ಬೆಂಗಳೂರು

ಕೇಂದ್ರ ಸಚಿವ ಅನುರಾಗ್ ಗೆ ಹಿರಿಯ ಕಬಡ್ಡಿ ಪಟು ಹೊನ್ನಪ್ಪ ಗೌಡ ಮನವಿ

ಬೆಂಗಳೂರು: ಉದ್ಯಾನನಗರಿಯ ಬೆಂಗಳೂರಿನಲ್ಲಿ ಎಸ್‌ಟಿಸಿ ಕಬಡ್ಡಿ ಕೇಂದ್ರವನ್ನು ವಾಪಸ್‌ ಆರಂಭಿಸಬೇಕು, ಮಹಿಳೆಯರಿಗಾಗಿಯೇ ರಾಜ್ಯದಲ್ಲಿ ಪ್ರತ್ಯೇಕ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ಕೇಂದ್ರ ತೆರೆಯಬೇಕು, ಸಾಯ್‌ ಕೋಚ್ ಗಳಿಗೆ ಉದ್ಯೋಗ ಭದ್ರತೆ ಕಲ್ಪಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್‌ ಅವರಿಗೆ ಅರ್ಜುನ ಪ್ರಶಸ್ತಿ ವಿಜೇತ, ಹಿರಿಯ ಕಬಡ್ಡಿ ಪಟು ಹಾಗೂ ಹಾಲಿ ಭಾರತದ ಸರಕಾರದ ಆಲ್‌ ಇಂಡಿಯಾ ಸ್ಪೋರ್ಟ್ಸ್ ಕೌನ್ಸಿಲ್ ಸದಸ್ಯ ಹೊನ್ನಪ್ಪ ಗೌಡ ಮನವಿ ಮಾಡಿದ್ದಾರೆ.

ಅನುರಾಗ್ ಠಾಕೂರ್‌ ಗೆ ನೀಡಿದ ಮನವಿ ಪತ್ರ

ಭಾನುವಾರ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅನುರಾಗ್ ಠಾಕೂರ್‌ ಮನವಿ ಪತ್ರ ಸ್ವೀಕರಿಸಿ ಮಾತನಾಡಿ, ಎಲ್ಲ ಬೇಡಿಕೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು. ಸಂಸದ ತೇಜಸ್ವಿ ಸೂರ್ಯ, ರಾಜ್ಯ ಕ್ರೀಡಾ ಸಚಿವ ನಾರಾಯಣ ಗೌಡ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

Related posts

ಟೆಕ್ಕಿಯೊಬ್ಬ 8 ದಿನಗಳಿಂದ ನಿಗೂಢ ನಾಪತ್ತೆ..! ಹುಡುಕಿಕೊಡುವಂತೆ ‘ಎಕ್ಸ್’​ ಮೂಲಕ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ ಪತ್ನಿ..!

ಪವಿತ್ರಾಗೌಡ ಜಾಮೀನು ಅರ್ಜಿಯ ವಿಚಾರಣೆ ಮುಂದೂಡಿಕೆ, ದರ್ಶನ್ ಜಾಮೀನು ಅರ್ಜಿ ನ.21 ಕ್ಕೆ ಮರು ವಿಚಾರಣೆ

ಅಮೆರಿಕ ಆತಿಥ್ಯದ ಕರಾಟೆ ಚಾಂಪಿಯನ್ ಶಿಪ್‌: ಬೆಂಗಳೂರಿನ ಚೈತ್ರಾಶ್ರೀ ಗೆ ಚಿನ್ನ, ಕಂಚು