ದೇಶ-ಪ್ರಪಂಚದೇಶ-ವಿದೇಶವೈರಲ್ ನ್ಯೂಸ್

ಪುರಾತತ್ವ ಇಲಾಖೆಯ ಉತ್ಖನನದ ವೇಳೆ ಬೃಹತ್ ವಿಷ್ಣು ವಿಗ್ರಹ ಪತ್ತೆ..! ಈ ಬಗ್ಗೆ ಅಧಿಕಾರಿಗಳು ಹೇಳಿದ್ದೇನು..?

ನ್ಯೂಸ್‌ ನಾಟೌಟ್‌: ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ಎಎಸ್‌ಐ) ನಡೆಸಿದ ಉತ್ಖನನದ ವೇಳೆ ‘ಶೇಷಶಾಯಿ ವಿಷ್ಣು’ ವಿಗ್ರಹ ಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯ ಸಿಂಧಖೇಡ್ ರಾಜಾ ಪಟ್ಟಣದಲ್ಲಿ ಪತ್ತೆಯಾಗಿದೆ. (archaeological survey)

ಲಖುಜಿ ಜಾಧವರಾವ್ ಮಹಾರಾಜ್‌ ಛತ್ರಿ ಎಂಬ ಸಭಾಮಂಟಪವನ್ನು ಅನ್ವೇಷಿಸುವಾಗ ಶಿಲ್ಪ ಪತ್ತೆಯಾಗಿದೆ ಎಂದು ನಾಗ್ಪುರದ ಪುರಾತತ್ವಶಾಸ್ತ್ರಜ್ಞರು ತಿಳಿಸಿದ್ದಾರೆ. ಸಭಾಮಂಟಪದ ಪತ್ತೆಗೆ ಉತ್ಖನನದ ವೇಳೆ ಆಳವಾಗಿ ಪರಿಶೀಲನೆ ನಡೆಸಿದಾಗ ಮೊದಲಿಗೆ ಲಕ್ಷ್ಮಿ ದೇವಿಯ ವಿಗ್ರಹ ಪತ್ತೆಯಾಗಿದೆ, ನಂತರ ಶೇಷಶಾಯಿ ವಿಷ್ಣುವಿನ (ಮಲಗಿದ ರೂಪದಲ್ಲಿರುವ) ಬೃಹತ್‌ ವಿಗ್ರಹ ಪತ್ತೆಯಾಗಿದೆ.

‘ಈ ಶಿಲ್ಪವು ಕ್ಲೋರೈಟ್ ಶಿಸ್ಟ್ ಶಿಲೆಯಿಂದ ಮಾಡಲ್ಪಟ್ಟಿದೆ. ಈ ರೀತಿಯ ಶಿಲ್ಪಗಳನ್ನು ಹೆಚ್ಚಾಗಿ ದಕ್ಷಿಣ ಭಾರತದಲ್ಲಿ ಹೊಯ್ಸಳು ತಯಾರಿಸುತ್ತಿದ್ದರು. ಇದರಲ್ಲಿ ವಿಷ್ಣು, ಶೇಷ ನಾಗನ ಮೇಲೆ ಮಲಗಿರುವ ಮತ್ತು ಲಕ್ಷ್ಮಿ ದೇವಿಯು ಕುಳಿತುಕೊಂಡು ವಿಷ್ಣುವಿನ ಪಾದಗಳನ್ನು ಒತ್ತುತ್ತಿರುವ ದೃಶ್ಯವಿದೆ. ವಿಗ್ರಹದ ಸುತ್ತಲೂ ವಿಷ್ಣು ದಶಾವತಾರ, ಸಮುದ್ರಮಂಥನವನ್ನು ಚಿತ್ರಿಸಲಾಗಿದೆ. ಸಮುದ್ರಮಂಥನದ ಅಶ್ವ, ಐರಾವತ ಮುಂತಾದವುಗಳೂ ವಿಗ್ರಹದ ಮೇಲೆ ಕಾಣಸಿಗುತ್ತವೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Click 👇

https://newsnotout.com/2024/06/suraj-revanna-arrested-after-prajwal-revanna-kannada-news
https://newsnotout.com/2024/06/naxal-couple-surrendereed-and-awarded-by-govt-kannada-news

Related posts

ಪತ್ನಿಯ ತಲೆ ಕಡಿದು ತಲೆಯ ಜೊತೆ ಪೊಲೀಸ್ ಠಾಣೆಗೆ ಆಗಮಿಸಿದ್ದ ಪತಿ..! 4.5 ವರ್ಷದ ಬಳಿಕ ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್..!

ಬೆಳ್ತಂಗಡಿ: ಶಾಸಕ ಹರೀಶ್ ಪೂಂಜಾ ವಿವಾದಾತ್ಮಕ ಹೇಳಿಕೆ ಪ್ರಕರಣ, ಸಿಡಿ ಒದಗಿಸುವಂತೆ ಹೈ ಕೋರ್ಟ್ ಸೂಚನೆ

ಶಾಲೆಯ ರಜೆಗಾಗಿ 2ನೇ ತರಗತಿ ವಿದ್ಯಾರ್ಥಿಯನ್ನೇ ಕೊಂದ ವಿದ್ಯಾರ್ಥಿ..!, 2 ತಿಂಗಳ ಹಿಂದೆ ನಡೆದಿದ್ದ ಹತ್ಯಾಕಾಂಡದ ಸತ್ಯ ಸಂಗತಿಯನ್ನು ಭೇದಿಸಿದ ಪೊಲೀಸರು