ಕರಾವಳಿಕ್ರೈಂವೈರಲ್ ನ್ಯೂಸ್

ಮಹಿಳೆಯನ್ನು ಅಲ್ಯೂಮಿನಿಯಂ ಪಾತ್ರೆಯಲ್ಲಿ ಕೂರಿಸಿ ಹೊಳೆ ದಾಟಿಸಿದ ವ್ಯಕ್ತಿ..! ಇಲ್ಲಿದೆ ಮನಕಲಕುವ ಘಟನೆ..!

255

ನ್ಯೂಸ್‌ ನಾಟೌಟ್‌: ಭಾರೀ ಮಳೆಯಿಂದಾಗಿ ದೇಶದ ಹಲವೆಡೆ ಗುಡ್ಡ ಕುಸಿತಗಳು ಮತ್ತು ಪ್ರವಾಹ ಉಂಟಾಗಿದೆ. ಆಂಧ್ರಪ್ರದೇಶದ ಹಳ್ಳಿಯೊಂದರಲ್ಲಿ ಮನಕಲಕುವ ಘಟನೆ ನಡೆದಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧೆಯನ್ನು ದೊಡ್ಡ ಅಲ್ಯೂಮಿನಿಯಂ ಪಾತ್ರೆಯಲ್ಲಿ ಕುಳ್ಳಿರಿಸಿ ಪ್ರವಾಹದ ಹೊಳೆಯನ್ನು ದಾಟಿಸಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಪೇಡದ ಜಾಮಿಗುಡಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಹಿರಿಯ ಮಹಿಳೆಯೊಬ್ಬರು ಅಸ್ವಸ್ಥಗೊಂಡು ಆಸ್ಪತ್ರೆಗೆ ತುರ್ತಾಗಿ ಭೇಟಿ ನೀಡಬೇಕಾಗಿತ್ತು. ಆದರೆ, ನಿರಂತರ ಮಳೆಯಿಂದಾಗಿ ಗ್ರಾಮವು ಜಿಲ್ಲೆಯಿಂದ ಸಂಪರ್ಕ ಕಡಿತಗೊಂಡಿದ್ದರಿಂದ ಆಕೆಗೆ ಪ್ರಯಾಣಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಗ್ರಾಮಸ್ಥರು ಮಹಿಳೆಯನ್ನು ಅಲ್ಯೂಮಿನಿಯಂ ಪಾತ್ರೆಯಲ್ಲಿ ಕುಳ್ಳಿರಿಸಿ ಹೊಳೆಯನ್ನು ದಾಟಿಸಿದ್ದಾರೆ.

ಆಂಧ್ರಪ್ರದೇಶದಲ್ಲಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ನೇತೃತ್ವದ ನೂತನ ಸರ್ಕಾರವು ಆದಿವಾಸಿಗಳು ನಿತ್ಯವೂ ತೊಂದರೆ ಎದುರಿಸುತ್ತಿರುವ ಈ ಗ್ರಾಮಗಳ ಮೂಲಸೌಕರ್ಯಗಳ ಸುಧಾರಣೆಗೆ ಮೊದಲು ಶ್ರಮಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ.

Click

https://newsnotout.com/2024/07/bhagamandala-kodagu-temple-kannada-news/
https://newsnotout.com/2024/07/wayanad-kerala-narendra-modi-kannada-news-landslide-video/
https://newsnotout.com/2024/07/charmadi-kannada-news-landslide-kannada-news-rain-dakshina-kannada/
https://newsnotout.com/2024/07/harshita-and-gunda-love-story-husband-issued-viral-news/
https://newsnotout.com/2024/07/state-govt-kannada-news-beer-price-increase-5-times-from-last-15-months/
See also  ಸುಳ್ಯ : ಕೃಷಿ ಕಾರ್ಯಗಳಿಗಾಗಿ ನೀಡಲಾಗುವ ಉಚಿತ ವಿದ್ಯುತ್‌ ದುರ್ಬಳಕೆಯ ಆರೋಪ;ಮಂಗಳೂರಿನ ಮೆಸ್ಕಾಂ ಜಾಗೃತದಳ ಅಧಿಕಾರಿಗಳಿಂದ ದಾಳಿ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget