ಕರಾವಳಿ

ಅರಂತೋಡು: ಬೆಳಗ್ಗೆ ಎದ್ದು ಹೊಳೆಗೆ ಇಳಿದ ವ್ಯಕ್ತಿ ಕಾಲು ಜಾರಿ ನೀರಿಗೆ ಬಿದ್ರು, ಜೀವದ ಹಂಗು ತೊರೆದು ನೀರಿಗೆ ಧುಮುಕಿದ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ..!

ನ್ಯೂಸ್ ನಾಟೌಟ್: ಹೊಳೆಯ ನೀರಿಗಿಳಿದ ವ್ಯಕ್ತಿಯೊಬ್ಬರು ನೀರಿನಲ್ಲಿ ಇಂದು ಬೆಳಗ್ಗೆ (ಜೂ.28) ನೀರಿನಲ್ಲಿ ಮುಳುಗಿ ಸಾವಿಗೀಡಾಗಿರುವ ಘಟನೆ ಸುಳ್ಯ ತಾಲೂಕಿನ ಅರಂತೋಡಿನ ಅಡ್ಕಬಳೆಯಿಂದ ವರದಿಯಾಗಿದೆ.

ಅಡ್ಕಬಳೆಯ ಚನಿಯ ಬೆಳಗ್ಗೆ ಬೇಗ ಎದ್ದವರು ಮನೆ ಸಮೀಪದ ಹೊಳೆಗೆ ಹೋಗಿದ್ದರು. ಈ ವೇಳೆ ಅವರ ಕಾಲು ಜಾರಿದೆ. ಅವರು ನೀರಿಗೆ ಬಿದ್ದಿದ್ದಾರೆ. ಆಗ ಹತ್ತಿರದ ಮನೆಯವರು ಇದನ್ನು ಕಂಡು ಗಾಬರಿಯಿಂದ ಬೊಬ್ಬೆ ಹಾಕಿದ್ದಾರೆ. ಅಲ್ಲೇ ಇದ್ದ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಮನ್ಸ ಮುಗೇರ ಅನ್ನುವವರು ತಡ ಮಾಡದೆ ನೀರಿಗೆ ಇಳಿದಿದ್ದಾರೆ.

ಚನಿಯ ಅವರನ್ನು ಹಿಡಿದು ಮೇಲೆ ತರುವಲ್ಲಿ ಮನ್ಸ ಮುಗೇರರು ಯಶಸ್ವಿಯಾಗಿದ್ದಾರೆ. ಆದರೆ ಅಷ್ಟರ ಒಳಗಾಗಿ ಅವರ ಜೀವ ಕೂಡ ಹೋಗಿತ್ತು ಎಂದು ತಿಳಿದು ಬಂದಿದೆ. ಮೃತ ದೇಹವನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ತರಲಾಗಿದೆ.

Related posts

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೇರಿದ್ದ ನಿರ್ಬಂಧ ವಾಪಸ್

ಪಕ್ಷಾಂತರ ಪರ್ವ ನಡೆಯದಂತೆ ಕೈ ರಣತಂತ್ರ

ದಕ್ಷಿಣ ಕನ್ನಡದ ಶಾಲೆಗಳಲ್ಲಿ ಇನ್ನು ಶನಿವಾರದಂದು ಪೂರ್ಣ ದಿನದ ತರಗತಿ! ಸುಳ್ಯ ಬಿಇಒ ಹೊರಡಿಸಿದ್ದ ಸುತ್ತೋಲೆಯನ್ನು ಹಿಂಪಡೆದದ್ದು ಏಕೆ? ಯಾವಾಗಿನಿಂದ ಈ ಆದೇಶ ಜಾರಿ?