ಬೆಂಗಳೂರು

ಆರ್ಕಿಟೆಕ್ಟ್ ಕೆಲಸ ತೊರೆದು ವಡಾ ಪಾವ್ ಮಾರಾಟ ಮಾಡಿದ ಯುವಕ..!ಈ ನಿರ್ಧಾರಕ್ಕೆ ಬರಲು ಕಾರಣವೇನು?

178

ನ್ಯೂಸ್ ನಾಟೌಟ್ : ನಾಲ್ಕು ವರ್ಷಗಳ ಹಿಂದೆ ಅಬ್ಬರಿಸಿದ ಕೋರೋನಾಗೆ ಬಹುತೇಕ ಯುವಕರು ಕೃಷಿ ಹಾದಿಯನ್ನು ಹಿಡಿದಿದ್ದರು.ಕೈ ತುಂಬಾ ಸಂಬಳ ಎಣಿಸುತ್ತಿದ್ದ ಇಂಜೀನಿಯರ್ಸ್‌ ಕೂಡ ಹಳ್ಳಿಯತ್ತ ಮರಳಿ ತಮ್ಮೂರಿನಲ್ಲಿ ಚಂದದ ಭವಿಷ್ಯವನ್ನು ರೂಪಿಸಿಕೊಂಡಿದ್ದರು.ಇದೀಗ ಬೆಂಗಳೂರಿನಲ್ಲಿ ತಮ್ಮ ಕೆಲಸಕ್ಕೆ ಡಿಮ್ಯಾಂಡ್‌ ಇದ್ದರೂ ಕೂಡ ಆರ್ಕಿಟೆಕ್ಟ್​ (ವಾಸ್ತುಶಿಲ್ಪಿ) ಕೆಲಸವನ್ನು ತೊರೆದು ವಡಾ-ಪಾವ್​ ಮಾರಾಟ ಮಾಡುತ್ತಿದ್ದಾರೆ ಇಲ್ಲೊಬ್ಬರು ವ್ಯಕ್ತಿ.ಈ ನೈಜ ಕಥೆಯನ್ನು ಸೋಷಿಯಲ್​ ಮೀಡಿಯಾ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ.

ಸೋಷಿಯಲ್​ ಮೀಡಿಯಾ ಬಳಕೆದಾರ ವಿಶ್ವಾಸ್ ಎಂಬುವರು ಎಕ್ಸ್​ನಲ್ಲಿ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದು, ಇದು ಸಾಕಷ್ಟು ವೈರಲ್​ ಆಗಿದೆ.“ನಾನು ಸೂಪರ್‌ ಹೀರೋ ಅಲ್ಲ, ಆದರೆ ನಾನು ವಡಾ ಪಾವ್‌ನೊಂದಿಗೆ ದಿನವನ್ನು ಉಳಿಸಬಲ್ಲೆ” (“I’m not a superhero, but I can save the day with a vada pav”) ಎಂಬ ಫಲಕವನ್ನು ಹಿಡಿದಿರುವ ವ್ಯಕ್ತಿಯೊಬ್ಬರ ಜತೆಗೆ ಇರುವ ಚಿತ್ರವನ್ನು ವಿಶ್ವಾಸ್​ ಹಂಚಿಕೊಂಡಿದ್ದಾರೆ. ಕೆಲವು ಪ್ಯಾಕ್ ಮಾಡಿದ ಆಹಾರ ಪೊಟ್ಟಣಗಳನ್ನು ಟೂ ವ್ಹೀಲರ್​ನಲ್ಲಿ ಇಟ್ಟಿರುವುದು ಕೂಡ ಈ ಚಿತ್ರದಲ್ಲಿ ಕಂಡುಬರುತ್ತದೆ.

“ಜುಡಿಯೋ, HSR ನಲ್ಲಿ ಈ ವ್ಯಕ್ತಿಯನ್ನು ಭೇಟಿಯಾದೆ. ಶಾಪಿಂಗ್ ಮತ್ತು ವಡಾ-ಪಾವ್ ಆನಂದದ ಮಿಶ್ರಣದಿಂದ ಮಾಡಿದ ದಿನ ಇದಾಗಿತ್ತು. ಮಾಜಿ ವಾಸ್ತುಶಿಲ್ಪಿಯೊಬ್ಬರು ವಡಾ ಪಾವ್‌ನ ಸಂಪೂರ್ಣ ಊಟದ ಮೋಡಿಯನ್ನು ಪುನರುಜ್ಜೀವನಗೊಳಿಸಲು ಕಾರ್ಪೊರೇಟ್ ಜಗತ್ತನ್ನು ತೊರೆದಿದ್ದಾರೆ” ಎಂದು ಅವರು ಪೋಸ್ಟ್​ನಲ್ಲಿ ಬರೆದಿದ್ದಾರೆ.“ಪ್ರತಿಯೊಬ್ಬರೂ ಉದ್ಯಮಿಯಾಗಬಹುದು!! ಪ್ರತಿಯೊಬ್ಬರೂ ಮಾಡಲು ಹಲವು ಆಲೋಚನೆಗಳನ್ನು ಹೊಂದಿರುತ್ತಾರೆ, ಆದರೆ ಪ್ರತಿಯೊಬ್ಬರೂ ಅದನ್ನು ಪ್ರಾರಂಭಿಸುವುದಿಲ್ಲ. ಸ್ವಲ್ಪವೂ ಪ್ರಗತಿಯನ್ನು ಸಾಧಿಸುವುದಿಲ್ಲ.” ಎಂದು ಇನ್ನೊಬ್ಬ ಇಂಟರ್​ನೆಟ್​ ಬಳಕೆದಾದರರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ.

See also  ರಾಜ್ಯ ರಾಜಕಾರಣದಲ್ಲಿ ಮತ್ತೆ ಸಂಚಲನ ಸೃಷ್ಟಿಸಲು ಮುಂದಾದ ಕೆ.ಎಸ್.ಈಶ್ವರಪ್ಪ..! 1008 ಸಾಧು ಸಂತರ ಪಾದ ಪೂಜೆಯ ಮೂಲಕ ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆ..!
  Ad Widget   Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget