ಕ್ರೈಂ

ಅರಂತೋಡು: ಹಗ್ಗಜಗ್ಗಾಟದ ವೇಳೆ ಬುಗಿಲೆದ್ದ ಆಕ್ರೋಶ, ಮಾರಾಮಾರಿ

ಅರಂತೋಡು: ಇಲ್ಲಿನ ನಡೆದ ಹಗ್ಗಜಗ್ಗಾಟ ಸ್ಪರ್ಧೆಯ ವೇಳೆ ನಿಯಮಗಳ ಬಗ್ಗೆ ಸ್ಪರ್ಧಾಳುಗಳ ಮಧ್ಯೆ ಚರ್ಚೆ ಏರ್ಪಟ್ಟು ಹಗ್ಗವನ್ನು ಬಿಟ್ಟು ಸ್ಪರ್ಧಾಳುಗಳು ಪರಸ್ಪರ ಹೊಡೆದಾಡಿಕೊಂಡ ಘಟನೆ ಸುಳ್ಯ ತಾಲೂಕಿನ ಅರಂತೋಡಿನಲ್ಲಿ ನಡೆದಿದೆ.

ಅರಂತೋಡು ವಾಹನ ಚಾಲಕ ಮಾಲಕರ ಸಂಘದ ವತಿಯಿಂದ ಹಗ್ಗಜಗ್ಗಾಟ ಸ್ಪರ್ಧೆಯನ್ನು ಅರಂತೋಡಿನ ಸ. ಹಿ. ಪ್ರಾ. ಶಾಲೆಯ ಕ್ರೀಡಾಂಗಣದಲ್ಲಿ ನಡೆದ ಸ್ಪರ್ಧೆ ಆಯೋಜಿಸಿದ್ದರು. ಈ ಸಂದರ್ಭ ಸ್ಪರ್ಧೆಯ ಆಟದ ನಿಯಮಗಳ ಬಗ್ಗೆ ಇತ್ತಂಡದಲ್ಲಿ ಚರ್ಚೆ ಶುರುವಾಗಿದೆ. ಬಳಿಕ ಚರ್ಚೆ ವಿಕೋಪಕ್ಕೆ ತಿರುಗಿದೆ ಮಾತಿಗೆ ಮಾತು ಬೆಳೆದು ಪರಸ್ಪರ ಹೊಡೆದಾಡಿಕೊಂಡಿದ್ದಾರೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲಾದ ಬಗ್ಗೆ ಮಾಹಿತಿ ಲಭಿಸಿಲ್ಲ.‌ ಸದ್ಯ ಹೊಡೆದಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Related posts

ಕೋರ್ಟ್ ಆವರಣದಲ್ಲಿ ಮಹಿಳೆ ಮೇಲೆ ಗುಂಡಿನ ದಾಳಿ! ಆತನ ಹಿನ್ನೆಲೆ ಬಗ್ಗೆ ಪೊಲೀಸರು ಹೇಳಿದ್ದೇನು?

ಸುಳ್ಯ: ಕಲ್ಲುಮುಟ್ಲು ಎಂಬಲ್ಲಿ ರಿಕ್ಷಾ ಪಲ್ಟಿ..! ಅಜ್ಜಿಯೊಬ್ಬರ ಕೈ ಬೆರಳು ತುಂಡು..!

ಭೀಕರ ಅಪಘಾತಕ್ಕೆ ತುತ್ತಾದ ಮದುವೆಗೆಂದು ಧರ್ಮಸ್ಥಳಕ್ಕೆ ಹೊರಟಿದ್ದ ಬಸ್, ಕಂಟೈನರ್ ಲಾರಿಗೆ ಗುದ್ದಿ ಪುಡಿಪುಡಿ