ಕರಾವಳಿ

ಅಡಿಕೆ ಮರಕ್ಕೆ ಮದ್ದು ಬಿಡುವುದಕ್ಕೆ ಹೋಗಿ ಕೆಳಕ್ಕೆ ಬಿದ್ದ ಗ್ರಾ.ಪಂ.ಅಧ್ಯಕ್ಷ..!

ನ್ಯೂಸ್ ನಾಟೌಟ್: ಗ್ರಾಮ ಪಂಚಾಯತ್ ಅಧ್ಯಕ್ಷರೊಬ್ಬರು ಅಡಿಕೆ ಮರಕ್ಕೆ ಔಷಧ ಸಿಂಪಡಿಸುವುದಕ್ಕೆ ಹೋಗಿ ಮರದಿಂದ ಕೆಳಕ್ಕೆ ಬಿದ್ದು ಗಂಭೀರ ಗಾಯಗೊಂಡ ಘಟನೆ ಇಂದು (ಜು.17) ಸಂಜೆ ಬೆಳ್ತಂಗಡಿಯ ಕಳೆಂಜದಲ್ಲಿ ನಡೆದಿದೆ.

ಔಷಧಿ ಸಿಂಪಡಣೆಯ ವೇಳೆ ಅಡಿಕೆ ಮರಕ್ಕೆ ಹತ್ತುವ ಟ್ರೀ ಬೈಕ್ ನ ರೋಪ್ ಜಾರಿದ ಪರಿಣಾಮ ಗ್ರಾ.ಪಂ ಮಾಜಿ ಅಧ್ಯಕ್ಷ ನಿತ್ಯಾನಂದ ರೈ (45ವ) ಗಂಭೀರ ಗಾಯಗೊಂಡಿದ್ದಾರೆ. ಮಳೆ ಕಡಿಮೆ ಇದ್ದಿದ್ದರಿಂದ ಹಾಗೂ ಕೆಲಸಕ್ಕೆ ಜನ ಸಿಗದೆ ಇದ್ದುದರಿಂದ ಗುತ್ತಿಮಾರು ನಿವಾಸಿ ನಿತ್ಯಾನಂದ ರೈತಾವೇ ಅಡಿಕೆ ಮರಕ್ಕೆ ಹತ್ತಿದ್ದರು ಎನ್ನಲಾಗಿದೆ. ರೋ ಪ್ ಜಾರಿ ಅವರು ಕೆಳಗೆ ಬಿದ್ದು ತಲೆಗೆ ಹಾಗೂ ಕುತ್ತಿಗೆ ಭಾಗಕ್ಕೆ ಗಂಭೀರ ಗಾಯಗೊಂಡಿದ್ದಾರೆ. ತಕ್ಷಣ ಮನೆಯವರು ಹಾಗೂ ಸ್ಥಳೀಯರು ಅವರನ್ನು ಮಂಗಳೂರಿನ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.

Related posts

ಮಡಿಕೇರಿ: ಕುಸಿಯುವ ಭೀತಿಯಲ್ಲಿ ಗ್ಲಾಸ್ ಬ್ರಿಡ್ಜ್ ..!, ವಿರೋಧಿಗಳ ಕುತಂತ್ರವೇ..? ಹೊಸ ಗ್ಲಾಸ್ ಬ್ರಿಡ್ಜ್ ಗೆ ಏನಿದು ಕಂಟಕ..? ಇಲ್ಲಿದೆ ಡಿಟೇಲ್ಸ್

ಪ್ರವೀಣ್ ಹತ್ಯೆ ಪ್ರಕರಣ: ಸುಳ್ಯ ಪಿಎಫ್ಐ ಕಚೇರಿಯಲ್ಲಿ ಮಹಜರು

ಮಡಿಕೇರಿ : ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಬಿ.ಎನ್.ವೀಣಾ ಅಧಿಕಾರ ಸ್ವೀಕಾರ