ಕ್ರೈಂಬೆಂಗಳೂರುರಾಜ್ಯವೈರಲ್ ನ್ಯೂಸ್

ಕರ್ನಾಟಕ-ಆಂಧ್ರ ಬಸ್‌ ಗಳ ಓವರ್‌ ಟೆಕ್ ಭರದಲ್ಲಿ 8 ವರ್ಷದ ಬಾಲಕಿ ಸಾವು..! ಆಕೆಯ ಸೋದರ ಮಾವನೂ ದುರಂತ ಅಂತ್ಯ..!

ನ್ಯೂಸ್ ನಾಟೌಟ್: ಕರ್ನಾಟಕ ಹಾಗೂ ಆಂಧ್ರ ಸಾರಿಗೆ ಬಸ್‌ ಗಳು ಓವರ್‌ ಟೆಕ್ ಪೈಪೋಟಿಗೆ ಬಿದ್ದ ಪರಿಣಾಮ ಬೈಕ್‌ ನಲ್ಲಿ ಹೊರಟಿದ್ದ 8 ವರ್ಷದ ಬಾಲಕಿ, ಆಕೆಯ ಸೋದರ ಮಾವ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಗೊಲ್ಲಹಳ್ಳಿ ಗೇಟ್ ಬಳಿ ನಡೆದಿದೆ.

ಮೃತರನ್ನು 8 ವರ್ಷದ ಮೋನಿಕಾ ಹಾಗೂ ಕೆಳಗಿನಜೋಗಹಳ್ಳಿ ನಿವಾಸಿ ವೆಂಕಟೇಶ್ ಎಂದು ಗುರುತಿಸಲಾಗಿದೆ. ಗೌರಿಬಿದನೂರು-ಬೆಂಗಳೂರು ಹೆದ್ದಾರಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಹಿಂದೂಪುರದಿಂದ ಬೆಂಗಳೂರಿಗೆ ಬರುತ್ತಿತ್ತು. ಇದೇ ವೇಳೆ ಆಂದ್ರದ ಎಪಿಎಸ್‌ಆರ್‌ಟಿಸಿ ಬಸ್ ಬಂದಿದ್ದು, ಎರಡು ಬಸ್‌ಗಳ ನಡುವೆ ಓವರ್‌ ಟೆಕ್ ಪೈಪೋಟಿ ನಡೆದಿದೆ.

ಇದೇ ಸಮಯದಲ್ಲಿ 8 ವರ್ಷದ ಬಾಲಕಿ, ಆಕೆಯ ಸೋದರ ಮಾವನ ಜೊತೆ ಬೈಕ್‌ ನಲ್ಲಿ ಹೊರಟಿದ್ದರು. ಬಸ್‌ ಗಳ ಮಧ್ಯೆ ಬೈಕ್ ಸವಾರ ಸಿಲುಕಿದ್ದು, ಎಪಿಎಸ್‌ಆರ್‌ಟಿಸಿ ಬಸ್ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ನೆಲಕ್ಕುರುಳಿದ್ದು, ಬೈಕ್ ಮೇಲೆ ಕೆಎಸ್‌ಆರ್‌ಟಿಸಿ ಬಸ್ ಹರಿದಿದೆ ಎನ್ನಲಾಗಿದೆ.

Click

https://newsnotout.com/2025/01/madikeri-fire-kannada-news-madikeri-infront-of-wine-shop-d/
https://newsnotout.com/2025/01/bollywood-actor-saif-ali-khan-khife-kannada-news-d/
https://newsnotout.com/2025/01/kerala-kannada-news-samadhi-guru-kerala-viral-news-d/
https://newsnotout.com/2025/01/puttur-scooter-collision-kannada-news-car-and-bike/
https://newsnotout.com/2025/01/teacher-and-student-in-m-tech-exam-kannada-news-s-dd/

Related posts

ಉಡುಪಿ ಪೇಟೆಯಲ್ಲಿ ಕಾರಿನೊಳಗೆ ಅನೈತಿಕ ಚಟುವಟಿಕೆ..! ಇಣುಕಿ ನೋಡಿದ ಸಾರ್ವಜನಿಕರು, ಕಾರು ಬಿಟ್ಟು ಜೋಡಿ ಪರಾರಿ..!

“ರಜನಿಕಾಂತ್‌ ನನ್ನನ್ನು ರಹಸ್ಯವಾಗಿ ಮದುವೆಯಾಗಿದ್ದಾರೆ” ಎಂದ ಈ ನಟಿ ಯಾರು?ಏನಿದು ವಿವಾದ..? ಈ ಬಗ್ಗೆ ನಟಿ ಹೇಳಿದ್ದೇನು?

ಬಾಲಿವುಡ್ ನಟಿಯ ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಡೈಮಂಡ್‌ ನೆಕ್ಲೇಸ್‌ ಕಳ್ಳತನ..! ಪ್ಲಾಟ್ ಗೆ ಪೇಯಿಂಟಿಂಗ್‌ ಕೆಲಸಕ್ಕೆ ಬಂದಿದ್ದವನಿಂದ ಕೃತ್ಯದ ಶಂಕೆ..!