೀ ವಿಶ್ವದ ನಾಯಕ ಮೋದಿ ಅನ್ನೋದು ಅಭಿಮಾನಿಗಳ ಮಾತು, ಬ್ರಹ್ಮಾಂಡದ ನಾಯಕ ಪುತ್ತೂರಿನ ಮಹಾಲಿಂಗೇಶ್ವರ ಸ್ವಾಮಿ, ಆ ದೇವರ ನಂಬುವ ನಿಮ್ಮ ಎದುರಿಗೆ ಹತ್ತು ಹದಿನೈದು ಮಂದಿಯ ಹೆಸರು ಹೋಗಿದ್ದರೂ ನಿಮ್ಮ ಹೆಸರೇ ಅಂತಿಮವಾಗಿ ಆಯ್ಕೆಯಾಗಿದ್ದು ಹೇಗೆ?

ನಾನು ಹುಟ್ಟಿನಿಂದಲೇ ಸಂಘ ಪರಿವಾರದ ಹಿನ್ನೆಲೆಯಿಂದಲೇ ಬಂದವಳು. ನಗರ ಪಂಚಾಯತ್ , ಜಿಲ್ಲಾ ಪಂಚಾಯತ್ ನಲ್ಲಿ ಯಶಸ್ವಿಯಾಗಿ ಕೆಲಸ ಮಾಡಿದ್ದೇವೆ. ನಾಲ್ಕು ಅವಧಿಯಲ್ಲಿ ಜನ ಪ್ರತಿನಿಧಿಯಾಗಿ ಕೆಲಸ ಮಾಡಿದ್ದೇನೆ. ಜನ ಮೆಚ್ಚುವ ರೀತಿಯಲ್ಲಿ ಕೆಲಸ ನಿರ್ವಹಿಸಿದ್ದೇನೆ. ನಾನು ಎಂದೂ ಲಂಚಕ್ಕಾಗಿ ಬೇಡಿಕೆ ಇಟ್ಟವಳಲ್ಲ. ಈ ಹಿನ್ನೆಲೆಯಲ್ಲಿ ನನಗೆ ಅವಕಾಶ ಒದಗಿ ಬಂದಿರಬಹುದು ಅನ್ನುವುದು ನನ್ನ ನಂಬಿಕೆಯಾಗಿದೆ.

  • ಅವಕಾಶ ನಿಮ್ಮನ್ನು ಅರಸಿಕೊಂಡು ಬಂತಾ? ಅಥವಾ ನೀವೇ ಅದರ ಹಿಂದೆ ಹೋದ್ರಾ?

ಖಂಡಿತ ಇಲ್ಲ. ಈ ಕ್ಷಣದವರೆಗೂ ಸಂಜೀವ ಮಠಂದೂರು ಅವರಿಗೆ ಟಿಕೇಟ್ ಸಿಗಬೇಕು ಅನ್ನುವುದನ್ನು ನಾನು ಬಯಸಿದ್ದೆ.  ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಅವರ ಜತೆ ಹದಿನೈದು ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದಿದ್ದೇನೆ. ಆ ಸಂದರ್ಭದಲ್ಲಿ ಅವರ ಜತೆ ಎಂದೂ ನನಗೆ ಭಿನ್ನಾಭಿಪ್ರಾಯ ಬಂದಿಲ್ಲ, ಈಗ ಸಂಜೀವಣ್ಣನ ಮೇಲೆ ಆರೋಪ ಬಂದಿದೆ. ಆದರೆ ನಾನು ಅದನ್ನು ನಂಬುವುದಿಲ್ಲ. ಪಕ್ಷ ನನಗೆ ಅವಕಾಶ ಕೊಟ್ಟಿದೆ. ಮುಂದಿನ 5 ವರ್ಷದಲ್ಲಿ ನನಗೆ ಏಜ್ ಭಾರ ಆಗುತ್ತದೆ. ಈ ಹಿನ್ನೆಲೆಯಲ್ಲಿ ಟಿಕೆಟ್ ಕೊಟ್ಟಿದ್ದಾರೋ ಗೊತ್ತಿಲ್ಲ. ಪಕ್ಷ ಕೊಟ್ಟ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುವ ವಿಶ್ವಾಸವಿದೆ.

  • ಜನರ ಸೇವೆ ಮಾಡಬೇಕು ಅನ್ನುವ ಕನಸನ್ನು ಎಂದಾದರೂ ಕಂಡಿದ್ರಾ? ಅಥವಾ ರಾಜಕೀಯಕ್ಕೆ ನೀವು ಬಂದಿದ್ದು ಆಕಸ್ಮಿಕವಾ?

ನನ್ನ ತಾಯಿ ಅಂದಿನ ದಿನದಲ್ಲಿ ಬಿಜೆಪಿ  ಮಂಡಲ ಸಮಿತಿ ಅಧ್ಯಕ್ಷರಾಗಿದ್ದರು. ನನ್ನ ತಾಯಿಯೇ ನನಗೆ ಸ್ಫೂರ್ತಿ. ನಾನು ಅವರ ಜತೆ ಏಳನೇ ತರಗತಿಯಲ್ಲಿ ಇದ್ದಾಗಲೇ ಫೀಲ್ಡ್ ಗೆ ಹೋಗುತ್ತಿದ್ದ. ನಮ್ಮ ಮನೆಯೇ ಆರ್ ಎಸ್ ಎಸ್ ಸಂಘದ ಮನೆಯಾಗಿತ್ತು. ನಮ್ಮ ಸಹೋದರ ಕೂಡ ತುರ್ತು ಸಂದರ್ಭದಲ್ಲಿ ಜೈಲಿಗೆ ಹೋಗಿದ್ರು. ರಾಜಕೀಯ ನಮ್ಮ ಕುಟುಂಬದ ರಕ್ತದಲ್ಲೇ ಬಂದಿದೆ.

  • ಅವಕಾಶವನ್ನು ನೀವು ಯಾವ ರೀತಿಯಲ್ಲಿ ನಿಭಾಯಿಸುತ್ತೀರಿ?

ದೊಡ್ಡದೊಂದು ಜವಾಬ್ದಾರಿ ನನ್ನ ಮುಂದಿದೆ. ಪಕ್ಷದ ವರಿಷ್ಠರು ನೀಡಿದ ಹೊಣೆಯನ್ನು ಹೇಗೆ ನಿಭಾಯಿಸುತ್ತೇನೆ ಅನ್ನುವುದು ಗೊತ್ತಿಲ್ಲ. ಒಂದಂತೂ ನಿಜ. ಆತ್ಮವಿಶ್ವಾಸದಿಂದ ಮುಂದಿನ ಕೆಲಸವನ್ನು ಮಾಡುತ್ತೇನೆ. ಗೆಲುವು ನನ್ನದೇ ಅನ್ನುವ ರೀತಿಯಲ್ಲಿ ಕೆಲಸ ಮಾಡುತ್ತೇನೆ. ಪಕ್ಷದ ಹೆಸರಿಗೆ ಕಳಂಕ ಬಾರದಂತೆ ನಾನು ನಡೆದುಕೊಳ್ಳುತ್ತೇನೆ.

  • ನಿಮಗೆ ಟಿಕೇಟ್ ಸಿಕ್ಕಿರುವುದರ ಹಿಂದೆ ಯಾರ ಶ್ರಮವಿದೆ?
See also  ಕರಾವಳಿಯ ಪ್ರತಿಭಾವಂತ ಕ್ರೀಡಾಪಟುಗಳಿಗೆ ಸುವರ್ಣಾವಕಾಶ, ಕ್ರೀಡಾಪಟುಗಳಿಂದ ನಗದು ಬಹುಮಾನಕ್ಕೆ ಅರ್ಜಿ ಆಹ್ವಾನ

ನನಗೆ ಟಿಕೇಟ್ ಸಿಕ್ಕಿರುವುದರ ಹಿಂದೆ ನನ್ನ ಪ್ರಾಮಾಣಿಕತನದ ಶ್ರಮವಿದೆ. ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ಅದನ್ನು ಪಕ್ಷ ಗುರುತಿಸಿದೆ. ಬಿಜೆಪಿ ಪಕ್ಷದಲ್ಲಿ ಮಾತ್ರ ಇಂತಹ ಗುರುತಿಸುವ ಸಂಸ್ಕೃತಿ ಇದೆ ಅನ್ನುವುದನ್ನು ಹೆಮ್ಮೆಯಿಂದ ಹೇಳುತ್ತೇನೆ.

  • ನೀವು ಗೆದ್ದರೆ ಜನರ ಕಷ್ಟಗಳಿಗೆ ಹೇಗೆ ಸ್ಪಂದಿಸುತ್ತೀರಿ..?

ನನಗೆ ಆತ್ಮ ತೃಪ್ತಿ ಸಿಗುವ ಕೆಲಸಗಳನ್ನೇ ಮಾಡುವುದಕ್ಕೆ ಇಷ್ಟ ಪಡುತ್ತೇನೆ. ನನ್ನಿಂದ ನಾಲ್ಕು ಜನರಿಗೆ ಒಳ್ಳೆಯದಾದ್ರೆ ಅಷ್ಟೇ ಸಾಕು. ಅವರ ಸಂತೋಷದಲ್ಲೇ ನಾನು ಸಂತೋಷ ಕಾಣುತ್ತೇನೆ.

  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget