ಶಿಕ್ಷಣಸುಳ್ಯ

ಅರಂತೋಡು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ, NMPUC ಅರಂತೋಡಿಗೆ ಶೇ.99 ಫಲಿತಾಂಶ

203

ನ್ಯೂಸ್ ನಾಟೌಟ್: ದ್ವಿತೀಯ ಪಿ.ಯು.ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು ಅರಂತೋಡು ಎನ್. ಎಂ.ಪಿ.ಯು. ಕಾಲೇಜಿನಲ್ಲಿ ಶೇ. 99 ಫಲಿತಾಂಶ ದಾಖಲಾಗಿದೆ. ಪರೀಕ್ಷೆಗೆ ಹಾಜರಾದ 170 ವಿದ್ಯಾರ್ಥಿಗಳಲ್ಲಿ 168 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ .

ಒಟ್ಟು 32 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 123 ವಿದ್ಯಾರ್ಥಿಗಳು ಪ್ರಥಮ ದರ್ಜೆ, ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 58 ವಿದ್ಯಾರ್ಥಿಗಳಲ್ಲಿ 57 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 98, ವಾಣಿಜ್ಯ ವಿಭಾಗದ 26 ವಿದ್ಯಾರ್ಥಿಗಳಲ್ಲಿ ಎಲ್ಲರೂ ಉತ್ತೀರ್ಣರಾಗಿ ಶೇ 100. ಮತ್ತು ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದ 35 ವಿದ್ಯಾರ್ಥಿಗಳಲ್ಲಿ ಎಲ್ಲರೂ ಉತ್ತೀರ್ಣರಾಗಿ ಶೇ.100 ಫಲಿತಾಂಶ ದಾಖಲಾಗಿದೆ. ವಾಣಿಜ್ಯ ಮತ್ತು ಗಣಕ ವಿಜ್ಞಾನ ವಿಭಾಗದ 51 ವಿದ್ಯಾರ್ಥಿಗಳಲ್ಲಿ 50 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.98. ವಿಜ್ಞಾನ ವಿಭಾಗದ ಪೃಥ್ವಿ ಸಾಗರ್.ಕೆ 569 ಅಂಕಗಳು, ವಾಣಿಜ್ಯ ವಿಭಾಗದ ಕರೀಷ್ಮ ಬಿ.ಜೆ 532 ಅಂಕಗಳು, ಕಲಾ ವಿಭಾಗದ ವಿದ್ಯಾ. ಬಿ 577 ಅಂಕಗಳು, ವಾಣಿಜ್ಯ ಮತ್ತು ಗಣಕ ವಿಜ್ಞಾನ ವಿಭಾಗದ ಚೇತನ್ ಕುಲಾಲ್ 569 ಅಂಕಗಳನ್ನು ಪಡೆದುಕೊಂಡು ಕಾಲೇಜಿಗೆ ಪ್ರಥಮ ಸ್ಥಾನಿಗಳಾಗಿದ್ದಾರೆ.

ಅತ್ಯುತ್ತಮ ಫಲಿತಾಂಶ ದಾಖಲಿಸಿದ ವಿದ್ಯಾರ್ಥಿಗಳನ್ನು ಕಾಲೇಜಿನ ಅಧ್ಯಕ್ಷರು,ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ -ಬೋಧಕೇತರ ವೃಂದದವರು ಅಭಿನಂದಿಸಿದ್ದಾರೆ.

See also  ಬ್ರೈನ್ ಎಮರೇಜ್‌ಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದ ರಿಕ್ಷಾ ಚಾಲಕ, ಚಿಕಿತ್ಸೆ ಫಲಿಸದೆ ಸಾವು
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget