ಸುಳ್ಯ

ಅರಂತೋಡು: ತರಬೇತಿ ಕಾರ್ಯಾಗಾರದ ಕುರಿತು ಪೂರ್ವಭಾವಿ ಸಭೆ, ಯುವಜನ ಸಂಯುಕ್ತ ಮಂಡಳಿ(ರಿ) ಸುಳ್ಯ, ಸ್ಪಂದನ ಗೆಳೆಯರ ಬಳಗ (ರಿ) ಅಡ್ತಲೆ ಪದಾಧಿಕಾರಿಗಳು ಭಾಗಿ

ನ್ಯೂಸ್ ನಾಟೌಟ್: ಯುವಜನ ಸಂಯುಕ್ತ ಮಂಡಳಿ(ರಿ) ಸುಳ್ಯ ವತಿಯಿಂದ ಸ್ಪಂದನ ಗೆಳೆಯರ ಬಳಗ (ರಿ) ಅಡ್ತಲೆ ಆಶ್ರಯದಲ್ಲಿ (ಡಿ17) ಮುಂಬರುವ ಭಾನುವಾರ ಯುವಕ-ಯುವತಿ ಮಂಡಲಗಳ ಒಂದು ದಿನದ ತರಬೇತಿ ಕಾರ್ಯಾಗಾರ ನಡೆಯಲಿದೆ. ಈ ತರಬೇತಿ ಕಾರ್ಯಗಾರದಲ್ಲಿ ಸಂಪಾಜೆ, ಅರಂತೋಡು, ಮರ್ಕಂಜ ಗ್ರಾಮ ವ್ಯಾಪ್ತಿಯಲ್ಲಿರುವ ಯುವಕ-ಯುವತಿಯರು ಪಾಲ್ಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಯುವಜನ ಸಂಯುಕ್ತ ಮಂಡಳಿ(ರಿ) ಸುಳ್ಯ, ಸ್ಪಂದನ ಗೆಳೆಯರ ಬಳಗ (ರಿ) ಅಡ್ತಲೆ ಪದಾಧಿಕಾರಿಗಳು ಡಿ10ರಂದು ಅರಂತೋಡಿನ ಸಿರಿಸೌಧ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಸಿದರು.

ಯುವಜನ ಸಂಯುಕ್ತ ಮಂಡಳಿಯ ನಿರ್ದೇಶಕ ಸುಬ್ರಮಣಿ ಪಿ.ವಿ ಹಾಗೂ ಲೋಹಿತ್ ಬಾಳಿಕಳ ಕಾರ್ಯಗಾರದ ಕುರಿತು ಮಾಹಿತಿ ನೀಡಿದರು. ಸಭೆಯಲ್ಲಿ ಗ್ರಾಮ ಪಂಚಾಯಿತ್ ಅಧ್ಯಕ್ಷ ಕೇಶವ ಅಡ್ತಲೆ , ಸ್ಪಂದನ ಗೆಳೆಯರ ಬಳಗದ ಅಧ್ಯಕ್ಷ ವಿನಯ್ ಬೆದ್ರುಪಣೆ ಹಾಗೂ ಅರಂತೋಡು ವ್ಯಾಪ್ತಿಯ ಎಲ್ಲಾ ಯುವಕ ಮಂಡಲಗಳ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಂಡಿದ್ದರು.
ವಿನಯ್ ಬೆದ್ರುಪಣೆ ಸ್ವಾಗತಿಸಿದರು. ರಂಜಿತ್ ಅಡ್ತಲೆ ವಂದಿಸಿದರು.

Related posts

ಸೆ.11 ರಂದು ಸುಳ್ಯ ತಾಲೂಕು ಕಚೇರಿ ಎದುರು ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ಭಾರಿ ಪ್ರತಿಭಟನೆ, ಬಿಜೆಪಿ ಯೋಜನೆಗಳಿಗೆ ಕತ್ತರಿ ಹಾಕಿದ ಕಾಂಗ್ರೆಸ್ ವಿರುದ್ಧ ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಆಕ್ರೋಶ

ಸುಳ್ಯ: ಶ್ರೀ ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ, ವಿದ್ಯಾರ್ಥಿಗಳೊಂದಿಗೆ ಅನುಭವ ಹಂಚಿಕೊಂಡ ಡಾ. ಎ.ಎನ್. ಕುಮಾರ್

ಸುಳ್ಯ ಕಾಂಗ್ರೆಸ್ ಭಿನ್ನಮತ ಶಮನ,ಪಕ್ಷದ ಹಿತಕ್ಕಾಗಿ ಜತೆಯಾಗಿ ಕೆಲಸ ಮಾಡಲು ರಮಾನಾಥ ರೈ ಸೂಚನೆ