ನ್ಯೂಸ್ ನಾಟೌಟ್: ಸುಳ್ಯ ಸಮೀಪದ ಅರಂತೋಡು ಬಳಿ ಊರುಕೋಳಿ ಹೊತ್ತುಕೊಂಡು ಬರುತ್ತಿದ್ದ ಪಿಕಪ್ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಶುಕ್ರವಾರ (ಮೇ30) ತಡರಾತ್ರಿ ನಡೆದಿದೆ. ದುರ್ಘಟನೆಯಲ್ಲಿ ವಾಹನ ಜಖಂಗೊಂಡಿದೆ.
ಯಾವುದೇ ಜೀವ ಹಾನಿಯಾಗಿಲ್ಲ. ಮಡಿಕೇರಿ ಕಡೆಯಿಂದ ಊರು ಕೋಳಿಯನ್ನು ಸಾಗಿಸಿಕೊಂಡು ಸುಳ್ಯದ ಕಡೆಗೆ ಪಿಕಪ್ ವಾಹನ ಬರುತ್ತಿತ್ತು. ಈ ವೇಳೆ ದುರಂತ ಸಂಭವಿಸಿದೆ. ಕೋಳಿಗಳನ್ನು ಮತ್ತೊಂದು ವಾಹನದ ಮೂಲಕ ಸುಳ್ಯದ ಕಡೆ ಕಳುಹಿಸಲಾಯಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.