Uncategorized

ಕಲಾವಿದರು, ಸಾಹಿತಿಗಳ ದತ್ತಾಂಶ ಸಂಗ್ರಹಕ್ಕೆ ಅರ್ಜಿ ಆಹ್ವಾನ

ಮಡಿಕೇರಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೊರತಂದಿರುವ ಕಲಾವಿದರ ದತ್ತಾಂಶ ಸಂಗ್ರಹ ಯೋಜನೆಗೆ ಕಲಾವಿದರಿಂದ ಆನ್‌ಲೈನ್‌ ಮೂಲಕ ಅರ್ಜಿ ನೋಂದಾಯಿಸಲು ಕೋರಲಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸಾಹಿತಿಗಳು/ ಕಲಾವಿದರ ದತ್ತಾಂಶ ಸಂಗ್ರಹ ನೋಂದಣಿ ಕಾರ್ಯಕ್ಕೆ ಈಗಾಗಲೇ ಚಾಲನೆ ದೊರಕಿದೆ. ಪ್ರತಿಬಾರಿಯೂ ಕಲಾವಿದರ ಮಾಹಿತಿಯನ್ನು ಪಡೆದುಕೊಳ್ಳಲು ಭಾರಿ ಕಷ್ಟಪಡಬೇಕಾಗಿತ್ತು. ಇದೆಲ್ಲದರ ಸಮಸ್ಯೆ ಅರ್ಥ ಮಾಡಿಕೊಂಡು ಇದೀಗ ಕಲಾವಿದರ ಸಂಪೂರ್ಣ ಮಾಹಿತಿ ದತ್ತಾಂಶ ರೂಪದಲ್ಲಿ ಸಂಗ್ರಹ ಮಾಡುವ ಅಭಿಯಾನ ಹೊಸ ಪಥ ಸೃಷ್ಟಿಸಿದಂತಾಗಿದೆ. ದತ್ತಾಂಶ ಸಂಗ್ರಹವೂ ರಾಜ್ಯದಾದ್ಯಂತ, ಹೊರರಾಜ್ಯಗಳು ಹಾಗೂ ಹೊರದೇಶಿಗಳಿಂದಲೂ ಕಲಾವಿದರು ಸಂಬಂಧಪಟ್ಟವರನ್ನು ಸಂಪರ್ಕಿಸಿ ತಮ್ಮ ಮಾಹಿತಿ ನೀಡಬಹುದಾಗಿದೆ. ಯೋಜನೆಯಡಿ ಅರ್ಜಿ ಸಲ್ಲಿಸುವ ಕಲಾವಿದರು ಆನ್‌ಲೈನ್‌ನಲ್ಲಿ ಸೇವಾಸಿಂಧು https://sevasindhu.karnataka.gov.in/ ತಮ್ಮ ದತ್ತಾಂಶ ನೊಂದಾಯಿಸಿಕೊಳ್ಳುವಂತೆ ಕೋರಲಾಗಿದೆ. ನಾಡಿನ ಅರೆಭಾಷೆ ಕಲಾವಿದರು/ಸಾಹಿತಿಗಳು ಕೂಡ ಈ ಯೋಜನೆಯಡಿ ವಿವರ ನೋಂದಾಯಿಸಬಹುದಾಗಿದೆ.

Related posts

ರಬ್ಬರ್ ಬೆಳೆಗಾರನಿಗೆ ಸಿಹಿ ಸುದ್ದಿ, ಬೆಳೆಗೆ ಈಗ ಚಿನ್ನದ ರೇಟು..! 12 ವರ್ಷಗಳಲ್ಲೇ ದಾಖಲೆಯ ಗರಿಷ್ಠ ಮಟ್ಟಕ್ಕೆ ತಲುಪಿದ ರಬ್ಬರ್ ಕೃಷಿ

ನರ್ಸಿಂಗ್ ಸೀಟು ಬ್ಲಾಕಿಂಗ್: ಹೆಚ್ಚು ಅಂಕ ತೆಗೆದವರು ಫೇಲ್ ,ಕಡಿಮೆ ಅಂಕ ತೆಗೆದವರು ಪಾಸ್..!

ಹಸಿದು ಬಂದ ರಷ್ಯಾ ಯೋಧರಿಗೆ ವಿಷ ಉಣಿಸಿ ಕೊಂದ ಉಕ್ರೇನ್ ಅಜ್ಜಿ..!