ವಿಡಿಯೋವೈರಲ್ ನ್ಯೂಸ್

‘ಆಂಗ್ರಿ ರಾಂಟ್‌ಮ್ಯಾನ್’ ಖ್ಯಾತಿಯ ಯೂಟ್ಯೂಬರ್ ಹಠಾತ್ ನಿಧನ..! 27ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ ಸಿನಿಮಾ ವಿಮರ್ಶಕ

ನ್ಯೂಸ್ ನಾಟೌಟ್: ಸಾಮಾಜಿಕ ಮಾಧ್ಯಮಗಳಲ್ಲಿ ಆಂಗ್ರಿ ರಾಂಟ್‌ಮಾನ್ ಎಂದೇ ಜನಪ್ರಿಯವಾಗಿದ್ದ ಯೂಟ್ಯೂಬರ್ ಮತ್ತು ಸಿನಿಮಾ ವಿಮರ್ಶಕ ಅಬ್ರದೀಪ್ ಸಹಾ ಅವರು 27ನೇ ವಯಸ್ಸಿಗೆ ಸಾವನ್ನಪ್ಪಿದ್ದಾರೆ. ಹಠಾತ್ ಸಾವು ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ದಿಗ್ಭ್ರಾಂತರನ್ನಾಗಿಸಿದೆ. ಏಪ್ರಿಲ್ 16ರ ತಡರಾತ್ರಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಅವರ ಕುಟುಂಬ ಸದಸ್ಯರು, ಬಂಧುಗಳು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಅವರ ಹಿಂಬಾಲಕರು ಈ ಸುದ್ದಿಯಿಂದ ಶಾಕ್‌ಗೆ ಒಳಗಾಗಿದ್ದಾರೆ.

ಅಬ್ರದೀಪ್ ಆಗಸ್ಟ್ 18, 2017ರಂದು ಯೂಟ್ಯೂಬ್ ಚಾನೆಲ್ ಆರಂಭಿಸಿದರು. ಅಪ್‌ಲೋಡ್‌ ಮಾಡಿದ ಮೊದಲ ವಿಡಿಯೋದಲ್ಲಿ “ನಾನು ಅನ್ನಾಬೆಲ್ಲೆ ಚಲನಚಿತ್ರವನ್ನು ಏಕೆ ನೋಡುವುದಿಲ್ಲ” ಎಂದು ವಿಡಿಯೋ ಮಾಡಿದ್ದರು. ದಿ ಕಾಂಜ್ಯೂರಿಂಗ್ ನೋಡಿದ ಬಳಿಕ ಹಾರರ್ ಸಿನಿಮಾಗಳನ್ನು ನೋಡಲು ನನಗೆ ಭಯವಾಗುತ್ತದೆ ಎಂದು ಹೇಳಿದ್ದರು. ಆ್ಯಂಗ್ರಿ ರಾಂಟ್‌ಮ್ಯಾನ್ ಕಳೆದ ತಿಂಗಳು ಪ್ರಮುಖ ಆಪರೇಷನ್ ಮಾಡಿದ್ದರಿಂದ ಆಸ್ಪತ್ರೆಯಲ್ಲಿದ್ದಾರೆ ಎಂದು ಅವರ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಇತ್ತೀಚಿನ ಪೋಸ್ಟ್‌ಗಳು ತಿಳಿಸಿವೆ. ಮೂರು ದಿನಗಳ ಹಿಂದೆ ಮತ್ತೊಂದು ಪೋಸ್ಟ್ ಮಾಡಲಾಗಿದೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಂದು ತಿಳಿಸಲಾಗಿತ್ತು.

2018ರ ಡಿಸೆಂಬರ್ ತಿಂಗಳಿನಲ್ಲಿ ಬಿಡುಗಡೆಯಾದ ಕೆಜಿಎಫ್‌ ಸಿನಿಮಾ ವಿಮರ್ಶೆ ಮಾಡುವ ಮೂಲಕ ಅಬ್ರದೀಪ್ ಸಹಾ ಭಾರಿ ಹೆಸರು ಮಾಡಿದ್ದರು. ಕೆಜಿಎಫ್ ಸಿನಿಮಾವನ್ನು ಹೊಗಳಿದ್ದ ಅವರು, ಬಾಲಿವುಡ್ ಸಿನಿಮಾರಂಗವನ್ನು ತರಾಟೆಗೆ ತೆಗೆದುಕೊಂಡಿದ್ದರು. ಸಿನಿಮಾ ಹೇಗೆ ಮಾಡಬೇಕು ಎಂದು ದಕ್ಷಿಣ ಭಾರತೀಯ ಚಿತ್ರರಂಗ ನೋಡಿ ಕಲಿಯಿರಿ ಎಂದು ಹೇಳಿದ್ದರು. ಅವರ ವಿಡಿಯೋ ವ್ಯಾಪಕ ವೈರಲ್ ಆಗಿತ್ತು, ಮಾಧ್ಯಮಗಳಲ್ಲಿ ಕೂಡ ಅವರ ಬಗ್ಗೆ ವರದಿಗಳು ಬಂದಿದ್ದವು, ಅದಾದ ಬಳಿಕ ಅವರನ್ನು ಆಂಗ್ರಿ ರಾಂಟ್‌ಮಾನ್ ಎಂದೇ ಎಲ್ಲರೂ ಕರೆಯಲು ಆರಂಭಿಸಿದರು. ಪ್ರಸ್ತುತ ಆಂಗ್ರಿ ರಾಂಟ್‌ಮಾನ್ ಯೂಟ್ಯೂಬ್ ಚಾನೆಲ್‌ನಲ್ಲಿ 4.80 ಲಕ್ಷ ಚಂದಾದಾರರನ್ನು ಹೊಂದಿದ್ದಾರೆ.

Related posts

‘ಕೈ ನಡುಕ, ಅಸ್ಪಷ್ಟ ಮಾತು’ ಪುನೀತ್ ರಾಜ್ ಕುಮಾರ್ ನ ಆಪ್ತ ವಿಶಾಲ್‌ ಗೆ ಏನಾಗಿದೆ..? ನಟನ ಆಘಾತಕಾರಿ ವಿಡಿಯೋ ವೈರಲ್..!

ಚಂದ್ರಯಾನ-3 ಬಗ್ಗೆ ಕೋಡಿಮಠದ ಸ್ವಾಮೀಜಿ ಹೇಳಿದ್ದೇನು? ವಿಷಾನಿಲ ಬೀಸುವ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಸ್ವಾಮೀಜಿ! ಇಲ್ಲಿದೆ ಸಂಪೂರ್ಣ ಮಾಹಿತಿ

2 ವರ್ಷದಿಂದ ಪ್ರೀತಿಸಿದ್ದ ಯುವತಿಗೆ ಗ್ರಾಮಸ್ಥರ ಮುಂದೆಯೇ ಚಾಕು ಇರಿತ..! ಯುವಕ ಪರಾರಿ..!