ಸುಳ್ಯ

ಅರಂತೋಡು : ಭೂತ್ ಅಧ್ಯಕ್ಷರ ಮನೆಗೆ ನಾಮಫಲಕ ಅಳವಡಿಕೆ

ಅರಂತೋಡು : ಇಲ್ಲಿನ ಅಡ್ತಲೆ ಬೂತ್ ಅಧ್ಯಕ್ಷರ ಮನೆಗೆ ನಾಮಫಲಕ ಅಳವಡಿಕೆ ಕಾರ್ಯಕ್ರಮ  ನಡೆಯಿತು. ಸುಳ್ಯ ಬಿ. ಜೆ. ಪಿ. ಮಂಡಲ ಸಮಿತಿಯ ಅಧ್ಯಕ್ಷ ಹರೀಶ್ ಕಂಜಿಪಿಲಿ ನೇತೃತ್ವದಲ್ಲಿ ಬೂತ್ ಅಧ್ಯಕ್ಷ ಲೋಹಿತ್ ಮೇಲೆ ಅಡ್ತಲೆಯವರ ಮನೆಗೆ ನಾಮಫಲಕ ಅಳವಡಿಸಿ ಕಾರ್ಯಕರ್ತರು ಉದ್ದೇಶಿಸಿ ಮಾತನಾಡಿ, ಕೇಂದ್ರ ಸರಕಾರದ ರಾಜ್ಯ ಸರಕಾರದ ಯೋಜನೆಗಳ ಸೌಲಭ್ಯಗಳನ್ನು ಪ್ರತಿ ಮನೆಗಳಿಗೆ ಮುಟ್ಟಿಸುವ ಕೆಲಸ ಮಾಡಬೇಕೆಂದರು. ಕಾರ್ಯಕ್ರಮದಲ್ಲಿ ಆರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷೆ  ಹರಿಣಿ ದೇರಾಜೆ ಉಪಾಧ್ಯಕ್ಷೆ ಕು. ಶ್ವೇತಾ ಅರಮನೆಗಯ, ಸದಸ್ಯರಾದ  ಸುಜಯ ಲೋಹಿತ್ ಮೇಲಡ್ತಲೆ, ಆರಂತೋಡು ಶಕ್ತಿ ಕೇಂದ್ರ ಪ್ರಮುಖ, ಪಂಚಾಯತ್ ಸದಸ್ಯ ಕೇಶವ ಅಡ್ತಲೆ, ಮಾಜಿ ತಾಲೂಕು ಪಂಚಾಯತ್ ಉಪಾಧ್ಯಕ್ಷೆ  ಪುಷ್ಪ ಮೇದಪ್ಪ ಉಳುವಾರು, ಮಂಡಲ ಸಮಿತಿ ಸದಸ್ಯರಾದ  ಭಾರತಿ ಪುರುಷೋತ್ತಮ ಉಳುವಾರು. ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ  ಗೀತಾ ಶೇಖರ್ ಹಾಗೂ ಬೂತ್ ಸಮಿತಿಯ ಸದಸ್ಯರು ಕಾರ್ಯಕರ್ತರು ಭಾಗವಹಿಸಿದ್ದರು. ಕೇಶವ ಅಡ್ತಲೆ ಎಲ್ಲರನ್ನೂ ಸ್ವಾಗತಿಸಿ ಲೋಹಿತ್ ಮೇಲಡ್ತಲೆ ವಂದಿಸಿದರು.

Related posts

ಸುಳ್ಯ: ಚಲಿಸುತ್ತಿದ್ದ ಓಮಿನಿ ಕಾರು ಪಲ್ಟಿ, ಚಾಲಕನಿಗೆ ಗಾಯ

ಗೂನಡ್ಕ: ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ವಾರ್ಷಿಕ ಸಭೆ, ನೂತನ ಸಮಿತಿಗೆ ಸೌಮ್ಯ ಸತ್ಯಜಿತ್ ಪೇರಡ್ಕ ಅಧ್ಯಕ್ಷೆ

ಮಡಿಕೇರಿ: ವರ್ತಕನ ಮೇಲೆ ಗುಂಡಿನ ದಾಳಿ