ಕರಾವಳಿಕ್ರೈಂ

ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಸಿ ವಂಚಿಸಿದಾತನ ಬಂಧನ

261

ನ್ಯೂಸ್‌ನಾಟೌಟ್‌: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿಸಿ ಸಾರ್ವಜನಿಕರನ್ನು ವಂಚಿಸುತ್ತಿದ್ದ ಆರೋಪಿಯನ್ನು ಮಂಗಳೂರು ನಗರ ಸೆನ್‌ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಕೇರಳದ ಕಲ್ಲಿಕೋಟೆಯ ಜಿಜೊ ಜಾನ್ ಪಿ.ಕೆ.(29) ಎಂದು ಗುರುತಿಸಲಾಗಿದೆ. ಈತ ಶಕ್ತಿನಗರದ ನಿವಾಸಿಯೊಬ್ಬರಿಗೆ ಷೇರು ಮಾರುಕಟ್ಟೆ ಹೊಡಿಕೆ ಹೆಸರಲ್ಲಿ ತಿಂಗಳಿಗೆ ಶೇ.15ರಷ್ಟು ಲಾಭಾಂಶ ಬರುವುದಾಗಿ ನಂಬಿಸಿ ಅವರಿಂದ ಒಂದು ಕೋಟಿ ರೂಪಾಯಿ ಹಣವನ್ನು ಬ್ಯಾಂಕ್‌ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದ. ಆದರೆ ಬಳಿಕ ಲಾಭಾಂಶ ನೀಡದೆ ವಂಚಿಸಿದ್ದ. ಇದರಿಂದ ಹಣ ಕಳೆದುಕೊಂಡ ವ್ಯಕ್ತಿ ಮಂಗಳೂರಿನ ಸೆನ್‌ ಕ್ರೈಂ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದರಂತೆ ಆರೋಪಿಯ ಪತ್ತೆಗೆ ಬಲೆ ಬೀಸಿದ್ದ ಪೊಲೀಸರು ಕೇರಳದ ಕಲ್ಲಿಕೋಟೆಯಲ್ಲಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

See also  ಕಾರಲ್ಲಿ ಬಂದ ಮಹಿಳೆಯರು ಹೂವಿನ ಕುಂಡವನ್ನು ಕದ್ದದ್ದೇಕೆ..? ಒಂದು ವಾರದಲ್ಲಿ ಹತ್ತನೇ ಪ್ರಕರಣ! ಅಷ್ಟಕ್ಕೂ ಆ ಹೂವಿನ ಕುಂಡದಲ್ಲೇನಿತ್ತು? ಇಲ್ಲಿದೆ ವೈರಲ್ ವಿಡಿಯೋ
  Ad Widget   Ad Widget   Ad Widget   Ad Widget   Ad Widget   Ad Widget   Ad Widget