ಕರಾವಳಿ

ಅರಂತೋಡು: ಜೀವ ಕೈಯಲ್ಲಿ ಹಿಡಿದುಕೊಂಡೇ ಹೋಗಬೇಕಿರುವ ಯಮದಾರಿ..! ಜೀವನಷ್ಟಕ್ಕೂ ಮುನ್ನ ಎಚ್ಚೆತ್ತುಕೊಳ್ಳುವರೇ ಜನಪ್ರತಿನಿಧಿಗಳು, ಅಧಿಕಾರಿಗಳು..?

ನ್ಯೂಸ್ ನಾಟೌಟ್: ಜನ ಪರ ಇರಬೇಕಾಗಿರುವ ಜನಪ್ರತಿನಿಧಿಗಳು, ಅಧಿಕಾರಿಗಳು ಮಾಡಬೇಕಾದ ಕೆಲಸವನ್ನು ಮರೆತರೆ ಭಾರಿ ಅವಘಡಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಅಂತಹುದೇ ಒಂದು ಅವಘಡ ಇದೀಗ ಅರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಎದುರಾಗುವ ಆತಂಕವನ್ನು ಜನ ಎದುರಿಸುತ್ತಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಗಡಿ ಮಜಲು ಬಳಿ ಅಡ್ಕಬಳೆ-ರೆಂಜಳ-ಮರ್ಕಂಜ ಮತ್ತು ದೊಡ್ಡ ತೋಟಕ್ಕೆ ಸಂಪರ್ಕಿಸುವ ಕಾಂಕ್ರಿಟ್ ರಸ್ತೆಯಲ್ಲಿನ ಬರೆ ಕುಸಿತಗೊಂಡಿದೆ. ಎರಡೂ ಕಡೆ ಬರೆ ಕುಸಿದಿರುವುದರಿಂದ ಪ್ರತಿ ದಿನ ನೂರಾರು ಶಾಲೆ ಮಕ್ಕಳು ಮತ್ತು ನೂರಾರು ಸಂಖ್ಯೆಯಲ್ಲಿ ಸಾಗುವ ವಾಹನ ಸವಾರರು ಭಾರಿ ಸವಾಲನ್ನು ಎದುರಿಸುವಂತಾಗಿದೆ. ಧಾರ್ಮಿಕ ಕ್ಷೇತ್ರ ಸುಬ್ರಹ್ಮಣ್ಯಕ್ಕೂ ಈ ದಾರಿಯ ಮೂಲಕ ಕನೆಕ್ಟ್ ಆಗುತ್ತದೆ. ಪ್ರವಾಸಿಗರು ಕೂಡ ಕೆಲವು ಸಲ ಇದೇ ರಸ್ತೆಯಲ್ಲಿ ಪ್ರಯಾಣ ಮಾಡುತ್ತಾರೆ.

ಇಲ್ಲಿ ಎಚ್ಚರ ತಪ್ಪಿದರೆ ಭಾರಿ ಅವಘಡವೊಂದು ಎದುರಾಗುವ ಸಾಧ್ಯತೆ ಇದ್ದು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತು ಕ್ರಮ ತೆಗೆದುಕೊಳ್ಳಬೇಕಿದೆ. ಮುಂಬರುವ ಸಂಭವನೀಯ ದುರಂತವನ್ನು ತಪ್ಪಿಸಬೇಕೆಂದು ಸ್ಥಳೀಯರೊಬ್ಬರು ನ್ಯೂಸ್ ನಾಟೌಟ್ ಮಾಧ್ಯಮದ ಮೂಲಕ ಮನವಿ ಮಾಡಿದ್ದಾರೆ. ಬರೆ ಜರಿದಿರುವ ಎರಡೂ ಕಡೆಗಳಲ್ಲಿ ಅಪಾಯಕಾರಿ ಕೆರೆಗಳಿವೆ. ಒಂದು ಕೆರೆಯಲ್ಲಿ ಹೂಳು ತುಂಬಿಕೊಂಡಿದೆ.

ಅದು ಸುಮಾರು 15 ಅಡಿ ಇದೆ. ಮತ್ತೊಂದು ಕೆರೆಯಲ್ಲಿದ್ದ ಹೂಳು ತೆಗೆಯಲಾಗಿದೆ. ಈ ಕೆರೆಯು 20 ಅಡಿ ಆಳವಿದೆ. ಇಲ್ಲಿ ತಡೆಗೋಡೆ ಇಲ್ಲದಿರುವುದರಿಂದ ಬರೆ ಅಪಾಯಕಾರಿಯಾಗಿದೆ. ಯಾವುದೇ ಸಂದರ್ಭದಲ್ಲಿ ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಸುತ್ತ ಮುನ್ನೆಚ್ಚರಿಕೆ ಫಲಕ ಕೂಡ ಹಾಕಿಲ್ಲ. ಹೀಗಾಗಿ ಅರಂತೋಡು ಗ್ರಾಮ ಪಂಚಾಯತ್ ತಕ್ಷಣ ಇದನ್ನು ಸರಿಪಡಿಸಿ ಜನರ ಜೀವ ರಕ್ಷಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Related posts

ಪುತ್ತೂರು: ಕಂಬಳದ ಕೋಣಕ್ಕೆ ಹೊಡೆದರೂ ಶಿಕ್ಷೆಯಾಗುವ ಕಾಲವಿದು, ಹಿಂದೂ ಕಾರ್ಯಕರ್ತರಿಗೆ ಹೊಡೆಸಿದ್ದು ಕಾಂಗ್ರೆಸ್ ಎಂದ ಕಲ್ಲಡ್ಕ ಪ್ರಭಾಕರ್ ಭಟ್

ಮಡಿಕೇರಿ: ಮಾರ್ಚ್ 4 ಮತ್ತು 5 ರಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, ಲಾಂಛನ ಬಿಡುಗಡೆ

ಪುತ್ತೂರು:ನಾಮಪತ್ರ ಸಲ್ಲಿಸಲಿರುವ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ,ಖ್ಯಾತ ನಟಿ ಶೃತಿ ಪುತ್ತೂರಿಗೆ ಆಗಮನ