ದೇಶ-ವಿದೇಶವೈರಲ್ ನ್ಯೂಸ್ಸಿನಿಮಾ

ಎ.ಆರ್‌.ರೆಹಮಾನ್‌ ತಂಡದಲ್ಲಿದ್ದ ಗಿಟಾರ್ ವಾದಕಿಯೂ ಗಂಡನಿಂದ ವಿಚ್ಚೇದನ..! ಎ.ಆರ್‌.ರೆಹಮಾನ್‌ ಪತ್ನಿ ವಿಚ್ಚೇದನ ಘೋಷಿಸಿದ ಬೆನ್ನಲ್ಲೇ ಈ ಬೆಳವಣಿಗೆ..!

222

ನ್ಯೂಸ್ ನಾಟೌಟ್ : ಆಸ್ಕರ್‌ ಪ್ರಶಸ್ತಿ ಪುರಸ್ಕೃತ ಸಂಗೀತ ನಿರ್ದೇಶಕ ಎ.ಆರ್‌.ರೆಹಮಾನ್‌ ತಮ್ಮ 29 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯವಾಡಿದ್ದಾರೆ. ಈ ಸುದ್ದಿ ಚರ್ಚೆಯಲ್ಲಿರುವಾಗಲೇ ಮತ್ತೊಂದು ವಿಚ್ಚೇದನ ಸುದ್ದಿ ಹೊರಬಿದ್ದಿದೆ.

ಎ.ಆರ್‌.ರೆಹಮಾನ್‌ ತಂಡದಲ್ಲಿ ಸದಸ್ಯೆ ಆಗಿರುವ ಗಿಟಾರ್ ವಾದಕಿ ಮೋಹಿನಿ ದೇ (Mohini Dey) ಎಂಬಾಕೆ ತಮ್ಮ ಪತಿ, ಸಂಗೀತ ಸಂಯೋಜಕ ಮಾರ್ಕ್ ಹಾರ್ಟ್ಸುಚ್‌ ನಿಂದ (Mark Hartsuch) ದೂರವಾಗಿರುವುದಾಗಿ ಘೋಷಣೆ ಮಾಡಿದ್ದಾರೆ.

ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಮೋಹಿನಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ಪರಸ್ಪರ ಒಪ್ಪಿಗೆಯಿಂದಲೇ ನಾವು ಬೇರೆ ಆಗುತ್ತಿದ್ದೇವೆ. ನಾವು ಉತ್ತಮ ಸ್ನೇಹಿತರಾಗಿಯೇ ಇರುತ್ತೇವೆ. ಜೀವನದಲ್ಲಿ ವಿಭಿನ್ನ ವಿಷಯಗಳನ್ನು ಹುಡುಕಲು ಬಯಸುತ್ತೇವೆ. ನಾವು ಬೇರೆ ಆಗಿದ್ದರೂ ವಿವಿಧ ಪ್ರಾಜೆಕ್ಟ್‌ ಗಳಲ್ಲಿ ಜತೆಯಾಗಿ ಕೆಲಸ ಮಾಡಲಿದ್ದೇವೆ ಎಂದು ಮೋಹಿನಿ ಹೇಳಿದ್ದಾರೆ.

ಮೋಹಿನಿ ಕೋಲ್ಕತ್ತಾ ಮೂಲದ ಬೇಸ್‌ ಗಿಟಾರ್ ಪ್ಲೇಯರ್ ಆಗಿದ್ದು, ಗಾನ್ ಬಾಂಗ್ಲಾ ಅವರ ‘ವಿಂಡ್ ಆಫ್ ಚೇಂಜ್‌’ ಮೂಲಕ ಜನಪ್ರಿಯರಾಗಿದ್ದಾರೆ. ಅವರು ವಿಶ್ವಾದ್ಯಂತ 40 ಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ರೆಹಮಾನ್ ಅವರ ಶೋನಲ್ಲಿ ಕಾಣಿಸಿಕೊಂಡಿದ್ದಾರೆ.

Click

https://newsnotout.com/2024/11/lady-dance-in-tawel-and-misbehaviour-infront-of-india-gate/
https://newsnotout.com/2024/11/govt-site-kannada-news-school-police-district-administration/
https://newsnotout.com/2024/11/notice-lokayukta-sp-kannada-news-sm-siddaramayya/
https://newsnotout.com/2024/11/music-composer-ar-rehaman-divorce-kannada-news-viral-news-f/
https://newsnotout.com/2024/11/paris-kananda-news-rajasthan-air-india-viral-news-pilot/
https://newsnotout.com/2024/11/indian-marriage-kannada-news-viral-video-money-pouring-viral-d/
https://newsnotout.com/2024/11/kannada-news-viral-video-pakisthan-beggers-family-donate-food/
See also  ಮಂಗಳೂರು: ಕುಡಿಯುವ ನೀರಿಗಾಗಿ ಸಹಾಯವಾಣಿ..! ಇಲ್ಲಿದೆ ಸಂಪೂರ್ಣ ಮಾಹಿತಿ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget