ಕ್ರೈಂ

ಅರಂತೋಡು: ಕೋವಿಯಿಂದ ತಲೆಗೆ ಗುಂಡು ಹೊಡೆದುಕೊಂಡು ಸಾವಿಗೆ ಶರಣಾದ ಯುವಕ, ಯುವಕನ ಹವ್ಯಾಸವೇ ಸಾವಿಗೆ ಕಾರಣವಾಯ್ತಾ..?

ನ್ಯೂಸ್ ನಾಟೌಟ್: ಯುವಕನೊಬ್ಬ ತನ್ನ ಕೋವಿಯಿಂದ ತಾನೇ ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಸುಳ್ಯ ತಾಲೂಕಿನ ಉಬರಡ್ಕದಿಂದ ವರದಿಯಾಗಿದೆ.

ಮೃತ ಯುವಕ ಅರಂತೋಡು ಗ್ರಾಮದ ರವಿ ಎಂದು ಗುರುತಿಸಲಾಗಿದೆ.

ಬೆಳ್ರಂಪಾಡಿಯ ಮನೆಯೊಂದರಲ್ಲಿ ರವಿ ಕೆಲಸಮಯದಿಂದ ಕೆಲಸ ಮಾಡಿಕೊಂಡಿದ್ದ. ಈತನಿಗೆ ಮದ್ಯಪಾನ ಮಾಡುವ ಹವ್ಯಾಸವೂ ಇತ್ತು ಎನ್ನಲಾಗಿದೆ. ಇದೇ ನಿಶೆಯಲ್ಲಿ ಕಳೆದ ರಾತ್ರಿ ಕೋವಿ ಹಿಡಿದು ಗುಡ್ಡಕ್ಕೆ ಹೋಗಿದ್ದ ರವಿ ಅಲ್ಲಿ‌ ತಲೆಗೆ ಗುಂಡು ಹೊಡೆದುಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ತಕ್ಷಣ ಆಗಮಿಸಿ ತನಿಖೆ ನಡೆಸಿದ್ದಾರೆ. ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಇರಬಹುದು ಎಂದು ಶಂಕಿಸಲಾಗಿದೆ. ಪೊಲೀಸರು ತಮ್ಮ ತನಿಖೆಯನ್ನು ಮುಂದುವರಿಸಿದ್ದಾರೆ ಎಂದು ತಿಳಿದು ಬಂದಿದೆ.

Related posts

Poonam Pandey:ಖ್ಯಾತ ನಟಿ ಪೂನಂ ಪಾಂಡೆ ಕ್ಯಾನ್ಸರ್​ನಿಂದ ನಿಧನ, ಕೇವಲ 32 ವರ್ಷಕ್ಕೆ ದುರಂತ ಅಂತ್ಯ!

ದರ್ಶನ್ ಇರುವ ಬಳ್ಳಾರಿ ಜೈಲಿನಲ್ಲಿ ನಾಲ್ಕು ಅಡಿ ಎತ್ತರದ ಗಣೇಶನ ಮೂರ್ತಿ ಪ್ರತಿಷ್ಠಾಪನೆ, ಜೈಲಿನಲ್ಲಿ ಗಣೇಶ ಹಬ್ಬಕ್ಕೆ ಸ್ಟಾರ್ ಕಳೆ..!

ಮಹಿಳೆಯರ ಒಳಉಡುಪು ಧರಿಸಿ ಮಾರುಕಟ್ಟೆಯಲ್ಲಿ ಯುವಕನ ಅಶ್ಲೀಲ ರೀಲ್ಸ್..!​ ಸ್ಥಳೀಯರಿಂದ ಧರ್ಮದೇಟು, ಇಲ್ಲಿದೆ ವಿಡಿಯೋ