ಕರಾವಳಿ

ಅರಂತೋಡು: ಬಟ್ಟೆ ಒಗೆಯಲೆಂದು ಹೋಗಿದ್ದ ಮಹಿಳೆ ನಾಪತ್ತೆ , ಹುಡುಕಾಟ ಶುರು

997

ಅರಂತೋಡು : ಬಟ್ಟೆ ಒಗೆಯಲೆಂದು ಹೊಳೆಗೆ ಹೋಗಿದ್ದ ಮಹಿಳೆ ನಾಪತ್ತೆಯಾದ ಘಟನೆ ಅರಂತೋಡು ಗ್ರಾಮದ ಉಳುವಾರಿನಿಂದ ವರದಿಯಾಗಿದೆ. ಉಳುವಾರು ಸಣ್ಣಮನೆಯ ಮಾಧವರವರ ಪತ್ನಿ ಮೀನಾಕ್ಷಿಯವರು ಸೆ. 11ರಂದು ಸಂಜೆ 5 ಗಂಟೆ ಸುಮಾರಿಗೆ ಅರಂತೋಡಿನ ಮಾಡದ ಬಳಿ ಇರುವ ಹೊಳೆಗೆ ಬಟ್ಟೆ ಒಗೆಯಲೆಂದು ಹೋದವರು ಇದುವರೆಗೆ ಮನೆಗೆ ಹಿಂತಿರುಗಲಿಲ್ಲ. ನಿನ್ನೆ ರಾತ್ರಿಯಿಂದ ಅರಂತೋಡು, ಗ್ರಾಮಸ್ಥರು ಹುಡುಕಾಟ ನಡೆಸಿದರೂ ಪತ್ತೆಯಾಗಲಿಲ್ಲ. ಇಂದು ಬೆಳಿಗ್ಗಿನಿಂದಲೇ ಹುಡುಕಾಟ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

See also  ಕೊಡಗು, ದಕ್ಷಿಣ ಕನ್ನಡ ಜಿಲ್ಲೆಗೆ ಭಾರಿ ಮಳೆ ಅಪ್ಪಳಿಸುವ ನಿರೀಕ್ಷೆ, ಕರಾವಳಿಗೆ ಇಂದಿನಿಂದ ಎಲ್ಲೋ ಅಲರ್ಟ್
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget