ಕರಾವಳಿವೈರಲ್ ನ್ಯೂಸ್ಸುಳ್ಯ

ಸುಳ್ಯ: ಅಂಗನವಾಡಿಗೆ ಸಿಕ್ಕಿಲ್ಲ ಆಹಾರ ಧಾನ್ಯ..! ಮಕ್ಕಳು, ಗರ್ಭಿಣಿಯರಿಗೆ ಎದುರಾದ ಸಮಸ್ಯೆಯನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗೆ ತಲುಪಿಸಿದ ‘ನ್ಯೂಸ್ ನಾಟೌಟ್’

267

ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ಫೆಬ್ರವರಿಯಲ್ಲಿ ಫಲಾನುಭವಿಗಳಿಗೆ ಸಿಗಬೇಕಾದ ಆಹಾರ ಧಾನ್ಯಗಳು ಇನ್ನೂ ಅಂಗನವಾಡಿಯಿಂದ ಸಿಕ್ಕಿಲ್ಲ. ಇದರಿಂದ ಮಕ್ಕಳು, ಗರ್ಭಿಣಿಯರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಗರ್ಭಿಣಿಯೊಬ್ಬರು ಸುಳ್ಯದ ಬೀರಮಂಗಲದಲ್ಲಿರುವ ಅಂಗನವಾಡಿಗೆ ಸರ್ಕಾರದಿಂದ ಸಿಗುವ ಫುಡ್ ಗೆ ಹೋದ ಸಂದರ್ಭದಲ್ಲಿ ಈ ವಿಚಾರ ಗಮನಕ್ಕೆ ಬಂತು. ಫುಡ್ ಬಂದಿಲ್ಲ. ೧ ತಿಂಗಳಾಗಿದೆ ಅನ್ನುವ ಉತ್ತರ ಸಿಕ್ಕಿತು. ಈ ಬಗ್ಗೆ ನ್ಯೂಸ್ ನಾಟೌಟ್ ತಂಡ ಮಾಹಿತಿಯನ್ನು ಸಂಗ್ರಹಿಸಿತು. ಈ ವೇಳೆ ಅಲ್ಲಿನ ಸಿಬ್ಬಂದಿ ಹೇಳಿದ ಪ್ರಕಾರ ಕಳೆದ ಒಂದು ತಿಂಗಳಿನಿಂದ ಆಹಾರ ಧಾನ್ಯಗಳೇ ಸರ್ಕಾರದಿಂದ ಬಂದಿಲ್ಲ. ಮಕ್ಕಳಿಗೆ ಅಕ್ಕಿ ಸಮಸ್ಯೆ ಎದುರಾಗಿರುವುದರಿಂದ ಇದೀಗ ಪೋಷಕರೇ ಮನೆಯಿಂದ ಅಂಗನವಾಡಿ ಕೇಂದ್ರಕ್ಕೆ ತಂದುಕೊಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು. ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡ ನ್ಯೂಸ್ ನಾಟೌಟ್ ತಂಡ ಅಲ್ಲಿಂದಲೇ ನೇರವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮಾಧ್ಯಮ ಸಲಹೆಗಾರ ಹಿರಿಯ ಪತ್ರಕರ್ತ ರಘುನಾಥ್ ಅವರಿಗೆ ಕರೆ ಮಾಡಿ ವಾಸ್ತವ ವಿಚಾರವನ್ನು ತಿಳಿಸಿತು. ಇದಕ್ಕೆ ತಕ್ಷಣ ಸ್ಪಂದಿಸಿದ ಅವರು ಇದನ್ನು ಸಚಿವರ ಗಮನಕ್ಕೆ ತಂದು ಮಂಗಳೂರಿನಲ್ಲಿರುವ ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತರುತ್ತೇವೆ. ಆದಷ್ಟು ಬೇಗ ಸಮಸ್ಯೆಯನ್ನು ಇತ್ಯರ್ಥ ಪಡಿಸುತ್ತೇವೆ ಎಂದು ತಿಳಿಸಿದರು.

See also  ನಾಳೆ ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ-ಕಾಲೇಜಿಗೆ ರಜೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget