ನಮ್ಮ ತುಳುವೇರ್ರಾಜಕೀಯ

ಅರಗ ಜ್ಞಾನೇಂದ್ರ ವಿರುದ್ಧ ತುಳುವರ ಪ್ರತಿಭಟನೆಯ ಎಚ್ಚರಿಕೆ ! ಗುಳಿಗ ದೈವಕ್ಕೆ ಅವಮಾನ ಹಿನ್ನೆಲೆ ಕ್ಷಮೆಯಾಚಿಸುವಂತೆ ಜನಾಗ್ರಹ!

ನ್ಯೂಸ್ ನಾಟೌಟ್: ತುಳುನಾಡಿನ ಆರಾಧ್ಯ ಗುಳಿಗ ದೈವದ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ನಿಂದನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದ್ದು, ತೀರ್ಥಹಳ್ಳಿಯಲ್ಲಿ ನಡೆದ ಪಕ್ಷದ ಸಮಾವೇಶದಲ್ಲಿ ಅಪಮಾನ ಮಾಡಿದ್ದು, ಅವರು ತುಳುನಾಡಿಗೆ ಬಂದು ಬೇಷರತ್‌ ಕ್ಷಮೆ ಕೇಳಬೇಕು ಎಂದು ತುಳುನಾಡ ಜನರು ಆಗ್ರಹಿಸಿದ್ದಾರೆ.

ಕರಾವಳಿ ತುಳುನಾಡಿನ ಜನರು ಆರಾಧಿಸುವ ಗುಳಿಗ ದೈವದ ಆಧಾರಿತ ‘ಶಿವಧೂತೆ ಗುಳಿಗೆ’ ನಾಟಕ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ನೀಡಿರುವ ಹೇಳಿಕೆಯೊಂದು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಇವರು ಗುಳಿಗ ದೈವದ ಬಗ್ಗೆ ವ್ಯಂಗ್ಯವಾಗಿ ಮಾತನಾಡಿ ಅವಮಾನ ಮಾಡಿದ್ದಾರೆ ಎಂದು ತುಳು ಜನರು ಆರೋಪಿಸಿದ್ದು, ಅವರು ತುಳುನಾಡಿಗೆ ಬಂದು ಕ್ಷಮೆಯಾಚಿಸಬೇಕು ಎಂದು ಬೆಳ್ತಂಗಡಿಯ ನಲಿಕೆಯವರ ಸಮಾಜ ಸೇವಾ ಸಂಘ ಆಗ್ರಹಿಸಿದೆ. ಒಂದು ವಾರದೊಳಗೆ ಕ್ಷಮೆ ಕೇಳದಿದ್ದರೆ, ಕಪ್ಪು ಬಾವುಟ ಹಿಡಿದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಕಾರ್ಯಕ್ರಮದಲ್ಲಿ ಗೃಹ ಸಚಿವರು ಹೇಳಿದ್ದೇನು?

ತೀರ್ಥಹಳ್ಳಿಯ ಎಪಿಎಂಸಿ ಸಮೀಪ ನಡೆದ ರೈತ ಮೋರ್ಚಾ ಸಮಾವೇಶ ಉದ್ಘಾಟಿಸಿ ಮಾತನಾಡಿದ್ದ ಗೃಹಸಚಿವರು, ”ಮಹಿಳೆಯರ ಕಿವಿ ಮೇಲೆ ಜಾಗವೇ ಇಲ್ಲ, ಮನೆಮನೆಗೆ ಗ್ಯಾರಂಟಿ ಕಾರ್ಡ್ ಕೊಟ್ಟಿದ್ದಾರೆ. ನಿನ್ನೆಯಿಂದ ಇಲ್ಲಿ ಎಂಥದೋ ಗುಳಿಗೆ, ಗುಳಿಗೆ ಅಂತ ಹಾಕಿದ್ದಾರೆ. ವಾಲ್ ಪೋಸ್ಟ್ ನಲ್ಲಿ ನಿನ್ನೆ ರಾತ್ರಿ ಎಂಥದೋ ನಾಟಕ. ಇದು ಬಹಳ ಅಪಾಯ. ಇವರು ಯಾವ ಗುಳಿಗೆ ಕೊಡ್ತಾರೆ ಅಂತ ಗೊತ್ತಿಲ್ಲ, ಜಾಪಾಳ್ ಮಾತ್ರೆ ಗುಳಿಗೆ ಕೊಟ್ರು ಕೊಡಬಹುದು. ಇವರು ಹೊಸ ಹೊಸ ನಾಟಕ ಬೇರೆ ಶುರುಮಾಡಿದ್ದಾರೆ” ಎಂದು ಹೇಳಿದ್ದರು.

Related posts

ಪ್ರಧಾನಿ ಮೋದಿ-ಯೋಗಿ ಹೊಗಳಿದ್ದಕ್ಕೆ ಕಾರು ಹತ್ತಿಸಿ ಕೊಂದ ಅಮ್ಜದ್! ಮದುವೆಗೆ ಹೋಗಿದ್ದವ ಮಸಣ ಸೇರಿದ ದುರಂತ ಕಥೆ

ಬಿ.ಎಸ್ ಯಡಿಯೂರಪ್ಪ ತೇಜೋವಧೆ ಸರಿಯಲ್ಲ ಎಂದ ಕಾಂಗ್ರೆಸ್ ಸಚಿವ, ಬಿಎಸ್‌ ವೈ ಬೆನ್ನಿಗೆ ನಿಂತ ಆ ಸಚಿವ ಯಾರು..?

‘ನಾನು ಮೋದಿಯ ಅಭಿಮಾನಿ’ ಎಂದ ಎಲಾನ್ ಮಸ್ಕ್! ಭಾರತ ಪ್ರವೇಶಿಸಲಿದೆಯಾ ಟೆಸ್ಲಾ? ಇಲ್ಲಿದೆ ವೈರಲ್ ವಿಡಿಯೋ