ಕ್ರೀಡೆ/ಸಿನಿಮಾರಾಜಕೀಯ

ನೋವಿನಲ್ಲಿದ್ದರೂ ರಿಷಬ್‌ ಪಂತ್‌ ಗೆ ಕರೆ ಮಾಡಿ ಸಾಂತ್ವನ ಹೇಳಿದ ಮೋದಿ

270

ನ್ಯೂಸ್ ನಾಟೌಟ್ : ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನಿನ್ನೆ ತಾನೆ ತನ್ನ ತಾಯಿಯನ್ನು ಕಳೆದುಕೊಂಡ ನೋವಿನಲ್ಲಿ ಇದ್ದರೂ ಅಪಘಾತಕ್ಕೀಡಾಗಿರುವ ಟೀಮ್ ಇಂಡಿಯಾ ಆಟಗಾರ ರಿಷಬ್‌ ಪಂತ್‌ ಅವರ ಯೋಗಕ್ಷೇಮವನ್ನು ವಿಚಾರಿಸಿ, ಸರಳತೆಯನ್ನು ಮೆರೆದಿದ್ದಾರೆ.

ಆರೋಗ್ಯ ಕ್ಷೇಮ ವಿಚಾರಣೆ:

ಡಿ. 30 ರಂದು ಬೆಳಗ್ಗೆ ಬಿಎಂಡಬ್ಲು ಕಾರು ಭೀಕರ ಅಪಘಾತದಲ್ಲಿ ಗಾಯಗೊಂಡಿದ್ದ ರಿಷಬ್‌ ಪಂತ್‌ ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಮಯದಲ್ಲಿ ಪ್ರಧಾನಿ ಮೋದಿಯವರು ತಾನು ತಾಯಿಯನ್ನು ಕಳೆದು ಕೊಂಡ ದುಖಃದ ನಡುವೆಯೂ ನಿನ್ನೆ ಸಂಜೆ ರಿಷಬ್‌ ಪಂತ್‌ ತಾಯಿಯೊಂದಿಗೆ ದೂರವಾಣಿ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ. ರಿಷಬ್‌ ಪಂತ್‌ ಅವರ ಆರೋಗ್ಯ ಕ್ಷೇಮವನ್ನು ವಿಚಾರಿಸಿದ್ದಾರೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಸುದ್ದಿಸಂಸ್ಥೆ ‘ಎಎನ್‌ಐ’ ಮಾಹಿತಿ ನೀಡಿದೆ. ಮೋದಿಯವರು ಇದಕ್ಕು ಮುನ್ನ ತಮ್ಮ ಟ್ವಿಟರ್ ಖಾತೆಯಲ್ಲಿ ‘ಕ್ರಿಕೆಟಿಗ ರಿಷಬ್ ಪಂತ್ ಅವರ ಅಪಘಾತದಿಂದ ನೊಂದಿದ್ದೇನೆ. ಅವರ ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ನಾನು ಪ್ರಾರ್ಥಿಸುತ್ತೇನೆ’ ಎಂದು ಬರೆದುಕೊಂಡಿದ್ದರು.

See also  ಎದೆಯೆತ್ತರಕ್ಕೆ ಬೆಳೆದ ಮಗನ ಎದುರೇ ಹನಿಮೂನ್ ಗೆ ಹೊರಟ ಖ್ಯಾತ ನಟ..! 33 ವರ್ಷದ ಬ್ಯೂಟಿ ಜೊತೆಗೆ 57 ವರ್ಷದ ನಟನ ಹನಿಮೂನ್ ಬಗ್ಗೆ ನೆಟ್ಟಿಗರು ಹೇಳಿದ್ದೇನು?
  Ad Widget   Ad Widget     Ad Widget   Ad Widget   Ad Widget   Ad Widget