ಉಪ್ಪಿನಂಗಡಿಕರಾವಳಿಕ್ರೈಂಪುತ್ತೂರುಮಂಗಳೂರುರಾಜಕೀಯ

ಅರುಣ್ ಕುಮಾರ್ ಪುತ್ತಿಲ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಬೆಂಗಳೂರು ಹೊಟೇಲ್‌ ನಲ್ಲಿ ಸ್ಥಳ ಮಹಜರು..! ಈ ಬಗ್ಗೆ ಶಾಸಕ ಅಶೋಕ್‌ ಕುಮಾರ್‌ ರೈ ಹೇಳಿದ್ದೇನು..?

258

ನ್ಯೂಸ್ ನಾಟೌಟ್: ಲೈಂಗಿಕ ದೌರ್ಜನ್ಯ, ಕೊಲೆ ಬೆದರಿಕೆ ಕುರಿತು ಪುತ್ತೂರು ಮಹಿಳಾ ಪೊಲೀಸ್‌ ಠಾಣೆಯಲ್ಲಿ ಮಹಿಳೆಯೋರ್ವರು ಅರುಣ್‌ ಕುಮಾರ್‌ ಪುತ್ತಿಲ ಅವರ ವಿರುದ್ಧ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ತೀವ್ರಗೊಂಡಿದೆ.

ಪುತ್ತೂರು ನಗರ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಸತೀಶ್‌ ಜಿ.ಜೆ. ನೇತೃತ್ವದಲ್ಲಿ ಬೆಂಗಳೂರು ಹೊಟೇಲೊಂದರಲ್ಲಿ ಪ್ರಕರಣದ ಕುರಿತಾಗಿ ಸ್ಥಳ ಮಹಜರು ನಡೆದಿದೆ.

ಅರುಣ್‌ ಪುತ್ತಿಲ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಅಶೋಕ್‌ ಕುಮಾರ್‌ ರೈ ಮಾತನಾಡಿದ್ದು, ‘ಸುಖಾಸುಮ್ಮನೆ ಯಾರಿಗೂ ಅನ್ಯಾಯವಾಗಬಾರದು. ನಾನು ಈ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳುವುದಿಲ್ಲ. ಈ ಪ್ರಕರಣದಲ್ಲಿ ನಾನು ಯಾವುದೇ ರೀತಿಯ ಹಸ್ತಕ್ಷೇಪ ಮಾಡುವುದಿಲ್ಲ. ಕಾನೂನಿನ ಪ್ರಕಾರ ತನಿಖೆ ನಡೆಯುತ್ತಿದೆ. ಸರ್ಕಾರದಿಂದ ಒತ್ತಡ ಹಾಕಿಸಿ ರಾಜಕೀಯ ದುರುದ್ದೇಶದಿಂದ ಯಾರನ್ನು ತೇಜೋವಧೆ ಮಾಡುವ ಪ್ರಯತ್ನ ಮಾಡುವುದಿಲ್ಲ’ ಎಂದಿದ್ದಾರೆ.

ಸಂತ್ರಸ್ತ ಮಹಿಳೆಯನ್ನು ಸೆ. 2ರಂದು ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೊಳಪಡಿಸಿ ಬಳಿಕ ನ್ಯಾಯಾಲಯದಲ್ಲಿ ನ್ಯಾಯಾಧೀಶರ ಮುಂದೆ ಆಕೆಯ ಹೇಳಿಕೆ ಪಡೆದುಕೊಳ್ಳಲಾಗಿತ್ತು. ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಆಕೆ ನೀಡಿದ ದೂರಿನಲ್ಲಿರುವ ಬೆಂಗಳೂರು ಹೊಟೇಲ್‌ಗೆ ಸೆ. 3ರಂದು ಬೆಳಗ್ಗೆ ಪೊಲೀಸರು ತೆರಳಿ ಮಹಜರು ನಡೆಸಿದ್ದಾರೆ.

Click

https://newsnotout.com/2024/09/women-dsp-and-protest-issue-cctv-putage-kannada-news-viral-news/
https://newsnotout.com/2024/09/pocso-case-on-father-14-year-old-girl-case-kannada-news-tumakur/
https://newsnotout.com/2024/09/renuka-swamy-case-darshan-and-gang-final-charge-sheet-summitting-today/
https://newsnotout.com/2024/09/charge-sheet-kannada-news-hariyan-govt-kannada-news-degree-holders/
See also  ರಾಜ್ಯಾದ್ಯಂತ ಚಡ್ಡಿ ಸುಡುವೆ: ಸಿದ್ದರಾಮಯ್ಯ ಹೀಗೆ ಹೇಳಿದ್ಯಾಕೆ?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget