ಕರಾವಳಿಸುಳ್ಯ

ಸುಳ್ಯ ಪರಿಸರದ ಕಥೆಗೆ ಬಣ್ಣ ಹಚ್ಚಿದ ನವೀನ್ ಡಿ ಪಡೀಲ್! ಮೊದಲ ಅರೆಭಾ‍ಷಾ ಚಿತ್ರ ಬಿಡುಗಡೆಗೆ ಕ್ಷಣಗಣನೆ

ನ್ಯೂಸ್‌ನಾಟೌಟ್‌:  ಅರೆಭಾಷೆಯಲ್ಲಿ ನಿರ್ಮಾಣವಾದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ “ಮೂಗಜ್ಜನ ಕೋಳಿ’ ತೆರೆಗೆ ಬರಲು ಸಿದ್ಧವಾಗುತ್ತಿದೆ. ಖ್ಯಾತ ತುಳು ಚಲನಚಿತ್ರ ನಟ ನವೀನ್ ಡಿ ಪಡೀಲ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

ರಾಷ್ಟ್ರಪ್ರಶಸ್ತಿ ವಿಜೇತ ಜೀಟಿಗೆ ಎಂಬ ತುಳು ಚಿತ್ರವನ್ನು ನಿರ್ದೇಶಿಸಿದ್ದ ಸಂತೋಷ ಮಾಡ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಮೂಗಜ್ಜನ ಕೋಳಿ ಮಕ್ಕಳ ಚಿತ್ರವಾಗಿದ್ದು, ಈಗಾಗಲೇ ಚಿತ್ರೀಕರಣ ಪೂರ್ತಿಯಾಗಿ ಬಿಡುಗಡೆಗೆ ಸಿದ್ಧವಾಗಿದೆ. ಸುಳ್ಯದ ಸುತ್ತಮುತ್ತಲ್ಲಿನ ಸುಂದರ ಪರಿಸರದಲ್ಲಿ ಚಿತ್ರೀಕರಣ ನಡೆದಿದೆ. ಇದು ಅರೆಭಾಷೆಯಲ್ಲಿ ನಿರ್ಮಾಣವಾಗಿರುವ ಚಿತ್ರ.

ಕನಸು ಪ್ರೊಡಕ್ಷನ್ಸ್ ಎಂಬ ಬ್ಯಾನರಿನಡಿಯಲ್ಲಿ ಕೆ.ಸುರೇಶ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಗಲ್ಫ್ ರಾಷ್ಟ್ರದಲ್ಲಿ ಬೆಳೆದ ಕನಸು ಎಂಬ ಬಾಲಕಿ ಪ್ರಥಮ ಬಾರಿಗೆ ತಮ್ಮ ಹೆತ್ತವರ ಊರಾದ ಸುಳ್ಯಕ್ಕೆ ಬರುತ್ತಾಳೆ. ಇಲ್ಲಿನ ಸುಂದರ ಹಸಿರು ಪರಿಸರ ಅವಳಿಗೆ ಹೊಸತು. ಇಲ್ಲಿನ ಪರಿಸರವನ್ನು ತನ್ನದೇ ದೃಷ್ಠಿ ಕೋನದಲ್ಲಿ ನೋಡುತ್ತಾಳೆ. ಮುಗ್ಧ ಪ್ರಶ್ನೆಗಳನ್ನು ಕೇಳುತ್ತಾಳೆ. ಈ ಹುಡುಗಿಯ ಪಕ್ಕದ ಮನೆಯಲ್ಲಿ ಗೋವಿಂದ ಅಥವಾ ಮೂಗಜ್ಜ ಎನ್ನುವ ಯಾರಲ್ಲಿಯೂ ಮಾತನಾಡದ ಒರಟ ಮುದುಕ ಇರುತ್ತಾನೆ. ಈ ಮುಗ್ಧ ಹುಡುಗಿ ಹಾಗೂ ಕೋಳಿ ಸಾಕುವ ಮೂಗಜ್ಜನ ನಡುವೆ ನಡೆಯುವ ಸಂಘರ್ಷ ಹಾಗೂ ಸಂಬಂಧದ ಕಥೆಯೇ ಮೂಗಜ್ಜನ ಕೋಳಿ ಎಂದು ನಿರ್ದೇಶಕ ಸಂತೋಷ್‌ ಮಾಡ ಸಿನಿಮಾದ ಕಥಾಹಂದರ ಬಿಚ್ಚಿಟ್ಟರು.

ಗೌರಿಕಾ ದೀಪುಲಾಲ್‌ ಮುಖ್ಯ ಪಾತ್ರದಲ್ಲಿ ನಟಿಸಲಿದ್ದು, ಪ್ರಕಾಶ್‌ ತುಮ್ಮಿನಾಡು, ದೀಪಕ್‌ ರೈ ಪಾಣಾಜೆ, ರೂಪಶ್ರೀ ವರ್ಕಾಡಿ, ಸುಕನ್ಯಾ, ರಾಘವೇಂದ್ರ ಭಟ್‌, ಡಾ. ಜೀವನ ರಾಮ್‌ ಸುಳ್ಯ, ಕುಮಾರಿ ಸಾನಿಧ್ಯ ಮೊದಲಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸುರೇಶ್‌ ಅರಸ್‌ ಸಂಕಲನ, ಸುಬ್ರಾಯ ಚೊಕ್ಕಾಡಿ ಸಾಹಿತ್ಯ, ವಿನೀತ್‌ ಕಥೆ, ರಮೇಶ್‌ ಶೆಟ್ಟಿಗಾರ್‌ ಈ ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆಯನ್ನು ಬರೆದಿದ್ದಾರೆ.

Related posts

ನಾಳೆ ಮಂಡ್ಯಕ್ಕೆ ಯೋಗಿ ಆದಿತ್ಯನಾಥ್‌

ಬೆಳ್ಳಾರೆ: ಅಪರಿಚಿತ ಗಂಡಸಿನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ

ಅರಂತೋಡು -ಎಲಿಮಲೆ ರಸ್ತೆ ಕಾಮಗಾರಿ:ಗುದ್ದಲಿ ಪೂಜೆಯಂದೇ ಕಾಮಗಾರಿ ಆರಂಭಿಸಿ, 15 ದಿನ ಕಾಯುತ್ತೇವೆ,ಇಲ್ಲದಿದ್ದರೆ ಹೋರಾಟ ನಡೆಸುತ್ತೇವೆ:ಹರಿಪ್ರಸಾದ್ ಎ.ಕೆ.