ಕ್ರೈಂರಾಜ್ಯ

ಮಕ್ಕಳ ಮೇಲೆ ಕುಸಿದು ಬಿದ್ದ ಅಂಗನವಾಡಿಯ ಛಾವಣಿ..! ಮಕ್ಕಳು ಆಸ್ಪತ್ರೆಗೆ ದಾಖಲು..!

243

ನ್ಯೂಸ್‌ ನಾಟೌಟ್ : ಅಂಗನವಾಡಿ ಕೇಂದ್ರದ ಸೀಲಿಂಗ್ (ಛಾವಣಿ) ಕುಸಿದು ಬಿದ್ದು ನಾಲ್ಕು ಮಕ್ಕಳು ಗಾಯಗೊಂಡಿರುವ ಘಟನೆ ಕೊಪ್ಪಳ (Koppala) ಜಿಲ್ಲೆಯ ಗಂಗಾವತಿಯ ಮಹೆಬೂಬ ನಗರದ 7ನೇ ವಾರ್ಡ್‌ನ 11ನೇ ಅಂಗನವಾಡಿ ಕೇಂದ್ರದಲ್ಲಿ ಇಂದು (ಸೆ.23) ಬೆಳಗ್ಗೆ ನಡೆದಿದೆ.

ಘಟನೆಯಲ್ಲಿ ನಾಲ್ಕರಿಂದ ಐದು ವರ್ಷದೊಳಗಿನ ಅಮಾನ್ ಸೈಯದ್, ಮರ್ದಾನ್, ಮಾನ್ವಿತಾ, ಸುರಕ್ಷಾ ಎಂಬ ಮಕ್ಕಳು ಗಾಯಗೊಂಡಿದ್ದಾರೆ. ಗಾಯಾಳು ಮಕ್ಕಳನ್ನು ಸ್ಥಳೀಯರು ತಕ್ಷಣ ಸರ್ಕಾರಿ ಉಪ ವಿಭಾಗ ಆಸ್ಪತ್ರೆಗೆ ದಾಖಲಿಸಿದ್ದಾರೆ. ಎಲ್ಲಾ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.

ಕಳೆದ ಮೂರು ದಿನಗಳ ರಜೆಯ ಬಳಿಕ ಇಂದು ಎಂದಿನಂತೆ ಅಂಗನವಾಡಿ ಕೇಂದ್ರ ಆರಂಭವಾಗಿದೆ. ಕೇಂದ್ರದ ಶಿಕ್ಷಕಿ ಹಸೀನಾ ಸುಮಾರು 20ಕ್ಕೂ ಹೆಚ್ಚು ಮಕ್ಕಳನ್ನು ವೃತ್ತಾಕಾರದಲ್ಲಿ ಕೂರಿಸಿ ಪಾಠ ಮಾಡುತ್ತಿದ್ದರು. ಈ ವೇಳೆ ಕಟ್ಟಡದ ಸೀಲಿಂಗ್ ಕುಸಿದು ಬಿದ್ದಿದೆ.

Click

https://newsnotout.com/2024/09/renukaswamy-case-bail-sanctioned-to-16-accused-kannada-news/
https://newsnotout.com/2024/09/darshan-thugudeepa-kannada-news-actor-bail-appeal-in-court-kannada/
https://newsnotout.com/2024/09/6-year-old-baby-trapped-by-man-saved-by-monkey-kannada-news/
See also  ಡಿಸಿಎಂ ಡಿಕೆಶಿ ವಿರುದ್ಧ CBI ತನಿಖೆ ವಾಪಸ್ ಪಡೆದ ಸರ್ಕಾರ‌..! ಸರ್ಕಾರದ ವಿರುದ್ಧ ಕೋರ್ಟ್ ಮೊರೆ ಹೋಗ್ತಾರಾ ಯತ್ನಾಳ್?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget