ಕರಾವಳಿಪುತ್ತೂರು

ಮೊಬೈಲ್‌ನಲ್ಲೆಲ್ಲ ಪುತ್ತೂರಿಗೆ ಪುತ್ತಿಲ..! ಪುತ್ತಿಲ ಬೆಂಬಲಿತ ಹಿಂದೂ ಕಾರ್ಯಕರ್ತರ ವೈರಲ್‌ ಕ್ಯಾಂಪೆನ್

282

ನ್ಯೂಸ್ ನಾಟೌಟ್ : ಪುತ್ತೂರು ವಿಧಾನ ಸಭಾ ಕ್ಷೇತ್ರ ದಿನದಿಂದ ದಿನಕ್ಕೆ ರಂಗೇರುತ್ತಿದೆ. ತ್ರಿಕೋನ ಸ್ಪರ್ಧೆಯಲ್ಲಿರುವ ಕ್ಷೇತ್ರದಲ್ಲಿ ಯಾರಿಗೆ ಗೆಲುವು ಸಿಗಬಹುದು ಅನ್ನುವುದೇ ದೊಡ್ಡ ಕುತೂಹಲವಾಗಿದೆ. ಸಾಮಾನ್ಯವಾಗಿ ಬಿಜೆಪಿ, ಕಾಂಗ್ರೆಸ್ ಎರಡೇ ಫೈಟ್ ಇರುವ ಕ್ಷೇತ್ರದಲ್ಲಿ ಇದೀಗ ಪಕ್ಷೇತರ ಅಭ್ಯರ್ಥಿಯಾಗಿ ಗರ್ಜಿಸುತ್ತಿರುವ ಅರುಣ್ ಕುಮಾರ್ ಪುತ್ತಿಲ ಈ ಸಲ ಕಪ್ ನಮ್ಮದೇ ಎಂದು ಬೀಗುತ್ತಿದ್ದಾರೆ.

ಪುತ್ತಿಲ ಬೆಂಬಲಿತ ಹಿಂದೂ ಕಾರ್ಯಕರ್ತರು ಕೂಡ ಅಷ್ಟೇ ಉತ್ಸಾಹದಿಂದ ಪುತ್ತಿಲ ಪರ ಪ್ರಚಾರಕ್ಕೆ ಮುಂದಾಗಿದ್ದಾರೆ. ಇದೀಗ ಪುತ್ತೂರಿನ ಹಲವು ಯುವಕರ ಮೊಬೈಲ್ ಹಿಂದೆ ಅರುಣ್ ಪುತ್ತಿಲ ಸ್ಟಿಕ್ಕರ್ ಕ್ಯಾಂಪೆನ್ ಶುರುವಾಗಿದೆ.
ಮೊಬೈಲ್‌ ಹಿಂಬದಿಯಲ್ಲಿ ಪುತ್ತೂರಿಗೆ ಪುತ್ತಿಲ ಅನ್ನುವ ಸ್ಟಿಕ್ಕರ್ ಅಂಟಿಸಲಾಗುತ್ತಿದ್ದು ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಸಲ ಬಿಜೆಪಿಯಿಂದ ಆಶಾ ತಿಮ್ಮಪ್ಪ, ಕಾಂಗ್ರೆಸ್‌ನಿಂದ ಅಶೋಕ್ ರೈ ಸ್ಪರ್ಧೆ ಮಾಡುತ್ತಿದ್ದಾರೆ. ಇವರ ನಡುವೆ ಪುತ್ತಿಲ ಹೆಸರು ಜೋರಾಗಿ ಸದ್ದು ಮಾಡುತ್ತಿದ್ದು ಪುತ್ತಿಲ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ಪುತ್ತೂರಿನಲ್ಲಿ ಇತಿಹಾಸ ಸೃಷ್ಟಿಸಲು ತುದಿಗಾಲಲ್ಲಿ ನಿಂತಿದ್ದಾರೆ.

See also  ಕಾಸರಗೋಡು: ಅಣಕು ಮತದಾನದ ವೇಳೆ EVM ನ ಯಾವ ಬಟನ್ ಒತ್ತಿದರೂ ಬಿಜೆಪಿಗೇ ಮತ..! LDF ಗಂಭೀರ ಆರೋಪ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget