ಕರಾವಳಿಕ್ರೈಂಮಂಗಳೂರು

ಬೆಳ್ತಂಗಡಿ:1.35 ಲಕ್ಷ ರೂ. ಮೌಲ್ಯದ ಅಡಿಕೆ ಕಳವು..! ಗೋದಾಮಿನ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು

223

ನ್ಯೂಸ್ ನಾಟೌಟ್: ಗೋದಾಮಿನ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು 1.35 ಲಕ್ಷ ರೂ. ಮೌಲ್ಯದ ಅಡಿಕೆ ಕಳವುಗೈದ ಘಟನೆ ಬುಧವಾರ(ಎ.3) ಬೆಳ್ತಂಗಡಿಯ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ತಣ್ಣೀರುಪಂಥ ಎಂಬಲ್ಲಿ ನಡೆದಿದೆ.

ತಣ್ಣೀರುಪಂಥ ನಿವಾಸಿ ಅಬ್ದುಲ್ ಹಕೀಂ ಎಂಬವರು ಈ ಬಗ್ಗೆ ಪೊಲೀಸ್ ದೂರು ನೀಡಿದ್ದಾರೆ. ಎ.2ರಂದು ಸಂಜೆಯ ವೇಳೆ ಸುಲಿಯದ ಅಡಿಕೆಯನ್ನು 75 ಗೋಣಿ ಚೀಲಗಳಲ್ಲಿ ತುಂಬಿಸಿ ಮನೆ ಸಮೀಪವೇ ಇರುವ ಗೋದಾಮಿನಲ್ಲಿ ಇಟ್ಟು ಬೀಗ ಹಾಕಿದ್ದರು. ಎ 3ರಂದು ಬೆಳಗ್ಗೆ ನೋಡಿದಾಗ ಗೋದಾಮಿನ ಬಾಗಿಲು ತುಂಡಾಗಿ ಬಿದ್ದಿರುವುದು ಕಂಡುಬಂದಿದ್ದು ಪರಿಶೀಲಿಸಿದಾಗ ಗೋದಾಮಿನ ಒಳಗಿದ್ದ 25 ಅಡಿಕೆ ಚೀಲಗಳು ಕಳವಾಗಿರುವುದು ಕಂಡುಬಂದಿದೆ. ಕಳ್ಳತನವಾಗಿರುವ ಅಡಿಕೆಯ ಒಟ್ಟು ಮೌಲ್ಯ 1,35,000 ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿ ತಿಳಿಸಿದೆ.

See also  ಅಶ್ಲೀಲ ವಿಡಿಯೋ ನೋಡುತ್ತಾನೆಂದು ಮಗನಿಗೆ ವಿಷ ಹಾಕಿದ ತಂದೆ..! ಇಲ್ಲಿದೆ ಭಯಾನಕ ಸ್ಟೋರಿ
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget