Latestಕೇರಳಕ್ರೈಂಬೆಂಗಳೂರುರಾಜ್ಯ

ಬೆಂಗಳೂರಿಗೆ ಬರುತ್ತಿದ್ದ ವೇಳೆ ನಿಂತಿದ್ದ ಟ್ರಕ್‌ ಗೆ ಗುದ್ದಿದ ಖ್ಯಾತ ಮಲಯಾಳಂ ನಟನ ಕಾರು..! ನಟನ ತಂದೆ ಸ್ಥಳದಲ್ಲೇ ಸಾವು..!

700

ನ್ಯೂಸ್ ನಾಟೌಟ್: ಖ್ಯಾತ ಮಲಯಾಳಂ ನಟ ಶೈನ್ ಟಾಮ್ ಚಾಕೊ ತನ್ನ ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದಾಗ ಭೀಕರ ಅಪಘಾತ ಇಂದು(ಜೂ.6) ಸಂಭವಿಸಿದೆ. ಧರ್ಮಪುರಿ ಜಿಲ್ಲೆಯ ಪಾಲಕೋಡ್ ಬಳಿ ನಿಂತಿದ್ದ ಟ್ರಕ್‌ ಗೆ ನಟ ಪ್ರಯಾಣಿಸುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ನಟ ಶೈನ್ ಟಾಮ್ ಚಾಕೊ ತಂದೆ ಸ್ಥಳದಲ್ಲೇ ಜೀವಬಿಟ್ಟಿದ್ದಾರೆ.

ಕೇರಳ ರಾಜ್ಯದ ತ್ರಿಶೂರ್‌ ನ 41 ವರ್ಷದ ನಟ ಶೈನ್ ಟಾಮ್ ಚಾಕೊ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆ. ಅವರನ್ನು ಆ ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಇದೇ ಅಪಘಾತದಲ್ಲಿ ನಟನ ತಂದೆ ನಿಧನರಾಗಿದ್ದಾರೆ. ನಟ ಶೈನ್​ ತಮ್ಮ ಕುಟುಂಬಸ್ಥರ ಜೊತೆಗೆ ತಂದೆಯ ವೈದ್ಯಕೀಯ ತಪಾಸಣೆಗಾಗಿ ಕಾರಿನಲ್ಲಿ ತ್ರಿಶೂರ್‌ ನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು.

ಇದೇ ವೇಳೆ ಧರ್ಮಪುರಿ ಜಿಲ್ಲೆಯ ಪಾಲಕೋಡ್‌ ನ ಪರೈಯೂರ್ ಬಳಿ ಚಾಲಕ ಅನಿಸ್ (42) ಅವರ ನಿಯಂತ್ರಣ ತಪ್ಪಿ ನಿಂತಿದ್ದ ಟ್ರಕ್‌ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
ಸದ್ಯ ಧರ್ಮಪುರಿ ಸರ್ಕಾರಿ ಆಸ್ಪತ್ರೆಯಲ್ಲಿ ಶೈನ್ ಟಾಮ್ ಚಾಲೋ ಹಾಗೂ ತಾಯಿಗೆ ಚಿಕಿತ್ಸೆ ಮುಂದುವರೆದಿದೆ. 

ಸತತ 3ನೇ ಬಾರಿ ರೆಪೋ ದರ ಇಳಿಸಿದ ಆರ್ ಬಿಐ..! ಗೃಹ ಸಾಲ, ಇಎಂಐ ಗಳ ಬಡ್ಡಿದರದಲ್ಲಿ ಇಳಿಕೆ..!

ಧರ್ಮಸ್ಥಳ: ಕಾಡಾನೆ ದಾಳಿಗೆ ರಿಕ್ಷಾ ನಜ್ಜುಗುಜ್ಜು..! ರಿಕ್ಷಾದ ಸ್ಥಿತಿ ಕಂಡು ಕುಸಿದು ಬಿದ್ದ ಚಾಲಕ..!

See also  ಕುಮಾರಸ್ವಾಮಿಗೆ ನಾಳೆ(ಜೂ.5) ದೆಹಲಿಗೆ ಬರುವಂತೆ ಅಮಿತ್ ಶಾರಿಂದ ಕರೆ..! ಇಲ್ಲಿದೆ ಸಂಪೂರ್ಣ ಮಾಹಿತಿ
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget