ಕರಾವಳಿಕಾಸರಗೋಡುಸುಳ್ಯ

ಸುಳ್ಯಕ್ಕೆ ಬರ್ತಿದ್ದಾರೆ ಯುವಕರ ಸ್ಫೂರ್ತಿ ‘ಸಿಂಗಂ’ ಅಣ್ಣಾಮಲೈ..!

373

ನ್ಯೂಸ್ ನಾಟೌಟ್: ತಮಿಳುನಾಡು  ರಾಜಕೀಯ ವಲಯದ ಸೆನ್ಸೆಷನಲ್ ನಾಯಕ, ಬಿಜೆಪಿಯ ಫೈಯರ್ ಬ್ರ್ಯಾಂಡ್, ‘ಸಿಂಗಂ’ ಖ್ಯಾತಿಯ ಖಡಕ್ ಪೊಲೀಸ್ ಅಧಿಕಾರಿಯಾಗಿ ಗರ್ಜಿಸಿದ್ದ ಅಣ್ಣಾಮಲೈ ಮಾ.27ರಂದು ಸುಳ್ಯಕ್ಕೆ ಆಗಮಿಸುತ್ತಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಸುಳ್ಯದ ಕೆ.ವಿ.ಜಿ ಮೆಡಿಕಲ್ ಕಾಲೇಜಿನಲ್ಲಿ ನಡೆಯಲಿರುವ ಯುವ ಸಂವಾದ ಕಾರ್ಯಕ್ರಮದಲ್ಲಿ ಅಣ್ಣಾಮಲೈ ಪಾಲ್ಗೊಳ್ಳಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಸಂವಾದ ನಡೆಯಲಿದೆ ಎಂದು ಕೆ.ವಿ.ಜಿ ಮೆಡಿಕಲ್ ಕಾಲೇಜು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ವೇಳೆ ಅವರು ವಿದ್ಯಾರ್ಥಿಗಳ ಭವಿಷ್ಯ, ಮತದಾನದ ಹಕ್ಕು ಸೇರಿದಂತೆ ಹಲವು ಮಹತ್ವದ ವಿಚಾರದ ಬಗ್ಗೆ ಮಾತನಾಡಲಿದ್ದಾರೆ ಎನ್ನಲಾಗಿದೆ.

ಸದ್ಯ ಅಣ್ಣಾ ಮಲೈ ಯವರು ತಮಿಳುನಾಡಿನಲ್ಲಿ ಬಿಜೆಪಿ ಪಕ್ಷವನ್ನು ಕಟ್ಟುವ ಕೆಲಸದಲ್ಲಿ ನಿರತರಾಗಿದ್ದಾರೆ. ತಮಿಳುನಾಡಿನ  ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಅವರನ್ನು ಕರೆಯಲಾಗುತ್ತಿದೆ. ಭಾರೀ ಸಂಖ್ಯೆಯಲ್ಲಿ ಜನ ಬೆಂಬಲ ಹೊಂದಿರುವ ಅಣ್ಣಾ ಮಲೈ ಕರ್ನಾಟಕದಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡಿದ್ದರು, ಇದೀಗ ಅಣ್ಣಾ ಮಲೈ ಆಗಮನ ಸಹಜವಾಗಿಯೇ ಸುಳ್ಯದ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ.

See also  ಸುಳ್ಯ: ಕೆ.ವಿ.ಜಿ. ಕಾನೂನು ಕಾಲೇಜಿಗೆ ಆಡಳಿತಾಧಿಕಾರಿ ನೇಮಕ, ಪ್ರೊ ಕೆ.ವಿ. ದಾಮೋದರ ಗೌಡ ಅವರಿಗೆ ಹೊಸ ಜವಾಬ್ದಾರಿ
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget