Uncategorized

ಬಿಜೆಪಿ ಅಭ್ಯರ್ಥಿ ಮತ್ತೆ ಸುಳ್ಯಕ್ಕೆ, ಎ.17 ಕ್ಕೆ ಬ್ರಿಜೇಶ್ ಚೌಟ ಸುಳ್ಯ ಪ್ರವಾಸ

ನ್ಯೂಸ್ ನಾಟೌಟ್: 3 ವಾರಗಳ ಹಿಂದೆ ಮಾರ್ಚ್ 20 ರಂದು ಸುಳ್ಯಕ್ಕೆ ಭೇಟಿ ನೀಡಿದ್ದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತೆ ಎ.17 ರಂದು ಸುಳ್ಯ ವಿಧಾನಸಭಾ ಕ್ಷೇತ್ರದ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ವರದಿ ತಿಳಿಸಿದೆ.‌

ಎ.17 ರಂದು ಬೆಳಿಗ್ಗೆ 8 ಗಂಟೆಗೆ ಮಂಡೆಕೋಲು ಸಹಕಾರಿ ಸಂಘದ ಸಭಾಂಗಣದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಲಿದ್ದು, ಬೆಳಿಗ್ಗೆ 10 ಗಂಟೆಗೆ ಕೆ.ವಿ.ಜಿ ಕ್ಯಾಂಪಸ್ ಭೇಟಿ, ಬೆಳಿಗ್ಗೆ 11 ಗಂಟೆಗೆ ಅರಂತೋಡು ಸಹಕಾರಿ ಸಂಘದ ಸಭಾಭವನದಲ್ಲಿ ಕಾರ್ಯಕರ್ತರ ಸಭೆ, ಅಪರಾಹ್ನ 1 ಗಂಟೆಗೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ದರ್ಶನ ಪಡೆಯಲಿದ್ದಾರೆ ಎನ್ನಲಾಗಿದೆ.

ಅಪರಾಹ್ನ 2.30 ಕ್ಕೆ ಗುತ್ತಿಗಾರಿನ ಹಿರಿಯ ಕಾರ್ಯಕರ್ತರಾದ ಬಿ.ಕೆ.ಬೆಳ್ಯಪ್ಪ ಗೌಡ ಕಡ್ತಲ್ಕಜೆಯವರ ಮನೆ ಭೇಟಿ, ಅಪರಾಹ್ನ 3.00 ಗಂಟೆಗೆ ಹರಿಹರ, ಕೊಲ್ಲಮೊಗ್ರ, ಬಾಳುಗೋಡು ಕಾರ್ಯಕರ್ತರ ಸಭೆ ಹರಿಹರದಲ್ಲಿ ನಡೆಯಲಿದೆ. ಅಪರಾಹ್ನ 3.30 ಕ್ಕೆ ಕಡಬ ತಾಲೂಕಿನ ಕುಲ್ಕುಂದ ಬಸವೇಶ್ವರ ದೇವಸ್ಥಾನ ಭೇಟಿ, ದೇವರ ದರ್ಶನ, 4 ಗಂಟೆಗೆ ಕೊಂಬಾರು ಗ್ರಾಮದ ಬೋಲ್ನಡ್ಕದಲ್ಲಿ ಕಾರ್ಯಕರ್ತರ ಭೇಟಿ, ಅಪರಾಹ್ನ 4.30 ಕ್ಕೆ ಮರ್ಧಾಳ ಮಹಾಲಿಂಗೇಶ್ವರ ದೇವಸ್ಥಾನ ಭೇಟಿ, ದೇವರ ದರ್ಶನ, 5.00 ಕ್ಕೆ ಇಚ್ಲಂಪಾಡಿ ಶ್ರೀ ಉಳ್ಳಾಲ್ತಿ ದೇವಸ್ಥಾನ ಭೇಟಿ, ದೇವರ ದರ್ಶನ, 5.30 ಕ್ಕೆ ಗೋಳಿತ್ತೊಟ್ಟು ಶ್ರೀ ಸಿದ್ದಿವಿನಾಯಕ ಸಭಾಭವನದಲ್ಲಿ ಕಾರ್ಯಕರ್ತರ ಸಭೆ ನಡೆಯಲಿದೆ.

Related posts

ಏಳನೇ ಮಗುವಿಗೆ ಜನ್ಮ ನೀಡಿ ಆಸ್ಪತ್ರೆಯಲ್ಲೇ ಬಿಟ್ಟುಹೋದ ತಾಯಿ..!2 ವರ್ಷದ ಹಿಂದೆಯೇ ಕೊನೆಯುಸಿರೆಳೆದ ಗಂಡ..!

ಅಪ್ಪನ ಧ್ವನಿ ಕೇಳುತ್ತಿದ್ದಂತೆ ಬಿಕ್ಕಿ-ಬಿಕ್ಕಿ ಅತ್ತ ಡ್ರೋಣ್ ಪ್ರತಾಪ್..! ಬಿಗ್ ಬಾಸ್ ಮನೆಯಲ್ಲಿ ಕಣ್ಣೀರ ಕೋಡಿ,3 ವರ್ಷದಿಂದ ಮನೆಯವರಿಂದ ಪ್ರತಾಪ್ ದೂರವಾಗಿದ್ದೇಕೆ..?

ಶಾಲೆಗೆ ತಡವಾಗಿ ಬಂದ ಶಿಕ್ಷಕಿಗೆ ಬೂಟಿನಿಂದ ಹೊಡೆದ ಪ್ರಾಂಶುಪಾಲ