ಮಡಿಕೇರಿ: ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಅಂಗಾರ ಅವರು ಇಂದು ಕುಶಾಲನಗರದಲ್ಲಿರುವ ಹಾರಂಗಿ ಅಣೆಕಟ್ಟಿನ ಬಳಿ ಇರುವ ಮೀನುಮರಿ ಪಾಲನಾ ಕೇಂದ್ರಕ್ಕೆ ಭೇಟಿ ನೀಡಿದರು. ಮೀನು ಮರಿ ಉತ್ಪಾದನಾ ಪ್ರಕ್ರಿಯೆ ವೀಕ್ಷಣೆ ಮಾಡಿದ ನಂತರ ಇಲಾಖಾಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ತನ್ನ ಕೃಷಿ ಕೊಳಗಳಲ್ಲಿ ಮೀನು ಸಾಕಣೆ ಮಾಡಿ ಮಾರಾಟ ಮಾಡುವ ಗರಸಂದೂರು ಎಂ.ಟಿ.ವಿಜಯೇಂದ್ರರವರ ಮೀನು ಕೃಷಿ ಕೊಳಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.