ಕರಾವಳಿಪುತ್ತೂರುರಾಜಕೀಯಸುಳ್ಯ

ಪುತ್ತೂರು:ನಾಮಪತ್ರ ಸಲ್ಲಿಸಲಿರುವ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ,ಖ್ಯಾತ ನಟಿ ಶೃತಿ ಪುತ್ತೂರಿಗೆ ಆಗಮನ

ನ್ಯೂಸ್ ನಾಟೌಟ್: ಪುತ್ತೂರಿನಲ್ಲಿಂದು ಸಂಭ್ರಮ ಮುಗಿಲು ಮುಟ್ಟಿದೆ.ಹೌದು, ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಅವರು ಇಂದು ನಾಮಪತ್ರವನ್ನು ಸಲ್ಲಿಸಲಿದ್ದಾರೆ. ಈ ಹಿನ್ನಲೆಯಲ್ಲಿ ಸಾವಿರಾರು ಬಿಜೆಪಿ ಕಾರ್ಯಕರ್ತರು,ಮುಖಂಡರು,ಅಭಿಮಾನಿಗಳು ಪುತ್ತೂರು ಮಹಾಲಿಂಗೇಶ್ವರ ದೇಗುಲದ ದೇವರ ಗದ್ದೆಯಲ್ಲಿ ಒಟ್ಟಾಗಿದ್ದಾರೆ.ಇದಕ್ಕು ಮುನ್ನ ಆಶಾ ತಿಮ್ಮಪ್ಪ ಗೌಡ ಅವರು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇಗುಲಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆದರು.

ಅದ್ದೂರಿ ಮೆರವಣಿಗೆಗೆ ಹಾಗೂ ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ ದ.ಕ ಸಂಸದ ನಳೀನ್ ಕುಮಾರ್ ಕಟೀಲ್ ಚಾಲನೆ ನೀಡಿದರು.ಪುತ್ತೂರು ಶಾಸಕ ಸಂಜೀವ ಮಠಂದೂರು,ಸಂಸದ ತೇಜಸ್ವಿ ಸೂರ್ಯ, ಸುಳ್ಯ ಬಿಜೆಪಿ ಆಭ್ಯರ್ಥಿ ಭಾಗೀರಥಿ ಮುರುಳ್ಯ ,ವಿಟ್ಲದ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ,ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮತ್ತಿತರರು ಭಾಗಿಯಾಗಿದ್ದಾರೆ.

ಇಂದು ಆಶಾ ತಿಮ್ಮಪ್ಪ ಅವರು ನಾಮಪತ್ರ ಸಲ್ಲಿಸುತ್ತಿದ್ದು ಕನ್ನಡ ಚಿತ್ರರಂಗ ಕಂಡ ಖ್ಯಾತ ನಟಿ ಹಾಗೂ ಬಿಜೆಪಿ ಪ್ರಮುಖರು ಆಗಿರುವ ಶೃತಿ ಅವರು ಇದೀಗ ಪುತ್ತೂರಿಗೆ ಆಗಮಿಸಿದ್ದು ಕಾರ್ಯಕರ್ತರಲ್ಲಿ ಹೊಸ ಹುರುಪು ಮೂಡಿಸಿ ಸಂಭ್ರಮ ತಂದರು.ನಗರದೆಲ್ಲೆಡೆ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.ಎಲ್ಲೆಡೆ ಬಿಜೆಪಿ ಧ್ವಜ ಹಾರಾಡುತ್ತಿದ್ದು, ಇಡೀ ಪುತ್ತೂರು ನಗರ ಕೇಸರಿಮಯವಾಗಿದೆ.ಬಿಜೆಪಿಗೆ ಜೈಕಾರ ಮಾರ್ಧನಿಸುತ್ತಿದೆ.

Related posts

ನೆಲ್ಯಾಡಿ ವ್ಯಕ್ತಿಯ ಕಳೆದು ಹೋಗಿದ್ದ ‘ಪರ್ಸ್’ ಕೊನೆಗೂ ಸಿಕ್ಕಿತು..! ‘ನ್ಯೂಸ್ ನಾಟೌಟ್’ ಚಾನೆಲ್ ಗೆ ವಿಶೇಷ ಧನ್ಯವಾದ ಹರಿದು ಬಂದಿದ್ಯಾಕೆ..?

ಕಾಲೇಜಿಗೆ ಅಕ್ರಮ ಪ್ರವೇಶ ಮತ್ತು ಬೆದರಿಕೆ ಆರೋಪ! ಡಾ| ಜ್ಯೋತಿ ಆರ್.ಪ್ರಸಾದ್ ರಿಂದ ಸುಳ್ಯ ಠಾಣೆಗೆ ದೂರು

ಬೆಳ್ಳಾರೆಯ ಉದ್ಯಮಿ ನವೀನ್ ಕಾಮಧೇನು ಕಿಡ್ನಾಪ್ ಪ್ರಕರಣ:ಸ್ಪಷ್ಟನೆ ನೀಡಿದ ಆರೋಪಿ ನವೀನ್ ತಂಬಿನಮಕ್ಕಿ