ವೈರಲ್ ನ್ಯೂಸ್

ಆ ಒಂದು ಕಾರಣಕ್ಕೆ ಕರಡಿ ವೇಷ ಧರಿಸಿ ಹೊಲದಲ್ಲೆಲ್ಲ ಓಡಾಡಿದ ಯುವಕ..! ಏನಿದು ವಿಚಿತ್ರ ಘಟನೆ?

288

ನ್ಯೂಸ್ ನಾಟೌಟ್: ರೈತರು ತಾವು ಬೆಳೆದ ಬೆಳೆಗಳನ್ನು ಪ್ರಾಣಿ, ಪಕ್ಷಿಗಳಿಂದ ರಕ್ಷಿಸಿಕೊಳ್ಳುವುದು ಹಲವರಿಗೆ ಅದೊಂದು ದೊಡ್ಡ ಸವಾಲು. ಅದಕ್ಕಾಗಿ ಹಲವು ಉಪಾಯಗಳನ್ನು ಅನುಸರಿಸುತ್ತಾರೆ. ಆದರೆ ಉತ್ತರಪ್ರದೇಶದ ರೈತನೊಬ್ಬ ಬೆಳೆ ರಕ್ಷಣೆಗಾಗಿ ತಾನೇ ಕರಡಿ ವೇಷ ಧರಿಸಿ ಹೊಲದಲ್ಲಿ ಓಡಾಡುತ್ತಿರುವ ರೈತನ ಫೋಟೊಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗುತ್ತಿವೆ.

ಪ್ರಾಣಿಗಳು ಮನುಷ್ಯರಿಗಿಂತ ಬುದ್ಧಿವಂತರಾಗಿವೆ. ಅವು ಬೆಚ್ಚಪ್ಪಗಳಿಗೆ ಹೆದರುವ ಕಾಲ ಹೋಗಿದೆ. ಇದನ್ನು ಮನಗಂಡ ಉತ್ತರಪ್ರದೇಶದ ಲಖಿಂಪುರ ಖೇರಿಯ ಹಳ್ಳಿಯೊಂದರ ರೈತರು ಭಿನ್ನ ಮಾರ್ಗ ಹಾಗೂ ವಿಶಿಷ್ಠ ಪರಿಹಾರವೊಂದನ್ನು ಕಂಡುಕೊಂಡಿದ್ದಾರೆ.
ಇಲ್ಲಿನ ರೈತರು ತಾವು ಬೆಳೆದ ಬೆಳೆಗೆ ಮಂಗಗಳು ಹಾನಿ ಮಾಡುವುದನ್ನು ನೋಡಿ ಕಂಗೆಟ್ಟಿದ್ದರು. ರೈತರ ಯಾವುದೇ ಉಪಾಯಗಳು ಫಲ ನೀಡಿರಲಿಲ್ಲ. ಮಂಗಗಳು ಬೆಳೆ ಹಾನಿ ಮಾಡುತ್ತಿರುವ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಅವರಿಂದಲೂ ಪರಿಹಾರ ಸಿಕ್ಕಿರಲಿಲ್ಲ. ಇದರಿಂದ ತಲೆಕೆಡಿಸಿಕೊಂಡ ರೈತನೊಬ್ಬ ತಾನೇ ಕರಡಿ ವೇಷ ಧರಿಸುತ್ತಾನೆ. ಅಲ್ಲದೆ ಕರಡಿ ವೇಷ ಧರಿಸಿ ಹೊಲದಲ್ಲಿ ಓಡಾಡಲು ಆರಂಭಿಸುತ್ತಾನೆ. ಇದರಿಂದ ಮಂಗಗಳು ಹೆದರಿ ದಿಕ್ಕಪಾಲಾಗಿ ಓಡಿವೆ ಮತ್ತು ಉಪಾಯ ಫಲಿಸಿದೆ ಎನ್ನುವುದು ರೈತನ ಅಭಿಪ್ರಾಯ.

ʼ40 ರಿಂದ 45 ಮಂಗಗಳು ನಮ್ಮ ಹೊಲಗಳಿಗೆ ದಾಳಿ ಮಾಡಿ, ಬೆಳೆ ಹಾನಿ ಮಾಡುತ್ತಿದ್ದವು. ಈ ಬಗ್ಗೆ ನಾವು ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಅವರು ಗಮನ ಹರಿಸಿರಲಿಲ್ಲ. ಹಾಗಾಗಿ ನಾವೇ ನಮ್ಮ ಬೆಳೆಗಳನ್ನು ರಕ್ಷಿಸಲು ನಿರ್ಧಾರ ಮಾಡಿದೆವು, ಅಲ್ಲದೆ 4000ರೂ ಖರ್ಚು ಮಾಡಿ ಈ ವೇಷಭೂಷಣ ಖರೀದಿಸಿದೆವುʼ ಎಂದು ಅಲ್ಲಿನ ರೈತ ಗಜೇಂದರ್‌ ಸಿಂಗ್ ಹೇಳಿರುವುದು ವರದಿಯಾಗಿದೆ.

See also  3 ವರ್ಷದ ಮಗುವಿಗೆ ಅಮಾನವೀಯವಾಗಿ ಥಳಿಸಿದ ತಾಯಿ..! ಸಚಿವೆಯ ಸೂಚನೆಯ ಮೇರೆಗೆ ಪ್ರಕರಣ ದಾಖಲು..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget