ಕ್ರೈಂರಾಜ್ಯವೈರಲ್ ನ್ಯೂಸ್

ಆಂಜನೇಯ ಗುಡಿ ಪೂಜಾರಿಯ ಪತ್ನಿಗೆ ಮುಸ್ಲಿಂ ಯುವಕ ಮೆಸೇಜ್..! ಹನುಮ ಜಯಂತಿಯಂದೇ ಯುವಕನನ್ನು ಕೊಂದ ಅರ್ಚಕ

ನ್ಯೂಸ್ ನಾಟೌಟ್: ಮುಸ್ಲಿಂ ಯುವಕನ ಬರ್ಬರ ಹತ್ಯೆ ನಡೆದಿದ್ದು, ರಾಯಚೂರಿನ ತುಗ್ಗಲದಿನ್ನಿ ಗ್ರಾಮದಲ್ಲಿರುವ ಆಂಜನೇಯ ಗುಡಿ ಪೂಜಾರಿಯ ಪತ್ನಿಗೆ ಮುಸ್ಲಿಂ ಯುವಕ ಮೆಸೇಜ್ ಮಾಡಿದ್ದಕ್ಕೆ ಹತ್ಯೆ ನಡೆದಿದೆ ಎನ್ನಲಾಗಿದೆ.

ಖಾದರ್ ಭಾಷಾ (28) ಕೊಲೆಯಾದವನು. ಮಾರುತಿ ಆರೋಪಿಯಾಗಿದ್ದಾನೆ. ಪತ್ನಿ‌ ಮೇಲೆ ಕಣ್ಣು ಹಾಕಿದ ಖಾದರ್‌ ಭಾಷಾನ ಕಣ್ಣು ಕಿತ್ತು ಹಾಕಿ, ಮುಖದ ಗುರುತು ಸಿಗದಂತೆ ಕೊಚ್ಚಿ ಕೊಲೆ ಮಾಡಲಾಗಿದೆ. ಹನುಮ ಜಯಂತಿ ದಿನದಂದೆ ಬರ್ಬರವಾಗಿ ಕೊಲೆಗೈಯಲಾಗಿದೆ. ಇಬ್ಬರೂ ಮಸ್ಕಿ ತಾಲೂಕಿನ ಬಳಗಾನೂರು ಗ್ರಾಮದ ನಿವಾಸಿಗಳಾಗಿದ್ದಾರೆ. ಮಾರುತಿ ಕೊಲೆಗೈದು ತಾನೇ ಖುದ್ದಾಗಿ ಠಾಣೆಗೆ ಬಂದು ಶರಣಾಗತಿ ಆಗಿದ್ದಾನೆ. ಮಂಗಳವಾರ ಬೆಳಗ್ಗೆ 9 ಗಂಟೆಗೆ ಸುಮಾರಿಗೆ ತುಗ್ಗಲದಿನ್ನಿ ಗ್ರಾಮದಲ್ಲಿ ಕೃತ್ಯ ನಡೆದಿದೆ.

ಕೊಲೆಯಲ್ಲಿ 6 ರಿಂದ 7 ಜನ ಭಾಗಿಯಾಗಿರುವ ಶಂಕೆ ಇದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಕ್ತಸಿಕ್ತವಾಗಿ ಬಿದ್ದಿದ್ದ ಖಾದರ್‌ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಬಳಗಾನೂರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.

Related posts

ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ, ಶೇ.99.17 ಫಲಿತಾಂಶದೊಂದಿಗೆ ಮಿಂಚಿದ ಸುಳ್ಯದ NMPUC ವಿದ್ಯಾರ್ಥಿಗಳು..!

ನಿಧಿಗಾಗಿ ಜ್ಯೋತಿಷಿಯನ್ನೇ ಕಿಡ್ಯಾಪ್ ಮಾಡಿದ್ರಾ..? 16 ಲಕ್ಷ ರೂ. ಪಡೆದದ್ದೇಕೆ ಜ್ಯೋತಿಷಿ..? ಏನಿದು ರೋಚಕ ಸ್ಟೋರಿ?

ಮಹಿಳೆಗೆ ಮದ್ಯ ಕುಡಿಸಿ, ಹಾಡಹಗಲೇ ಫುಟ್ಪಾತ್ ನಲ್ಲಿ ಅತ್ಯಾಚಾರ..! ತಡೆಯದೆ ವಿಡಿಯೋ ಮಾಡುತ್ತಾ ನಿಂತ ಜನ..!