ನ್ಯೂಸ್ ನಾಟೌಟ್: ಸುಳ್ಯ ಕಲ್ಲುಗುಂಡಿಯ ನೆಲ್ಲಿಕುಮೇರಿಯಲ್ಲಿರುವ ಶ್ರೀ ಮುತ್ತು ಮಾರಿಯಮ್ಮ ದೇವಿಯ ಹಾಗೂ ಪರಿವಾರ ದೈವಗಳ ವಾರ್ಷಿಕ ಜಾತ್ರೋತ್ಸವವು ಎ.18ರಿಂದ ಎ.20ರವರೆಗೆ ನಡೆಯಲಿದೆ.ಕುಂಟಾರು ಬ್ರಹ್ಮಶ್ರೀ ರವೀಶ ತಂತ್ರಿಯವರ ಶುಭಾರ್ಶೀವಾದದೊಂದಿಗೆ ಗಣಹೋಮ,ವಿವಿಧ ವೈಧಿಕ,ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ. ಜಾತ್ರೋತ್ಸವದ ಪ್ರಯುಕ್ತ ಎ.11ಕ್ಕೆ 9 ಗಂಟೆಗೆ ಸರಿಯಾಗಿ ಗೊನೆ ಕಡಿಯುವ ಕಾರ್ಯಕ್ರಮವಿರಲಿದೆ.
ಈ ವೈಭವದ ಜಾತ್ರೋತ್ಸವದಲ್ಲಿ ಎಲ್ಲರೂ ಭಾಗವಹಿಸಿ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಗೌರವಾಧ್ಯಕ್ಷ ಕೆ.ಜಿ.ರಾಜಾರಾಮ ಕೀಲಾರು, ಮೊಕ್ತೇಸರರಾದ ಶ್ರೀ ಎಸ್.ಪಳನಿವೇಲು,ಗೌರವ ಸಲಹೆಗಾರರಾದ ಬಿ.ಆರ್ ಪದ್ಮಯ್ಯ,ಅಧ್ಯಕ್ಷರಾದ ಜ್ಞಾನಶೀಲ ವಿ(ರಾಜು)ಗೌರವ ಸಲಹೆಗಾರ ಶಿವಲಿಂಗಮ್ ಎರುಕಡುಪು ಹಾಗೂ ಪ್ರಧಾನ ಅರ್ಚಕರಾದ ಸೂರ್ಯ ಪ್ರಸಾದ್ ಭಟ್ , ಪೂಜಾಕರ್ಮಿ ಸೆಲ್ವರಾಜ್ ಕೊಯನಾಡು ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಆಡಳಿತ ಸಮಿತಿ , ಬ್ರಹ್ಮಕಲಶೋತ್ಸವ ಸಮಿತಿ, ನವರಾತ್ರಿ ಉತ್ಸವ ಸಮಿತಿ , ಶ್ರೀ ಮುತ್ತು ಮಾರಿಯಮ್ಮ ಸೇವಾ ಟ್ರಸ್ಟ್(ರಿ)ನೆಲ್ಲಿಕುಮೇರಿ ಫ್ರೆಂಡ್ಸ್ ಕ್ಲಬ್(ರಿ) ಹಾಗೂ ಊರ ಸಮಸ್ತ ಭಗವದ್ಭಕ್ತರು ವಿನಂತಿಸಿಕೊಂಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ನಾಗಮುತ್ತು (ಖಜಾಂಜಿ) 9632653201
ತ್ಯಾಗರಾಜ್ (ಕಾರ್ಯದರ್ಶಿ) 9900998047
ಪಿ.ವಿ.ಸುಬ್ರಮಣಿ (ಪ್ರ.ಕಾರ್ಯದರ್ಶಿ)ಶ್ರೀ ಮುತ್ತು ಮಾರಿಯಮ್ಮ ಸೇವಾ ಟ್ರಸ್ಟ್ (ರಿ)ನೆಲ್ಲಿಕುಮೇರಿ 9663660291 ಸಂಪರ್ಕಿಸಬಹುದು.