ಬೆಂಗಳೂರು

ಪ್ರೈವೇಟ್ ಕಾರ್ ಬಿಟ್ಟು BMTC ಬಸ್ ಏರಿದ ಸ್ಪಿನ್ ಗಾರುಡಿಗ..! ಸ್ಪಿನ್ ದಂತಕಥೆ ಅನಿಲ್ ಕುಂಬ್ಳೆ ಸಾಮಾನ್ಯರಂತೆ ಬಸ್ ಪ್ರಯಾಣ ಮಾಡಿದ್ಯಾಕೆ?

160

ನ್ಯೂಸ್ ನಾಟೌಟ್ : ಸೆಲೆಬ್ರೆಟಿಗಳು ಅಂದಾಕ್ಷಣ ಜನರ ಕಣ್ಣಿಗೆ ಕಾಣ್ಸೋದೇ ಇಲ್ಲ. ಇನ್ನು ಅವರು ಜನರ ಮಧ್ಯೆ ಓಡಾಡ್ತಾರೆ ಅಂದ್ರೆ ಅದು ಕನಸಿನ ಮಾತು. ಅಭಿಮಾನಿಗಳು ಅವರನ್ನು ಕಾಣಬೇಕೆಂದ್ರೆ ಹರಸಾಹಸವನ್ನೇ ಪಡಬೇಕು.ಆದರೆ ಇಲ್ಲೊಬ್ಬ ಸೆಲೆಬ್ರಿಟಿಯೊಬ್ಬರು ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸಿ ಸರಳತೆಯನ್ನು ಮೆರೆದು ಭಾರಿ ವೈರಲಾಗಿದ್ದಾರೆ.

ಭಾರತದ ಕ್ರಿಕೆಟ್‌ ತಂಡದ ಮಾಜಿ ನಾಯಕ ಹಾಗೂ ಕೋಚ್ ಅನಿಲ್ ಕುಂಬ್ಳೆ ಅವರು ಕೆಂಪೇಗೌಡ ಏರ್ಪೋರ್ಟ್​​ನಿಂದ ಬೆಂಗಳೂರಿಗೆ ಬಿಎಂಟಿಸಿ ಬಸ್​​ನಲ್ಲಿ ಪ್ರಯಾಣ ಮಾಡಿದ್ದಾರೆ. ಈ ಫೋಟೋಗಳು ಸೋಶಿಯಲ್​​ ಮೀಡಿಯಾದಲ್ಲಿ ಇದೀಗ ಬಾರಿ ವೈರಲ್​​ ಆಗಿದೆ.

ಬಂದ್ ಹಿನ್ನಲೆಯಲ್ಲಿ ಅನಿಲ್ ಕುಂಬ್ಳೆ ಅವರು ಈ ನಿರ್ಧಾರ ತೆಗೆದುಕೊಳ್ಳುವ ಪರಿಸ್ಥಿತಿ ಬಂದೊದಗಿತು. ಏರ್‌ಪೋರ್ಟ್ ಟ್ಯಾಕ್ಸಿ‌ ಇಲ್ಲದೇ ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಬೆಂಗಳೂರಿನ ಬನಶಂಕರಿಯಲ್ಲಿರುವ ತಮ್ಮ ಮನೆಗೆ ಬಿಎಂಟಿಸಿ ಬಸ್​​ನಲ್ಲಿ ಪ್ರಯಾಣ ಮಾಡಿದ್ದಾರೆ.ಈ ಕುರಿತಾಗಿ ಅವರೇ ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇಂದು ವಿಮಾನ ನಿಲ್ದಾಣದಿಂದ ಬಿಎಂಟಿಸಿ ಬಸ್​​ ಮೂಲಕವಾಗಿ ಮನೆಗೆ ಪ್ರಯಾಣಿಸಿದೆ ಎಂದು ಬರೆದುಕೊಂಡು ಬಸ್​ನಲ್ಲಿ ಕ್ಲಿಕ್ಕಿಸಿದ ಸೆಲ್ಫಿಯನ್ನು ಟ್ವೀಟ್​​ ಮಾಡಿದ್ದಾರೆ.  ಈ ಫೋಟೋ ನೋಡಿದ ನೆಟ್ಟಿಗರು ಅನಿಲ್ ಕುಂಬ್ಳೆ ಅವರ ಸರಳತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

See also  ಮೆಟ್ರೋದಲ್ಲಿ ಪ್ರಯಾಣಿಸುವ ಯುವತಿಯರ ವಿಡಿಯೋ ಅಪ್ಲೋಡ್‌ ಮಾಡಿದ ಪೇಜ್‌ ವಿರುದ್ಧ ಎಫ್‌.ಐ.ಆರ್‌, 13ಕ್ಕೂ ಹೆಚ್ಚು ವಿಡಿಯೋ ಅಪ್‌ ಲೋಡ್‌..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget   Ad Widget