ದೇಶ-ವಿದೇಶರಾಜಕೀಯ

ಕೇಜ್ರಿವಾಲ್‌ ಬಂಧನ ಪ್ರಕರಣ: ಕುತೂಹಲ ಮೂಡಿಸಿದ ಅಮೆರಿಕಾ, ಜರ್ಮನಿ ಮತ್ತು ವಿಶ್ವ ಸಂಸ್ಥೆಯ ಪ್ರತಿಕ್ರಿಯೆ..! ವಿಶ್ವ ಸಂಸ್ಥೆ ವಕ್ತಾರ ಹೇಳಿದ್ದೇನು..?

222

ನ್ಯೂಸ್ ನಾಟೌಟ್: ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಬಂಧನದ ಕುರಿತು ಅಮೆರಿಕಾ ಮತ್ತು ಜರ್ಮನಿಯ ಹೇಳಿಕೆಗಳಿಂದ ಉದ್ಭವಿಸಿರುವ ರಾಜತಾಂತ್ರಿಕ ಉದ್ವಿಗ್ನತೆಯ ನಡುವೆ ವಿಶ್ವ ಸಂಸ್ಥೆಯ ಮಹಾ ಕಾರ್ಯದರ್ಶಿಯೂ ಪ್ರತಿಕ್ರಿಯಿಸಿದ್ದು ಈಗ ಭಾರಿ ಚರ್ಚೆಗೆ ಕಾರಣವಾಗಿದೆ. ವಿಶ್ವಸಂಸ್ಥೆಯ ಕಾರ್ಯದರ್ಶಿ ಆಂಟೋನಿಯೋ ಗುಟರೆಸ್‌ ವಕ್ತಾರೆ ಸ್ಟಿಫಾನಿ ದುಜರ್ರಿಕ್, ಚುನಾವಣೆಗಳು ನಡೆಯಲಿರುವ ಭಾರತ ಅಥವಾ ಯಾವುದೇ ದೇಶದಲ್ಲಿ ಜನರ ರಾಜಕೀಯ ಮತ್ತು ನಾಗರಿಕ ಹಕ್ಕುಗಳನ್ನು ರಕ್ಷಿಸಲಾಗುವುದು ಎಂದು ಹೇಳಿದ್ದಾರೆ. ಕೇಜ್ರಿವಾಲ್‌ ರನ್ನು ಈಡಿ ಬಂಧಿಸಿರುವುದು ಹಾಗೂ ಪ್ರಮುಖ ವಿಪಕ್ಷವಾದ ಕಾಂಗ್ರೆಸ್‌ನ ಬ್ಯಾಂಕ್‌ ಖಾತೆಗಳನ್ನು ಸ್ಥಗಿತಗೊಳಿಸಿರುವ ಕುರಿತಂತೆಯೂ ಪ್ರತಿಕ್ರಿಯಿಸಿದ್ದಾರೆ.

“ಚುನಾವಣೆ ನಡೆಯುವ ಯಾವುದೇ ದೇಶದಂತೆ ಭಾರತದಲ್ಲೂ ರಾಜಕೀಯ ಮತ್ತು ನಾಗರಿಕ ಹಕ್ಕುಗಳು ಸೇರಿದಂತೆ ಎಲ್ಲರ ಹಕ್ಕುಗಳನ್ನು ರಕ್ಷಿಸಲಾಗುವುದು. ಎಲ್ಲರೂ ಸ್ವತಂತ್ರ ಮತ್ತು ನ್ಯಾಯಯುತ ವಾತಾವರಣದಲ್ಲಿ ಮತದಾನ ಮಾಡಲು ಸಾಧ್ಯವಾಗಬೇಕೆಂದು ಆಶಿಸುತ್ತೇವೆ,” ಎಂದು ಅಭಿಪ್ರಾಯಪಟ್ಟಿದ್ದಾರೆ. ಬುಧವಾರ ಮಾರ್ಚ್ ೨೭ ರಂದು, ಕೇಜ್ರಿವಾಲ್ ಬಂಧನದ ಕುರಿತು ಟೀಕೆಗಳನ್ನು ಪ್ರತಿಭಟಿಸಲು ಭಾರತವು ಅಮೆರಿಕದ ಹಿರಿಯ ರಾಯಭಾರಿಯನ್ನು ಕರೆಸಿದ ಕೆಲವೇ ಗಂಟೆಗಳ ನಂತರ, ವಾಷಿಂಗ್ಟನ್ ನ್ಯಾಯಯುತ, ಪಾರದರ್ಶಕ, ಸಮಯೋಚಿತ ಕಾನೂನು ಪ್ರಕ್ರಿಯೆಗಳನ್ನು ಉತ್ತೇಜಿಸುವ ತನ್ನ ಹೇಳಿಕೆಗೆ ಬದ್ಧ ಎಂದು ಪುನರುಚ್ಚರಿಸಿತು. ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಕೇಜ್ರಿವಾಲ್ ರನ್ನು ಬಂಧಿಸಿತ್ತು.

See also  Karnataka Budget 2023 : ಮದ್ಯಪಾನ ಪ್ರಿಯರಿಗೆ ರಾಜ್ಯ ಬಜೆಟ್‌ನಲ್ಲಿ CM ಸಿದ್ದು ಕೊಟ್ರು ಭರ್ಜರಿ ಶಾಕ್..! ಅಷ್ಟಕ್ಕೂ ರೇಟ್‌ ಹೆಚ್ಚಾಗಿದ್ದೆಷ್ಟು ಗೊತ್ತಾ..?
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget