ಕರಾವಳಿ

ಅಡಿಕೆ ಮಾರಿ ಬರುತ್ತಿದ್ದ ಅಜ್ಜನ ದುಡ್ಡಿನ ಬ್ಯಾಗ್ ಎಳೆದ ಮಹಿಳೆಯರು

92
Spread the love

ನ್ಯೂಸ್ ನಾಟೌಟ್: ಉಪ್ಪಿನಂಗಡಿಯಲ್ಲಿ ಮಾಯಾಜಾಲದ ವಂಚನೆ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಇದೀಗ ಗ್ರಾಹಕರ ಸೋಗಿನಲ್ಲಿ ಬಂದ ಮಹಿಳೆಯರಿಬ್ಬರು ವೃದ್ದರೊಬ್ಬರ ಕೈಯಲ್ಲಿದ್ದ ಹಣವಿದ್ದ ಚೀಲವನ್ನೇ ರಾಜಾರೋಷವಾಗಿ ಎಳೆಯಲು ಯತ್ನಿಸಿದ ಘಟನೆ ಬುಧವಾರ ನಡೆದಿದೆ.  

ಉಪ್ಪಿನಂಗಡಿಯ ಹೃದಯ ಭಾಗದಲ್ಲಿನ ಅಡಿಕೆ ಅಂಗಡಿಯಲ್ಲಿ ಅಡಿಕೆ ಮಾರಾಟ ಮಾಡಿ ದೊರೆತ ಹಣದೊಂದಿಗೆ  ಹಿಂತಿರುಗುತ್ತಿದ್ದ ವೃದ್ದರೊಬ್ಬರ ಹಿಂದೆ ಮತ್ತು ಮುಂದೆ ನಿಂತು ಹೊಂಚು ಹಾಕುತ್ತಿದ್ದ ಮಹಿಳೆಯರಿಬ್ಬರ ಪೈಕಿ  ಹಿಂಬದಿ ಇದ್ದಾಕೆ  ವೃದ್ದರ ಕೈಯಲ್ಲಿದ್ದ ಚೀಲವನ್ನು ಎಳೆದಿದ್ದಾಳೆ.  ಜಾಗೃತಗೊಂಡ ವೃದ್ದ ವ್ಯಕ್ತಿ ಚೀಲವನ್ನು ಬಲವಾಗಿ ಹಿಡಿದುಕೊಂಡಿದ್ದಾರೆ. ಯಾರು ಹಣವಿದ್ದ ಚೀಲವನ್ನು ಎಳೆದದ್ದು ಎಂದು ತಿಳಿಯುವಷ್ಠರಲ್ಲಿ ಬೇರೊಂದು ವಿಚಾರದ ಬಗ್ಗೆ ಗಮನ ಸೆಳೆದಂತೆ ವರ್ತಿಸಿ ಮಹಿಳೆಯರಿಬ್ಬರೂ  ಸ್ಥಳದಿಂದ ಕಾಲ್ಕಿತ್ತಿರುವುದು ಸಿಸಿ  ಕ್ಯಾಮರಾದ  ದೃಶ್ಯಾವಳಿಯಿಂದ ಸೆರೆಯಾಗಿದೆ. ಇಂತಹ ಮಹಿಳೆಯರ ಆಗಮನ ನಿಮ್ಮೂರಿನಲ್ಲಿಯೂ ಆಗಬಹುದೆಂದೂ ಅಗತ್ಯ ಮುನ್ನೆಚ್ಚರಿಕೆ ವಹಿಸುವತೆ ಅಡಿಕೆ ಅಂಗಡಿ ವರ್ತಕರು ತಿಳಿಸಿದ್ದಾರೆ.

See also  ಆ.10 ರಿಂದ 22ರ ತನಕ ಅಗ್ನಿಪಥ ನೇಮಕಾತಿ
  Ad Widget   Ad Widget   Ad Widget