ಕರಾವಳಿಕ್ರೈಂ

ಆನೆಗುಂಡಿ: ಬೆಕ್ಕು ನುಂಗಿ ಒದ್ದಾಡುತ್ತಿದ್ದ ಹೆಬ್ಬಾವಿನ ದೇಹದೊಳಗೆ 11 ಏರ್‌ ಬುಲ್ಲೆಟ್ ಪತ್ತೆ..! ಹಲವು ವರ್ಷಗಳ ಹಿಂದೆ ಏರ್ ಗನ್ ನಿಂದ ಶೂಟ್ ಮಾಡಿರುವ ಶಂಕೆ

ನ್ಯೂಸ್ ನಾಟೌಟ್: ಪರ್ಶಿಯನ್ನು ಬೆಕ್ಕನ್ನು ತಿಂದು ನುಂಗಲಾಗದೆ ಒದ್ದಾಡುತ್ತಿದ್ದ ಹೆಬ್ಬಾವಿನ ದೇಹದೊಳಗೆ ಏರ್ ಗನ್ ನಿಂದ ಶೂಟ್ ಮಾಡಿರುವ ಹನ್ನೊಂದು 11 ಬುಲೆಟ್ ಪತ್ತೆಯಾಗಿದೆ. ಈ ಘಟನೆ ಮಂಗಳೂರಿನ ಆನೆಗುಂಡಿ ಬಳಿ ನಡೆದಿದೆ.

ಇದನ್ನು ಗಮನಿಸಿ ಕೆಲವರು ತಕ್ಷಣ ಉರಗ ತಜ್ಞರಿಗೆ ಕರೆ ಮಾಡಿದರು. ಆಗ ಹೆಬ್ಬಾವನ್ನು ಹಿಡಿದು ತಪಾಸಣೆ ನಡೆಸಿದಾಗ ದೇಹದೊಳಗೆ 11 ಏರ್ ಗನ್ ಬುಲ್ಲೆಟ್ ಪತ್ತೆಯಾಗಿದೆ. ಇದು ಹಲವು ವರ್ಷಗಳ ಹಿಂದಿನದ್ದು ಆಗಿರಬಹುದು. ಏಕೆಂದರೆ ಬುಲ್ಲೆಟ್ ಮೇಲೆ ಚರ್ಮ ಬೆಳೆದಿದೆ ಎಂದು ಪಶು ವೈದ್ಯ ಯಶಸ್ವಿ ತಿಳಿಸಿದ್ದಾರೆ. ಸದ್ಯ ಎರಡು ಬುಲ್ಲೆಟ್ ಅನ್ನು ಹೊರಗೆ ತೆಗೆಯಲಾಗಿದೆ. ಉಳಿದ ಬುಲೆಗಳನ್ನು ತೆಗೆಯುವಂತಹ ಕೆಲಸ ನಡೆಯುತ್ತಿದೆ. ಸದ್ಯ ಹೆಬ್ಬಾವು ಚೇತರಿಸಿಕೊಳ್ಳುತ್ತಿದೆ ಎಂದು ತಿಳಿದು ಬಂದಿದೆ.

Related posts

ಇಂದಿರಾ ಗಾಂಧಿಯಂತೆ ಮಮತಾ ಬ್ಯಾನರ್ಜಿಯನ್ನು ಕೊಲ್ಲಿ ಎಂದ 18ರ ಯುವತಿ..! ಪ್ರಚೋದನಕಾರಿ ಪೋಸ್ಟ್ ಹಾಕಿದ್ದಕ್ಕೆ ವಿದ್ಯಾರ್ಥಿನಿಯ ಬಂಧನ..!

ಹಿರಿಯ ಚಲನಚಿತ್ರ ನಟ ಎಸ್. ಶಿವರಾಂ ಇನ್ನಿಲ್ಲ

ಮೂರು ಅಂಗಡಿಗಳಿಗೆ ನುಗ್ಗಿ ಕಳ್ಳರ ಕೈ ಚಳಕ,ಅಂಗಡಿಯೊಳಗೆ ಹೋದ ಮಾಲೀಕರಿಗೆ ಶಾಕ್, ಆ ರಾತ್ರಿ ನಡೆದಿದ್ದೇನು ?