ಕರಾವಳಿದೇಶ-ವಿದೇಶವೈರಲ್ ನ್ಯೂಸ್

ಸರ್ಕಾರದಿಂದಲೇ ತಿರುಪತಿ ದೇವಸ್ಥಾನ ಶುದ್ಧೀಕರಣಕ್ಕೆ ತಯಾರಿ..! ಈ ಬಗ್ಗೆ ಆಂಧ್ರ ಮುಖ್ಯಮಂತ್ರಿ ಹೇಳಿದ್ದೇನು..?

ನ್ಯೂಸ್‌ ನಾಟೌಟ್‌: ತಿರುಪತಿ ತಿರುಮಲ ದೇವಸ್ಥಾನದ ಪ್ರಸಾದವಾದ ಲಡ್ಡಿನಲ್ಲಿ ಬಳಸುವ ತಪ್ಪದಲ್ಲಿ ಪ್ರಾಣಿ ಕೊಬ್ಬು ಬಳಸಲಾಗಿದೆ ಎನ್ನುವ ವಿಷಯ ಬೆಳಕಿಗೆ ಬಂದ ಮೇಲೆ ತಿರುಪತಿ ದೇವಸ್ಥಾನದ ಶುದ್ಧೀಕರಣದ ಬಗ್ಗೆಯೂ ಹೆಚ್ಚು ಚರ್ಚೆಯಾಗುತ್ತಿದೆ. ಇದೀಗ ಆಂಧ್ರಪ್ರದೇಶದ ಸರ್ಕಾರವೇ ಶುದ್ಧೀಕರಣಕ್ಕೆ ಬೇಕಾದ ಸಿದ್ಧತೆಗಳನ್ನು ನಾವು ಮಾಡಿಕೊಳ್ಳುತ್ತಿದ್ದೇವೆ. ಈ ಬಗ್ಗೆ ಸನಾತನ ಧರ್ಮದ ಹಿರಿಯರೊಂದಿಗೆ ಚರ್ಚೆ ಮಾಡುತ್ತಿದ್ದೇವೆ ಎಂದು ಸಹ ಹೇಳಿದೆ.

ತಿರುಪತಿಯ ಲಡ್ಡು ತಯಾರಿಕೆಯಲ್ಲಿ ದನದ, ಹಂದಿಯ ಹಾಗೂ ಮೀನಿನ ಎಣ್ಣೆ ಬಳಕೆ ವಿಷಯ ಚರ್ಚೆಯಾಗುತ್ತಿದ್ದಂತೆಯೇ ದೇವಸ್ಥಾನವನ್ನು ಶುದ್ಧೀಕರಿಸಬೇಕು ಎನ್ನುವ ಚರ್ಚೆಗಳು ನಡೆದಿವೆ. ಟಿಟಿಡಿ ಈ ವಿಚಾರವಾಗಿ ಚರ್ಚೆ ನಡೆಸಿದ್ದು ಶೀಘ್ರವೇ ದೇವಸ್ಥಾನದ ಶುದ್ಧೀಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಮಾನವನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ.

ಈ ಸಂಬಂಧ ಸನಾತನ ಧರ್ಮದ ವಿದ್ವಾಂಸರನ್ನು ಸಹ ಸಂಪರ್ಕಿಸಲಾಗುತ್ತಿದೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಅಲ್ಲದೇಮೂರು ದಿನಗಳ ಕಾಲ ಹೋಮ ನಡೆಸುವ ವಿಚಾರವೂ ಸಹ ಚರ್ಚೆಯಾಗಿದೆ. ಶುದ್ಧೀಕರಣ ಪ್ರಕ್ರಿಯೆಯಿಂದ ದೇವರ ಆಶೀರ್ವಾದ ಸಿಗಲಿದ್ದು, ಕ್ಷೇತ್ರದಲ್ಲಿ ಪಾವಿತ್ರ್ಯತೆ ನೆಲೆಸಲಿದೆ ಎನ್ನುವುದು ನಂಬಿಕೆ ಇದರ ಭಾಗವಾಗಿ ಶುದ್ಧೀಕರಣದ ಬಗ್ಗೆ ಗಂಭೀರ ಚರ್ಚೆಗಳು ನಡೆದಿವೆ.
ಭಕ್ತರ ಭಾವನೆಯನ್ನು ನಾವು ಅತ್ಯಂತ ಶ್ರದ್ಧೆಯಿಂದ ಗೌರವಿಸುತ್ತೇವೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದಾರೆ.

Click

https://newsnotout.com/2024/09/muniratna-supporters-threate-to-evidence-kannada-news-case-bengaluru/
https://newsnotout.com/2024/09/kollegala-car-kannada-news-friday-near-bus-stand-police-issue/
https://newsnotout.com/2024/09/digital-upi-payment-innovation-by-auto-driver-kannada-news/
https://newsnotout.com/2024/09/bengaluru-express-train-fire-kannada-news-viral-news-fire/
https://newsnotout.com/2024/09/mangaluru-panamburu-beach-kannada-news-nomore-issue/

Related posts

ಸುಳ್ಯ : ಕೆ.ವಿ.ಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ‘ವೈದ್ಯಕೀಯ ಅಧಿವೇಶನ’,ಕ್ಷಯರೋಗ ನಿರ್ಮೂಲನೆ ಕುರಿತಾಗಿ ವಿಶೇಷ ಕಾರ್ಯಕ್ರಮ

ಶೋಭಾ ಕರಂದ್ಲಾಜೆಗೆ ಅಮಿತ್ ಶಾ ಸರ್ಪ್ರೈಸ್ ಫೋನ್ ಕರೆ..! ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಲ್ಲಿರುವಾಗಲೇ ಕುತೂಹಲ ಮೂಡಿಸಿದ ಆ ಒಂದು ಕರೆ..!ಶೋಭಾ ಕರಂದ್ಲಾಜೆ ಹೇಳಿದ್ದೇನು?

‘ಯುವ’ ಸಿನಿಮಾ ಬಿಡುಗಡೆಯಲ್ಲಿ ಸುಳ್ಯದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ ಭಾಗಿ, ಡಾ. ರಾಜ್ ಕುಮಾರ್ ಕುಟುಂಬಕ್ಕೂ ಕೆವಿಜಿ ಕುಟುಂಬಕ್ಕೂ ಇರುವ ನಂಟೇನು..?