ಅರಂತೋಡು: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಸಂವರ್ಧನಾ ಸಮಿತಿ ಅರಂತೋಡು ಗ್ರಾಮ ಇದರ ಸಂಯುಕ್ತ ಆಶ್ರಯದಲ್ಲಿ ಅ.18 ರಂದು ಆರಂಭಗೊಂಡ ಅರೆಭಾಷೆ ಸಂಸ್ಕೃತಿ ಶಿಬಿರದ ಸಮಾರೋಪ ಸಮಾರಂಭವು ಬುಧವಾರ ಅರಂತೋಡು ಸಿರಿಸೌಧ ಸಭಾಭವನದಲ್ಲಿ ನಡೆಯಿತು . ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಅಧ್ಯಕ್ಷತೆ ವಹಿಸಿದ್ದರು. ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಅರಂತೋಡು ಗ್ರಾ ಪಂ ಉಪಾಧ್ಯಕ್ಷೆ ಶ್ವೇತಾ ಅರಮನೆಗಾಯ, ಅರಂತೋಡು ದುರ್ಗಾ ಮಾತಾ ಭಜನಾ ಮಂದಿರದ ಅಧ್ಯಕ್ಷ ಕೆ. ಆರ್.ಪದ್ಮನಾಭ, ನಿವೃತ್ತ ಶಿಕ್ಷಕರುಗಳಾದ ಜತ್ತಪ್ಪ ಮಾಸ್ತರ್ ಅಳಿಕೆ, ಹೊನ್ನಪ್ಪ ಮಾಸ್ತರ್ ಅಡ್ತಲೆ, ಅರಂತೋಡು ಮಹಿಳಾ ಗೌಡ ಗ್ರಾಮ ಸಮಿತಿಯ ಅಧ್ಯಕ್ಷೆ ವಾರಿಜ ಕುರುಂಜಿ, ಅರಂತೋಡು ಗ್ರಾ.ಪಂ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ.ಆರ್. ಜಯಪ್ರಕಾಶ್, ಅರಂತೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸರಸ್ವತಿ ಚಿದಾನಂದ ಅಡ್ತಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಭಾರತಿ ಪುರುಷೋತ್ತಮ ಮತ್ತು ಬಳಗ ಪ್ರಾರ್ಥಿಸಿದರು. ಅರಂತೋಡು ಗ್ರಾ.ಪಂ. ಸದಸ್ಯ ಕೇಶವ ಅಡ್ತಲೆ ಸ್ವಾಗತಿಸಿ, ಪುಷ್ಪಾ ಮೇದಪ್ಪ ಕಾರ್ಯಕ್ರಮ ನಿರೂಪಿಸಿದರು.